ವರದಿಗಾರ-ದೆಹಲಿ: ಕಳೆದ ಎರಡು ವರ್ಷಗಳ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಹಿತ ಸಚಿವರ ಸಂಪತ್ತಿನ ಪ್ರಮಾಣದಲ್ಲಿ ಹೆಚ್ಚಳವಾಗಿರುವುದು ಪ್ರಧಾನಿ ಕಾರ್ಯಾಲಯದ ವೆಬ್ಸೈಟ್ನ ಅಂಕಿಅಂಶಗಳನ್ನು ಉಲ್ಲೇಖಿಸಿ ಮೂಲಗಳು ವರದಿ ಮಾಡಿವೆ.
ಪ್ರಧಾನಿ ನರೇಂದ್ರ ಮೋದಿಯವರ ನಿವ್ವಳ ಸಂಪತ್ತಿನ ಪ್ರಮಾಣ ಶೇಕಡ 41.8ರಷ್ಟು ಹೆಚ್ಚಾಗಿದೆ (1.41 ಕೋಟಿಯಿಂದ 2 ಕೋಟಿ).
ಅದೇ ರೀತಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಸಚಿವ ಸದಾನಂದ ಗೌಡ ಅವರ ಸಂಪತ್ತಿನ ಪ್ರಮಾಣದಲ್ಲಿ ಶೇಕಡ 42.3ರಷ್ಟು ಹೆಚ್ಚಾಗಿದೆ. 2015ರಲ್ಲಿ ಅವರ ಬಳಿ ಇದ್ದ ಸಂಪತ್ತು 4.65ಕೋಟಿ, 2017ರಲ್ಲಿ 6.62 ಕೋಟಿಯನ್ನು ತಲುಪಿದೆ.
2015–17ರ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರ ಸಂಪತ್ತಿನ ಪ್ರಮಾಣದಲ್ಲಿ ಗರಿಷ್ಠ ಹೆಚ್ಚಳ ಕಂಡುಬಂದಿದ್ದರೆ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಸಂಪತ್ತಿನ ಪ್ರಮಾಣ ಇಳಿಕೆಯಾಗಿದೆ.
ಸಂಪತ್ತು ಹೆಚ್ಚಿಸಿಕೊಂಡ ಸಚಿವರ ವಿವರ:
- ನರೇಂದ್ರ ಮೋದಿ – 41.8% ( 1.41 ಕೋಟಿಯಿಂದ 2 ಕೋಟಿ)
- ನರೇಂದ್ರ ಸಿಂಗ್ ತೋಮರ್ – 67.5% ( 53 ಲಕ್ಷದಿಂದ 89 ಲಕ್ಷ)
- ಸದಾನಂದ ಗೌಡ – 42.3% ( 4.65 ಕೋಟಿಯಿಂದ 6.62 ಕೋಟಿ)
- ಚೌಧರಿ ಬೀರೇಂದರ್ ಸಿಂಗ್ – 23.5% ( 7.97 ಕೋಟಿಯಿಂದ 9.85 ಕೋಟಿ)
- ಸುಷ್ಮಾ ಸ್ವರಾಜ್ – 17.4% ( 4.55 ಕೋಟಿಯಿಂದ 5.34 ಕೋಟಿ)
- ವಿ.ಕೆ.ಸಿಂಗ್ – 12.5% (69 ಲಕ್ಷದಿಂದ 78 ಲಕ್ಷ)
- ಅಶೋಕ್ ಗಜಪತಿ ರಾಜು – 11.7% ( 6.98 ಕೋಟಿಯಿಂದ 7.80 ಕೋಟಿ)
- ಮುಖ್ತಾರ್ ಅಬ್ಬಾಸ್ ನಖ್ವಿ – 7.8% ( 99 ಲಕ್ಷದಿಂದ 1.07 ಕೋಟಿ)
