ಜಿಲ್ಲಾ ಸುದ್ದಿ

ವೈಚಾರಿಕ ಭಿನ್ನಮತಗಳಿಗೆ ಕೊಲೆ ಪರಿಹಾರವಲ್ಲ : ಜ್ಯೋತಿ ಗುರುಪ್ರಸಾದ್

ವರದಿಗಾರ ಮಂಗಳೂರು :  ಗೌರಿ ಲಂಕೇಶ್ ಕೇವಲ ಓರ್ವ ಪತ್ರಕರ್ತೆ ಮಾತ್ರವಲ್ಲ, ಆಕೆ ಮಹಿಳಾ ಪರವಾಗಿದ್ದ ಧ್ವನಿಯಾಗಿದ್ದರು, ಮಹಿಳಾ ಹೋರಾಟದ ಮುಂಚೂಣಿಯಲ್ಲಿದ್ದರು. ಅಂತಹಾ ವ್ಯಕ್ತಿಯ ಹತ್ಯೆಯನ್ನು ನಾಗರಿಕ ಸಮಾಜ ಒಪ್ಪಲು ಸಾಧ್ಯವಿಲ್ಲ. ವಿಚಾರಗಳಲ್ಲಿ ಅಭಿಪ್ರಾಯ ವ್ಯತ್ಯಾಸಗಳೇನೇ ಇದ್ದರೂ, ಚರ್ಚೆ ಮಾತುಕತೆಗಳ ಮೂಲಕ ಬಗೆಹರಿಸಿಕೊಳ್ಳಬೇಕು ಅಥವಾ ಚಳವಳಿಗಳ ಮೂಲಕ ವಿರೋಧಿಸಬೇಕು. ಅದು ಬಿಟ್ಟು ಕೊಲೆಯಂತಹಾ ಹೀನ ಕೃತ್ಯಗಳನ್ನು ಹೇಡಿಗಳಷ್ಟೇ ಮಾಡಲು ಸಾಧ್ಯ. ಮಾತ್ರವಲ್ಲ ಕೊಲೆ ಅದಕ್ಕೆ ಪರಿಹಾರವೂ ಅಲ್ಲವೆಂದು ಲೇಖಕಿ ಜ್ಯೋತಿ ಗುರುಪ್ರಸಾದ್ ಇಂದಿಲ್ಲಿ ಹೇಳಿದ್ದಾರೆ.  ಅವರು ಗೌರಿ ಲಂಕೇಶ್ ಹತ್ಯೆಯ ಆರೋಪಿಗಳನ್ನು ಆದಷ್ಟು ಶೀಘ್ರವಾಗಿ ಬಂಧಿಸಿ, ಕಾನೂನಿನ ಕಟಕಟೆಗೆ ತರಬೇಕೆಂದು ಒತ್ತಾಯಿಸಿ ನ್ಯಾಶನಲ್ ವಿಮೆನ್ಸ್ ಫ್ರಂಟ್,   ದ ಕ ಜಿಲ್ಲಾಧಿಕಾರಿ ಬಳಿ ಸಂಘಟಿಸಿದ್ದ  ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು

ಸಭೆಯಲ್ಲಿ ಎನ್ ಡಬ್ಲ್ಯು ಎಫ್ ರಾಷ್ಟ್ರೀಯ ಸಮಿತಿ ಸದಸ್ಯೆ ಶಾಹಿದಾ ಅಸ್ಲಂ, ಕೆ ಸಿ ರೋಡಿನ ಝೀನತ್ ಎಜುಕೇಶನಲ್ ಟ್ರಸ್ಟ್’ನ ಪ್ರಾಂಶುಪಾಲೆ ಮೆಹನಾಝ್, ಯಶೋದಾ, ನಸ್ರಿಯಾ, ಫಾತಿಮಾ ನಸೀಮಾ , ಶಹನಾಝ್, ಮೈಮೂನಾ ಮತ್ತಿತರರು ಉಪಸ್ಥಿತರಿದ್ದರು.

ಪ್ರತಿಭಟನಾ ಸಭೆಯ ನಂತರ ಮಹಿಳಾ ನಾಯಕರು,  ದ ಕ ಜಿಲ್ಲಾಧಿಕಾರಿಗೆ  ಈ ಕುರಿತು ಮನವಿಯನ್ನು ಸಲ್ಲಿಸಿದರು.

 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group