ಲಂಡನ್: ವಿಶ್ವದ ಓಟದ ರಾಜನೆಂದೇ ಪ್ರಖ್ಯಾತಿ ಪಡೆದಿರುವ ಉಸೆನ್ ಬೊಲ್ಟ್ ಕಣ್ಣೀರಿನಿಂದ ಓಟಕ್ಕೆ ವಿದಾಯ ಹೇಳಿದ್ದಾರೆ. ವಿಶ್ವ ಚಾಂಪಿಯನ್ ಶಿಫ್ ನಲ್ಲಿ ತನ್ನ ಪಾಲಿನ ಅಂತಿಮ ಓಟದಲ್ಲಿ ತಾನು ಪ್ರತಿನಿಧಿಸಿದ್ದ ಜಮೈಕಾ ತಂಡಕ್ಕೆ ಗೆಲುವು ತಂದು ಪದಕ ಬಾಚಿಕೊಳ್ಳುವಲ್ಲಿ ಯಶಸ್ವಿ ಕಾಣದೆ ನಿರಾಶೆಗೊಂಡ ಉಸೆನ್ ಬೊಲ್ಟ್ ಕಣ್ಣೀರಿನಿಂದ ತನ್ನ ಓಟಕ್ಕೆ ವಿದಾಯ ಹೇಳಿದ್ದಾರೆ. ಜಮೈಕಾ ತಂಡದ ಪರವಾಗಿ 4×100ಮಿ. ರಿಲೇ ಯಲ್ಲಿ ಓಡಿದ ಉಸೈನ್ ಓಟದ ಮಧ್ಯೆ ಕಾಲಿನ ಸ್ನಾಯು ಸೆಳೆತಕ್ಕೊಳಗಾಗಿ ಮುಗ್ಗರಿಸಿದರು. ಮುಗ್ಗರಿಸುವುದರೊಂದಿಗೆ ಕೂಟದಲ್ಲಿ ಜಮೈಕಾ ತಂಡ ಹೊರಬಿತ್ತು. ಉಸೆನ್ ಬೊಲ್ಟ್ ಕಣ್ಣೀರಿನ ವಿದಾಯಕ್ಕೆ, ಅಭಿಮಾನಿಗಳೂ ಕಣ್ಣೀರಿನಿಂದಲೇ ಗೌರವ ಅರ್ಪಿಸಿದರು.
