ರಾಜ್ಯ ಸುದ್ದಿ

ಕೇಂದ್ರ ಸಚಿವ ಅಲ್ಫೋನ್ಸ್ ಅಲ್ಪಸಂಖ್ಯಾತರ ಪರ ವಾಲಿದರೆ ವಿರೋಧಿಸುವೆನು : ಶಶಿಕಲಾ ಟೀಚರ್

ವರದಿಗಾರ :  ಕೇರಳ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಊಹಾಪೋಹಗಳಿಗೆ ಇಂಬು ನೀಡುವಂತೆ ಹಿಂದೂ ಐಕ್ಯವೇದಿಕೆಯ ಅಧ್ಯಕ್ಷೆ ಶಶಿಕಲಾ ಟೀಚರ್, ಇತ್ತೀಚೆಗೆ ಮೋದಿ ನೇತೃತ್ವದ ಸಚಿವ ಸಂಪುಟದಲ್ಲಿ ಪ್ರವಾಸೋಧ್ಯಮ ರಾಜ್ಯ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಅಲ್ಫೋನ್ಸ್ ಕಣ್ಣಂದಾನಂ ವಿರುದ್ಧ ತೀಕ್ಷ್ಣವಾಗಿ ಹೇಳಿಕೆಯೊಂದನ್ನು ನೀಡಿದ್ದಾರೆ. ಅಲ್ಫೋನ್ಸ್ ಮಂತ್ರಿಯಾಗಿ ಕೇವಲ ಅಲ್ಪ ಸಂಖ್ಯಾತರ ಪರವಾಗಿ ಮಾತ್ರ ಕೆಲಸ ಮಾಡಿದರೆ ನಾನವರನ್ನೂ ವಿರೋಧಿಸುವೆನು ಮತು ವಿಮರ್ಶಿಸುವೆನು ಎಂದು ಶಶಿಕಲಾ ತಿಳಿಸಿದ್ದಾರೆ.

ಕೇಂದ್ರ ಸರಕಾರ ಯಾವ ಆಧಾರ ಮೇಲೆ ಕಣ್ಣಂದಾನಂರನ್ನು ಸಚಿವರನಾಗಿ ಆಯ್ಕೆ ಮಾಡಿದೆ ಎಂದು ತಿಳಿದಿಲ್ಲ. ಆದರೆ ಒಂದು ವರ್ಗದ ಪರವಾಗಿ ಅವರು ವಾಲಿದರೆ ಖಂಡಿತವಾಗಿಯೂ ನಾವು ವಿರೋಧಿಸಬೇಕಾಗುತ್ತದೆ ಎಂದು ಕೋಟ್ಟಾಯಂನ ಪತ್ರಿಕಾಗೋಷ್ಟಿಯೊಂದರಲ್ಲಿ ತಿಳಿಸಿದರು.

ಕಣ್ಣಂದಾನಂ ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿದಾಗ, ರಾಜ್ಯ ಬಿಜೆಪಿಯ ಪರವಾಗಿ ದಶಕಗಳಷ್ಟು ಕಾಲ ಸೇವೆ ಸಲ್ಲಿಸಿದವರನ್ನು ಕಡೆಗಣಿಸಲಾಗಿದೆಯೆಂದು ರಾಜ್ಯ ಬಿಜೆಪಿ ನಾಯಕರು ದೂರಿದ್ದರು. ಕಣ್ಣಂದಾನಂ ಸಚಿವರಾದ ನಂತರ ಮೊದಲ ಬಾರಿಗೆ ಕೇರಳಕ್ಕೆ ಭೇಟಿ ನೀಡಿದಾಗ ಅಲ್ಲಿನ ರಾಜ್ಯ ನಾಯಕರು ಈ ಕುರಿತು ಬಹಳಷ್ಟು ಅನಾಸ್ಥೆ ತೋರಿದ್ದರು. ಕೇಂದ್ರ ಬಿಜೆಪಿ ಮಧ್ಯಪ್ರವೇಶಿಸಿದ ನಂತರ ಕೇಂದ್ರ ಸಚಿವರನ್ನು ಸ್ವಾಗತಿಸಲು ರಾಜ್ಯ ಬಿಜೆಪಿಯ ಹಿರಿಯ ನಾಯಕರು ನಿರ್ಧರಿಸಿದ್ದರು. ಆದರೂ ಒಳಗೊಳಗೆ ಅಸಾಮಾಧಾನ ಹೊಗೆಯಾಡುತ್ತಲೇ ಇತ್ತು.

1979 ರ ಸಾಲಿನ IAS ಅಧಿಕಾರಿಯಾಗಿರುವ ಕಣ್ಣಂದಾನಂ, 2006 ರಲ್ಲಿ ಸೇವೆಯಿಂದ ಸ್ವಯಂ ನಿವೃತ್ತಿ ಹೊಂದಿ,  ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಮ್ಯುನಿಸ್ಟ್ ಪಕ್ಷದ ಬೆಂಬಲದೊಂದಿಗೆ ವಿಧಾನಸಭೆ ಪ್ರವೇಶಿಸಿದ್ದರು. ನಂತರ ನಡೆದ ಬೆಳವಣಿಗೆಯಲ್ಲಿ ಬಿಜೆಪಿ ಪಕ್ಷದೊಂದಿಗೆ ತನ್ನ ನಿಷ್ಟೆ ಬದಲಾಯಿಸಿದ್ದರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group