ಅನಿವಾಸಿ ಕನ್ನಡಿಗರ ವಿಶೇಷ

ಪ್ರತಿರೋಧ ಸಮಾವೇಶದ ಯಶಸ್ಸು ಮುಂದಿನ ಕಾರ್ಯ ಯೋಜನೆಗೆ ನಾಂದಿಯಾಗಲಿ : ಬಹ್ರೈನ್ ಇಂಡಿಯಾ ಫ್ರಾಟರ್ನಿಟಿ ಫೋರಂ

ವರದಿಗಾರ :  ಪ್ರಗತಿಪರ ಚಿಂತಕಿ, ಸತ್ಯವನ್ನು ದೈರ್ಯದಿಂದ ಬರೆಯುವ ಅನುಭವಿ ಪತ್ರಕರ್ತೆ ಮತ್ತು ಲಂಕೇಶ್ ಪತ್ರಿಕೆಯ ಸಂಪಾದಕಿ ಗೌರಿ ಲಂಕೇಶ್ ಅವರನ್ನು ಅಮಾನವೀಯವಾಗಿ, ನಿರ್ದಯವಾಗಿ ಹತ್ಯೆ ಮಾಡಿದ್ದಾರೆ. ಆತ್ಮಸಾಕ್ಷಿಯ ದೈರ್ಯಶಾಲಿ ಪತ್ರಕರ್ತೆ ಮತ್ತು ಸಾಮಾಜಿಕ ಕಾರ್ಯಕರ್ತೆ ಗೌರಿ ಲಂಕೇಶ್ ಅವರನ್ನು ಸಾಯಿಸಲಾಗಿದೆ ಎಂಬ ಸುದ್ದಿಯು ಬಹಳ ಆಘಾತಕಾರಿ ಹಾಗೂ ಕಳವಳಕಾರಿ ಸಂಗತಿಯಾಗಿದೆ.

ಈ ಹತ್ಯೆಯು ಪ್ರಜಾಪ್ರಭುತ್ವದ ಹತ್ಯೆಯಾಗಿದೆ. ಇದು ನಮ್ಮ ದೇಶದಲ್ಲಿರುವ ಅಸಹಿಷ್ಣುತೆಯನ್ನು ತೋರಿಸುತ್ತದೆ.ಇದು ಅತ್ಯಂತ ಖಂಡನೀಯ ಮತ್ತು ನಾನು ಅತ್ಯಂತ ಕಟು ಶಬ್ದದಿಂದ ಖಂಡಿಸುತ್ತೇನೆ. ವೈಚಾರಿಕತೆಯನ್ನು ವಿಚಾರಗಳಿಂದ ಎದುರಿಸಲಾಗದ ಹೇಡಿಗಳು ಎಸಗಿದಂತ ಕೃತ್ಯವಾಗಿದೆ. ನಮ್ಮ ದೇಶದ ಜಾತ್ಯಾತೀತ ಮೌಲ್ಯಗಳಿಗಾಗಿ ಹೋರಾಡಿದ ಹಾಗೂ ಕೋಮುವಾದಿ ಫ್ಯಾಸಿಸಂ ವಿರುದ್ಧ ರಾಜಿಯಾಗದೆ ನಿಷ್ಟೆಯಿಂದ, ದೈರ್ಯದಿಂದ ಪಟ್ಟುಹಿಡಿದ ಹೋರಾಟಕ್ಕಾಗಿ ಅವರು ನೆನಪಿಸಿಕೊಳ್ಳುತ್ತಾರೆ. ಪತ್ರಿಕೋದ್ಯಮದಿಂದ ಕೋಮುವಾದವನ್ನು ದಿಟ್ಟವಾಗಿ ಎದುರಿಸುತ್ತಿದ್ದರು. ಇದರಿಂದಾಗಿ ಅವರು ಹಲವಾರು ಕೋಮು ವಿಕೃತಿಯ ಮನೋಭಾವ ಇರುವವರ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಹತ್ಯೆಯಿಂದ ಅವರ ವೈಚಾರಿಕತೆಯು ಯವತ್ತೂ ಸಾಯಲಾರದು. ಅದು ಹೆಚ್ಚು ಪ್ರಮಾಣದಲ್ಲಿ ನಮ್ಮ ದೇಶದಲ್ಲಿ ಬೆಳೆಯಲಿದೆ. ಈ ಹುತಾತ್ಮತೆಯು ಹೆಚ್ಚು ಹೆಚ್ಚು ಜನರನ್ನು ಅವರ ವೈಚಾರಿಕತೆ, ಸಾಮಾಜಿಕ ಕಳಕಳಿ ಮತ್ತು ಕೋಮುವಾದದ ವಿರುದ್ಧ ಹೋರಾಟಕ್ಕೆ ಆಕರ್ಷಿತರನ್ನಾಗಿ ಮಾಡಲಿದೆ.

ಅವರನ್ನು ಕೊಂದ ದುಷ್ಕರ್ಮಿಗಳ ಪರವಾಗಿ ಮಾತನಾಡುವ ಮತ್ತು ಅವರು ಮರಣ ಹೊಂದಿದ ನಂತರವು ನಿಂದಿಸುವುದು ಅಮಾನವೀಯ ಮತ್ತು ಹೀನ ಕೃತ್ಯವಾಗಿದೆ. ಇದರಿಂದ ಅಸಹಿಷ್ಣುತೆ ಮತ್ತು ಕೋಮು ವಿಕೃತಿಯ ದುಷ್ಟತನ ಎದ್ದು ಕಾಣುತ್ತದೆ. ಸರಕಾರವು ತನಿಖೆಯನ್ನು ತೀವ್ರಗೊಳಿಸಿ ಈ ದುಷ್ಕೃತ್ಯ ಎಸಗಿದವರನ್ನು ಹಾಗೂ ಇದರ ಹಿಂದಿರುವ ಕಾಣದ ಕೈಗಳನ್ನು ಕಾನೂನಿನ ಮತ್ತು ಜನರ ಮುಂದೆ ತರಬೇಕಾಗಿದೆ ಎಂದು ಬಹ್ರೈನ್ ಇಂಡಿಯಾ ಫ್ರಾಟೆರ್ನಿಟಿ ಫೋರಂ ಕರ್ನಾಟಕ ಘಟಕವು ಈ ಮೂಲಕ ಸರಕಾರವನ್ನು ಒತ್ತಾಯಿಸುತ್ತದೆ.  ಅವರ ಕುಟುಂಬ, ಸ್ನೇಹಿತರು ಮತ್ತು ಸಹೋದ್ಯೋಗಿಗಳಿಗೆ ನಮ್ಮ ಸಾಂತ್ವನವನ್ನು ವ್ಯಕ್ತಪಡಿಸುತ್ತಿದ್ದೇವೆ.

ನಿನ್ನೆ ಬೆಂಗಳೂರಿನ ಪ್ರತಿರೋಧ ಸಮಾವೇಶದ ಯಶಸ್ಸಿನಿಂದ ಯಾರೂ ಮೈ ಮರೆಯದಿರೋಣ. ಏಕೆಂದರೆ ಫ್ಯಾಷಿಸಂ ಯಾವ ಸಮಯದಲ್ಲಿ ಬೇಕಾದರೂ ತನಗೆ ಬೇಡದವರನ್ನು ಮತ್ತು ತನ್ನ ವಿಚಾರಗಳನ್ನು ಒಪ್ಪದವರನ್ನು ಆಹುತಿ ತೆಗೆದುಕೊಳ್ಳಬಹುದು. ಇಂತಹ ವಿಷಮ ಪರಿಸ್ಥಿತಿಯಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದಿದ್ದು, ಫ್ಯಾಷಿಸಂನ್ನು ಎದುರಿಸಬೇಕಾಗಿದೆ ಮತ್ತು ಮುಂದಿನ ಕಾರ್ಯಸೂಚಿಗಳ ಕುರಿತು ಚರ್ಚಿಸಬೇಕಾಗಿದೆ ಎಂದು ಬಹ್ರೈನ್ ಇಂಡಿಯಾ ಫ್ರಾಟರ್ನಿಟಿ ಫೋರಂ, ಕರ್ನಾಟಕ ಘಟಕದ ಪ್ರಧಾನ ಕಾರ್ಯದರ್ಶಿ ಅಥಾವುಲ್ಲ ಸುಳ್ಯ, ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group