ವರದಿಗಾರ-ಶಿವಮೊಗ್ಗ: ಜಾನುವಾರು ಸಾಗಿಸುತ್ತಿದ್ದ ವಾಹನವನ್ನು ತಡೆದು ಸಾಗಟದಲ್ಲಿದ್ದವರ ಮೇಲೆ ಗೋರಕ್ಷಕರು ಹಲ್ಲೆ, ಹತ್ಯೆ ನಡೆಸುವ ಪ್ರಕ್ರಿಯೆಗಳು ನಡೆಯುತ್ತಿರುವ ಸಂದರ್ಭದಲ್ಲೇ, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಜಾನುವಾರು ಸಾಗಿಸುತ್ತಿದ್ದ ವಾಹನವನ್ನು ತಡೆದು ಸಾಗಟದಲ್ಲಿದ್ದವರ ಮೇಲೆ ಹಲ್ಲೆ ನಡೆಸಲು ಬಂದ ಗೋರಕ್ಷಕರ ಮೇಲೆ ಸಾಗಾಟಗಾರರು ಮತ್ತು ಸಾರ್ವಜನಿಕರು ತಿರುಗೇಟು ನೀಡಿರುವ ವರದಿ ತಡವಾಗಿ ಬೆಳಕಿಗೆ ಬಂದಿದೆ.
ಶಿರಾಳಕೊಪ್ಪದಿಂದ 30 ಕ್ಕೂ ಅಧಿಕ ಜಾನುವಾರುಗಳನ್ನು ಲಾರಿಯಲ್ಲಿ ತುಂಬಿಸಿಕೊಂಡು ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಪಡೆದ ಐದು ಗೋರಕ್ಷಕರ ತಂಡ ವಾಹನವನ್ನು ತಡೆದು ಸಾಗಾಟಗಾರರನ್ನು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭ ಮಾತಿಗೆ ಮಾತು ಬೆಳಿದಿದ್ದು, ಎರಡು ತಂಡಗಳ ಮದ್ಯೆ ಸಂಘರ್ಷ ನಡೆದಿದೆ. ವಿಷಯ ತಿಳಿದ ಸಾರ್ವಜನಿಕರೂ ಸ್ಥಳಕ್ಕೆ ಬಂದಿದ್ದು, ಪ್ರಶ್ನಿಸಲು ಬಂದ ತಂಡದ ಮೇಲೆ ಥಳಿಸಿದ್ದಾರೆ.
ಹಲ್ಲೆಗೊಳಗಾದವರು ಆಸ್ಪತ್ರೆಗೆ ದಾಖಲಾಗಿದ್ದು, ಗೋರಕ್ಷಕರು ನೀಡಿದ ದೂರಿನ ಮೇರೆಗೆ ಶಿರಾಳಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
