ಸುತ್ತ-ಮುತ್ತ

ಪ್ರಾರ್ಥನೆಗೆ ಆಯುಧಕ್ಕಿಂತಲೂ ಹರಿತವಾದ ಶಕ್ತಿಯಿದೆ : ಕಾವಲ್ ಕಟ್ಟೆ ಹಝ್ರತ್

ತಲ್ವಾರ್ ಗಿಂತ ಹರಿತವಾದ ಶಕ್ತಿ ಪ್ರಾರ್ಥನೆಯಲ್ಲಿದೆ, ಎಲ್ಲರೂ ಬರ್ಮಾದ ರೊಹಿಂಗ್ಯಾ ಮುಸ್ಲಿಮರಿಗಾಗಿ ಪ್ರಾರ್ಥಿಸಿರಿ ಎಂದು  ಅಲ್ ಖಾದಿಸ ಎಜುಕೇಶನಲ್ ಅಕಾಡೆಮಿ  ಅಧ್ಯಕ್ಷ ಹಝ್ರತ್ ಫಾಝಿಲ್ ರಝ್ವಿ ಕಾವಳಕಟ್ಟೆ ಕರೆ ನೀಡಿದ್ದಾರೆ. ಶುಕ್ರವಾರದಂದು ಮದೀನಾದ ಕೆಸಿಎಫ್ ಭವನದಲ್ಲಿ ನಡೆದ ಅಲ್ ಖಾದಿಸ ಎಜುಕೇಶನಲ್ ಅಕಾಡೆಮಿ ಮದೀನಾ ಘಟಕದ ಮಾಸಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಬರ್ಮಾದಲ್ಲಿ ಮುಸ್ಲಿಮರು ಎನ್ನುವ ಕಾರಣ ಮಕ್ಕಳು ಸ್ತ್ರೀಯರು, ಹಿರಿಯರೆನ್ನದೇ ಸಾಮೂಹಿಕ ಹತ್ಯೆ ನಡೆಸಲಾಗುತ್ತಿದೆ. ಸತ್ತ ನಂತರವು  ಮೃತ ದೇಹಗಳನ್ನು ಚಾಕು ಚೂರಿಯಿಂದ ಇರಿಯಲಾಗುತ್ತಿದ್ದು ಕಷ್ಟ ಗಳನ್ನು ಸಹಿಸುವ ಶಕ್ತಿ, ರೊಹಿಂಗ್ಯಾ ಮುಸ್ಲಿಮರಿಗೆ ಅಲ್ಲಾಹನು ನೀಡಲಿ.  ಅಲ್ಲಾಹನ ದೀನಿಗಾಗಿ ಶಹೀದ್ ಆಗುತ್ತಿರುವವರಿಗೆ ಮೋಕ್ಷ ಸಿಗಲಿ ಎಂದು ಪ್ರಾರ್ಥಿಸಿದ ಅವರು ಹಲ್ಲೆಗೊಳಗಾಗುತ್ತಿರುವ ರೊಹಿಂಗ್ಯಾ ಮುಸ್ಲಿಮರಿಗೆ ಶಾಂತಿ, ಸಮಾಧಾನ ಸಿಗಲು ಪ್ರಾರ್ಥಿಸಿದರು.
ಇದೇ ವೇಳೆ ಅಲ್ ಖಾದಿಸ ಎಜುಕೇಶನಲ್ ಅಕಾಡೆಮಿ ಮದೀನಾ ಘಟಕ ವತಿಯಿಂದ ಹಝ್ರತ್ ಕಾವಳಕಟ್ಟೆ ಅವರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು. ಈ ವೇಳೆ ಅಲ್ ಖಾದಿಸ ಎಜುಕೇಶನಲ್ ಅಕಾಡೆಮಿ ಮದೀನಾ ಘಟಕದ ಅಧ್ಯಕ್ಷ ಪಾರೂಕ್ ನಈಮಿ ಸರಳಿಕಟ್ಟೆ, ಸಯ್ಯದ್ ಖ್ವಾಜ ಮುಹಮ್ಮದ್ ಮುಹಮ್ಮದುಲ್ ಹುಸೈನಿ ಅಲ್ ಖಾದಿರಿ ಹೈದರಬಾದ್ , ಅಶ್ರಫ್ ಸಖಾಫಿ ನೂಜಿ ಮತ್ತಿತರರು ಉಪಸ್ಥಿತರಿದ್ದರು. ಅಲ್ ಖಾದಿಸ ಎಜುಕೇಶನಲ್ ಅಕಾಡೆಮಿಯ ಯೂಸುಫ್ ಕೆ.ಹೆಚ್. ಮದನಿ ಕಾರ್ಯಕ್ರಮ ನಿರೂಪಿಸಿದರು.
ವರದಿ : ಹಕೀಂ ಬೋಳಾರ್
'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group