ರಾಜ್ಯ ಸುದ್ದಿ

ಗೌರಿ ಹತ್ಯೆ ಸಂಭ್ರಮ, ಸಮರ್ಥನೆ : ಸಾಮಾಜಿಕ ಪೋಸ್ಟ್’ಗಳ ಮೇಲೂ ಇದೆ ತನಿಖಾ ತಂಡದ ಕಣ್ಣು!

ವರದಿಗಾರ : ದುಷ್ಕರ್ಮಿಗಳಿಂದ ಹತ್ಯೆಯಾದ ಸಾಮಾಜಿಕ ಕಾರ್ಯಕರ್ತೆ ಗೌರಿ ಲಂಕೇಶ್ ಹತ್ಯೆಯಾದ ಕ್ಷಣದಿಂದಲೇ ಸಾಮಾಜಿಕ ತಾಣಗಳಲ್ಲಿ ಅದನ್ನು ಸಮರ್ಥಿಸುವ ಮತ್ತು ಗೌರಿಯವರದ್ದೆಂದು ಹೇಳಲಾದ ಹಿಂದೂ ಧರ್ಮದ ಭಾವನೆಗಳಿಗೆ ದಕ್ಕೆ ಬರುವಂತಹಾ ಹಳೆಯ ಅಪೂರ್ಣ  ವೀಡಿಯೋ ಕ್ಲಿಪ್ಪಿಂಗ್, ಅವರು ಮಾಡಿದಂತಹಾ ಹಳೆಯ ಭಾಷಣಗಳ ಪತ್ರಿಕಾ ವರದಿಗಳ ಕಟ್ಟಿಂಗ್ಸ್’ಗಳು, ಗೌರಿಯವರ ಪತ್ರಿಕೆಗಳಲ್ಲಿ ಬಂದಂತಹಾ ವರದಿಗಳ ಫೋಟೋ, ಗೌರಿಯವರು ಟೀಕಿಸಿದ ಅಥವಾ ವಿಮರ್ಶಿಸಿದ ರಾಜಕಾರಣಿಗಳ ಪತ್ರಿಕಾ ವರದಿಗಳ ಎಲ್ಲಾ ಫೋಟೋಗಳನ್ನು ತೆಗೆದು ಅವುಗಳೆಲ್ಲವನ್ನೂ ಸಾಮಾಜಿಕ ತಾಣಗಳಲ್ಲಿ ಬಹಳ ವ್ಯವಸ್ಥಿತವಾಗಿ ಅಪ್’ಲೋಡ್ ಮಾಡಲಾಗಿದೆ.

 

ವಿಶೇಷವೆಂದರೆ ಗೌರಿಯವರ ಮಂಗಳೂರಿನ ಆ ವೀಡಿಯೋ ಸಾಮಾಜಿಕ ತಾಣದಲ್ಲಿ ಹೆಚ್ಚಾಗಿ ಬಳಸಲ್ಪಡುವ ವಾಟ್ಸಪ್ಪ್ ಮತ್ತು ಫೇಸ್’ಬುಕ್’ಗಳು ಹೆಚ್ಚು ಚಾಲ್ತಿಯಲ್ಲಿಲ್ಲದ ಸಮಯದ್ದಾಗಿದ್ದವು ಮಾತ್ರವಲ್ಲ ಅದು ಹೆಚ್ಚಾಗಿ ಎಲ್ಲೂ ಕಂಡು ಬರದಂತಹಾ ಒಂದು ವೀಡಿಯೋ ಆಗಿತ್ತು. ಅಷ್ಟೊಂದು ಕ್ಷಿಪ್ರಗತಿಯಲ್ಲಿ ಜಾಲ ತಾಣದಾದ್ಯಂತ ಹರಡಿದ ಈ ಎಲ್ಲಾ ಪೋಸ್ಟ್’ಗಳ ಉದ್ದೇಶ ಗೌರಿ ಲಂಕೇಶರ ವೈಯುಕ್ತಿಕ ತೇಜೋವಧೆ, ಅವರ ಹತ್ಯೆಯ ಸಮರ್ಥನೆ ಮತ್ತು ಹತ್ಯೆಯನ್ನು ಸಮರ್ಥಿಸಿ ಸಂಭ್ರಮಿಸಿದ ಕಿರಾತಕರನ್ನು ಬೆಂಬಲಿಸುವ ಉದ್ದೇಶವನ್ನು ಹೊಂದಿತ್ತೆನ್ನುವುದು ಸ್ಪಷ್ಟವಾಗುತ್ತಿದೆ. ಹಾಗಾದರೆ ಆ ಮಟ್ಟದಲ್ಲಿ ಸಂಪೂರ್ಣ ತಯಾರಾಗಿದ್ದುಕೊಂಡು ಒಂದು ವ್ಯವಸ್ಥಿತ ‘ಆನ್’ಲೈನ್ ಅಭಿಯಾನ’ ನಡೆಸಿದ ಶಕ್ತಿಗಳಿಗೆ ಗೌರಿಯವರ ಹತ್ಯೆ ಮೊದಲೇ ತಿಳಿದಿತ್ತೇ ? ಅದನ್ನು ಗಮನದಲ್ಲಿಟ್ಟುಕೊಂಡೇ ಅವರು ಈ ಎಲ್ಲಾ ಹಳೆಯ “ಸಾಮಾಗ್ರಿ”ಗಳನ್ನು ತಯಾರಿರಿಸಿಕೊಂಡಿದ್ದರೇ? ಈ ಕುರಿತಾಗಿನ ಆಯಾಮದಲ್ಲೂ ಸರ್ಕಾರ ನೇಮಿಸಿದ ವಿಶೇಷ ತನಿಖಾ ತಂಡ (SIT) ತನಿಖೆ ನಡೆಸಲಿದೆ ಎಂದು ತಿಳಿದು ಬಂದಿದೆ.

ಗೌರಿಯವರ ಹಳೆಯ ಆ ಅಪೂರ್ಣ ವೀಡಿಯೋ ಅದೆಷ್ಟರ ಮಟ್ಟಿಗೆ ಸಜ್ಜುಗೊಳಿಸಲಾಗಿತ್ತೆಂದರೆ ಅದು ಶೇರ್ ಆದ ತಕ್ಷಣದಿಂದ ಸಾವಿರಾರು ಬಾರಿ ವೆಬ್ ಪೋರ್ಟಲ್’ಗಳಲ್ಲಿ, ವಾಟ್ಸಪ್ , ಫೇಸ್ಬುಕ್ ಸೇರಿದಂತೆ ಇತರೆ ಜಾಲತಾಣಗಳಲ್ಲಿ ಮರು ಶೇರ್ ಆದವು.  ಇದರಿಂದ ಅಲರ್ಟ್ ಆಗಿರುವ ಪೊಲೀಸರು ಸಾಮಾಜಿಕ ತಾಣಗಳ ಮೂಲಕ ಸಿಗುವ ಸುಳಿವುಗಳ ಕುರಿತೊಂದು ಕಣ್ಣಿಟ್ಟಿದ್ದಾರೆಂದೂ ತಿಳಿದುಬಂದಿದೆ.

 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group