ವರದಿಗಾರ: ಇದೀಗ ಭಾರತದ ಆಶ್ರಯದಲ್ಲಿರುವ ಟಿಬೆಟಿಯನ್ ಬೌದ್ಧ ಆಧ್ಯಾತ್ಮಿಕ ಗುರು ದಲಾಯಿ ಲಾಮ ಮ್ಯನ್ಮಾರಿನಲ್ಲಿ ರೋಹಿಂಗ್ಯಾ ಮುಸ್ಲಿಮರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯದ ಬಗ್ಗೆ ಮಾತನಾಡಿದ್ದಾರೆ.
ಮುಸ್ಲಿಮರ ಮೇಲೆ ದೌರ್ಜನ್ಯ ನಡೆಸುವವರು ನೆನಪಿಸಬೇಕಾದದ್ದೇನೆಂದರೆ, ಬುದ್ಧನು ಇಂತಹ ಸಂದರ್ಭದಲ್ಲಿ ದೌರ್ಜನ್ಯಕ್ಕೊಳಗಾಗುತ್ತಿರುವ ಮುಸ್ಲಿಮರನ್ನೇ ಸಹಾಯ ಮಾಡಬಹುದಷ್ಟೆ ಎಂದು ದಲಾಯಿಲಾಮ ಹೇಳಿದರು.
ತನಗೆ ತುಂಬಾ ದುಃಖವಾಗುತ್ತಿದೆ ಎಂದೂ ಅವರು ಹೇಳಿದರು.
ಸುಮಾರು 3 ಲಕ್ಷ ರೋಹಿಂಗ್ಯಾ ಮುಸ್ಲಿಮರು ಹಿಂಸಾಪೀಡಿತ ರಾಖೈನ್ ಪ್ರದೇಶದಿಂದ ಪಲಾಯನಗೈದಿದ್ದಾರೆ.
ಮ್ಯನ್ಮಾರಿನ ಭದ್ರತಾ ಪಡೆಗಳ ಮೇಲೆ ಸಾಮೂಹಿಕ ಅತ್ಯಾಚಾರ, ಹತ್ಯೆಗಳು ಹಾಗೂ ಸಾವಿರಾರು ರೋಹಿಂಗ್ಯಾ ಗ್ರಾಮಗಳನ್ನು ನಾಶಪಡಿಸಿದ ಆರೋಪಗಳಿವೆ.
The Dalai Lama has said the Buddha would have helped Muslims in Myanmar. pic.twitter.com/Q63ca4U8HJ
— Channel 4 News (@Channel4News) September 10, 2017
