ರಾಜ್ಯ ಸುದ್ದಿ

ಗೌರಿ ಲಂಕೇಶ್ ಹತ್ಯೆಯ ವಿರುದ್ಧ ನಾಳಿನ ಪ್ರತಿರೋಧ ಸಮಾವೇಶಕ್ಕೆ 50 ಸಾವಿರ ಜನ ಭಾಗವಹಿಸುವ ನಿರೀಕ್ಷೆ

ವರದಿಗಾರ-ಬೆಂಗಳೂರು: ಸಾಮಾಜಿಕ ಹೋರಾಟಗಾರ್ತಿ, ಪ್ರಗತಿಪರ ಚಿಂತಕಿ, ಪತ್ರಕರ್ತೆ ಗೌರಿ ಲಂಕೇಶ್‌ ರವರ ಹತ್ಯೆಯ ವಿರುದ್ಧ”ನಾನು ಗೌರಿ, ನಾವೆಲ್ಲರೂ ಗೌರಿ” ಘೋಷಣೆಯೊಂದಿಗೆ ಸೆಪ್ಟೆಂಬರ್ 12(ನಾಳೆ) ರಂದು ನಗರದ ಸೆಂಟ್ರಲ್‌ ಕಾಲೇಜು ಮೈದಾನದಲ್ಲಿ ಗೌರಿ ಲಂಕೇಶ್‌ ಹತ್ಯೆ ವಿರೋಧಿ ಹೋರಾಟ ವೇದಿಕೆ ವತಿಯಿಂದ ಬೃಹತ್ ಪ್ರತಿರೋಧ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಹಾಗೂ ಸಮಾವೇಶದ ಅಂಗವಾಗಿ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಮೈದಾನದವರೆಗೆ ಬೆಳಿಗ್ಗೆ 10.30ರಿಂದ ಮೆರವಣಿಗೆ ನಡೆಯಲಿದೆ.

ಈ ಖಂಡನಾ ಪ್ರತಿರೋಧ ಸಮಾವೇಶದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಮತ್ತು ವಿವಿಧ ಜಿಲ್ಲೆಗಳಿಂದ ಸುಮಾರು 50 ಸಾವಿರ ಪ್ರತಿಭಟನಾಕಾರರು ಭಾಗವಹಿಸುವ ನಿರೀಕ್ಷೆ ಇದೆ ಎಂದು ವೇದಿಕೆಯ ಸಂಚಾಲಕಿ ಕೆ.ನೀಲಾ ತಿಳಿಸಿದ್ದಾರೆ.

ಈ ಖಂಡನಾ ಪ್ರತಿರೋಧ ಸಮಾವೇಶದಲ್ಲಿ ಕೋಮು ಸೌಹಾರ್ದ ಹೋರಾಟಗಾರ್ತಿ ತೀಸ್ತಾ ಸೆಟಲ್‌ವಾಡ್‌, ಸ್ವರಾಜ್‌ ಇಂಡಿಯಾದ ಯೋಗೇಂದ್ರ ಯಾದವ್‌, ಪ್ರಶಾಂತ ಭೂಷಣ್‌, ಸಾಕ್ಷ್ಯ ಚಿತ್ರ ನಿರ್ಮಾಪಕರಾದ ಆನಂದ್‌ ಪಟವರ್ಧನ್, ರಾಕೇಶ್‌ ಶರ್ಮ, ಪತ್ರಕರ್ತರಾದ ಪಿ.ಸಾಯಿನಾಥ್‌, ಸಾಗರಿಕಾ ಘೋಷ್‌, ಗುಜರಾತ್ ಊನಾ ಚಳುವಳಿಯ ನೇತಾರ ದಲಿತ ಹೋರಾಟಗಾರ ಜಿಗ್ನೇಶ್‌ ಮೇವಾನಿ, ಹೋರಾಟಗಾರ್ತಿ ಮೇಧಾ ಪಾಟ್ಕರ್‌ ಮತ್ತು ಕವಿತಾ ಕೃಷ್ಣನ್‌, ಚಿತ್ರನಟ ಪ್ರಕಾಶ್‌ ರೈ, ಸಿಪಿಎಂ ಮುಖಂಡ ಸೀತಾರಾಮ್‌ ಯೆಚೂರಿ, ದಕ್ಷಿಣಾಯನದ ಪ್ರೊ.ಗಣೇಶ್ ಎನ್.ದೇವಿ, ಸಾಹಿತಿ ಗಿರೀಶ ಕಾರ್ನಾಡ ಭಾಗವಹಿಸಲಿದ್ದಾರೆ ಎಂದು ಕೆ.ನೀಲಾ ತಿಳಿಸಿದ್ದಾರೆ.

ಸಾಂವಿಧಾನಿಕ ಮೌಲ್ಯಗಳ ಹಾಗೂ ಬಹುಸಂಸ್ಕೃತಿಯ ಮೇಲಿನ ದಾಳಿಗೆ ಹಾಡು, ಕಲಾಕೃತಿಗಳ ಮೂಲಕವೂ ಪ್ರತಿರೋಧ ವ್ಯಕ್ತಪಡಿಸಲಾಗುವುದು ಎಂದು ಹೇಳಿದ್ದಾರೆ.

ಹತ್ಯೆ ಖಂಡಿಸಿ ಪ್ರತಿರೋಧ ಸಮಾವೇಶಕ್ಕೆ ರಾಜ್ಯದ ವಿವಿಧ ಸಂಘ-ಸಂಸ್ಥೆಗಳು, ರಾಜಕೀಯ ಪಕ್ಷಗಳು, ವಿದ್ಯಾರ್ಥಿ ಸಂಘಟನೆಗಳು ಕೈ ಜೋಡಿಸಿದ್ದು,  ಸಮಾವೇಶವನ್ನು ಯಶಸ್ವಿಗೊಳಿಸಲು ಕರೆ ನೀಡಿದೆ.

 

 

 

 

ಮೋದಿ ಸರಕಾರವು ರೈತ ವಿರೋಧಿಯೇ?

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group