ರಾಜ್ಯ ಸುದ್ದಿ

ಗೌರಿ ಹತ್ಯೆ-ಭಯೋತ್ಪಾದಕ ಕೃತ್ಯ: ನಟ ಚೇತನ್‌

ವರದಿಗಾರ-ಬೆಂಗಳೂರು: ಧಾರ್ಮಿಕ ಮೂಲಭೂತವಾದಿ ಶಕ್ತಿಗಳ ವಿರುದ್ಧ ಗೌರಿ ಲಂಕೇಶ್ ನಿರ್ಭಿತಿಯಿಂದ ಧ್ವನಿ ಎತ್ತಿದ್ದರು. ಅದು ಸಂಘ ಪರಿವಾರವಾಗಿರಬಹುದು ಅಥವಾ ಇನ್ನಿತರ ಯಾವುದೇ ಸಂಘಟನೆಗಳಿರಬಹುದು. ಯಾರದೇ ಭಯವಿಲ್ಲದೆ ಸತ್ಯಪರ ದೃಢವಾಗಿದ್ದರು. ಧಾರ್ಮಿಕ ಅಥವಾ ರಾಜಕೀಯ ಸಿದ್ಧಾಂತದ ಹೆಸರಲ್ಲಿ ವ್ಯಕ್ತಿಯನ್ನು ಹತ್ಯೆ ಮಾಡುವುದು ಭಯೋತ್ಪಾದನೆಯಾಗಿದೆ. ಈ ನಿಟ್ಟಿನಲ್ಲಿ ಗೌರಿ ಹತ್ಯೆಯೂ ಭಯೋತ್ಪಾದಕ ಕೃತ್ಯವೆಂದು ಕನ್ನಡ ಚಿತ್ರರಂಗದ ನಟ ಚೇತನ್‌ ಹೇಳಿದ್ದಾರೆ.

ಅವರು ಗೌರಿ ಲಂಕೇಶ್‌ ಹತ್ಯೆ ವಿರೋಧಿ ಹೋರಾಟ ವೇದಿಕೆಯು ಮಂಗಳವಾರ ಹಮ್ಮಿಕೊಂಡಿರುವ ಸಮಾವೇಶದ ಬಗ್ಗೆ ಭಾನುವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ಪ್ರಜಾಪ್ರಭುತ್ವವನ್ನು ನುಚ್ಚುನೂರು ಮಾಡಲು ಹೊರಟವರು ಮೊದಲು ಗುರಿ ಇಡುವುದು ಪ್ರಗತಿಪರ ಹೋರಾಟಗಾರರು ಮತ್ತು ಮಾಧ್ಯಮಗಳ ಮೇಲೆ. ಇವರಿಗೆ ರಕ್ಷಣೆ ಕೊಡಬೇಕಾಗಿದ್ದು ಸರ್ಕಾರದ ಕರ್ತವ್ಯ. ಗೌರಿ ಲಂಕೇಶ್ ರವರು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ತಂದೆಯ ಸಮಾನ ಎಂದು ಭಾವಿಸಿದ್ದವರು. ಆದರೂ ಸರ್ಕಾರ ಅವರ ರಕ್ಷಣೆಗೆ ಮುಂದಾಗಲಿಲ್ಲ ಎಂದು ಸರ್ಕಾರದ ವೈಫಲ್ಯದ ವಿರುದ್ಧ ನಟ ಚೇತನ್ ಕಳವಳ ವ್ಯಕ್ತಪಡಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group