ರಾಷ್ಟ್ರೀಯ ಸುದ್ದಿ

ರಾಮ್ ರಹೀಮ್, ಆಸಾರಾಮ್, ರಾಂಪಾಲ್, ರಾಧೇ ಮಾ ನಕಲಿ ಬಾಬಾಗಳು : ಹಿಂದೂ ಸಾಧುಗಳ ಸಂಘ

ವರದಿಗಾರ- ಅಲಹಾಬಾದ್: ನಕಲಿ ಬಾಬಾಗಳ ಬಗ್ಗೆ ದೇಶದಾದ್ಯಂತ ಚರ್ಚೆ ನಡೆಯುತ್ತಿರುವ ಹಿನ್ನಲೆಯಲ್ಲಿ ಹಿಂದೂ ಸಾಧು -ಸಂತರ ಸರ್ವೋಚ್ಚ ಅಂಗವಾದ ಅಖಿಲ ಭಾರತೀಯ ಅಖಾರ ಪರಿಷತ್ 14 ನಕಲಿ ಬಾಬಾಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.

ಅಖಿಲ ಭಾರತೀಯ ಅಖಾರ (ಆಖಾಡ) ಪರಿಷತ್ 8ನೇ ಶತಮಾನದ ಆದಿ ಶಂಕರರಿಂದ ಆಧ್ಯಾತ್ಮಿಕ ವಂಶಾವಳಿಯನ್ನು ಪಡೆದ ಸನ್ಯಾಸಿಗಳ ಅಂಗವಾಗಿದ್ದು, ಹಿಂದೂ ಧರ್ಮದ ರಕ್ಷಣೆಗಾಗಿ ಸ್ಥಾಪಿಸಲಾಗಿದೆ ಎನ್ನಲಾಗುತ್ತಿದೆ.

ಪರಿಷತ್ ನಿಂದ ಬಿಡುಗಡೆಗೊಂಡ ಪಟ್ಟಿಯಲ್ಲಿ ಆಸಾರಾಮ್, ರಾಮ್ ರಹೀಮ್ ಸಿಂಗ್, ರಾಂಪಾಲ್, ಓಮ್ ಬಾಬಾ, ನಿರ್ಮಲ್ ಬಾಬಾ, ಸಚಿದಾನಂದ ಗಿರಿ, ರಾಧೇ ಮಾ, ಇಚ್ಚಾಧಾರಿ ಭೀಮಾನಂದ್, ಸ್ವಾಮಿ ಅಸೀಮಾನಂದ್, ಓಂ ನಮಃ ಶಿವಾಯ ಬಾಬಾ, ನಾರಾಯಣ ಸಾಯಿ, ಖುಷಿ ಮುನಿ, ಬೃಹಸ್ಪತಿ ಗಿರಿ ಹಾಗೂ ಮಲಕಾನ್ ಗಿರಿಯ ಹೆಸರುಗಳಿವೆ.

ಪರಿಷತ್’ನ ಅಧ್ಯಕ್ಷರಾದ ಸ್ವಾಮಿ ನರೇಂದ್ರ ಗಿರಿ ಇಂತಹ ನಕಲಿ ಬಾಬಾಗಳ ಬಗ್ಗೆ ಎಚ್ಚರದಿಂದಿರುವಂತೆ ಸಾಮಾನ್ಯ ಜನತೆಯಲ್ಲಿ ಮನವಿ ಮಾಡಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡುತ್ತಾ, ನಕಲಿ ಬಾಬಾಗಳ ಪಟ್ಟಿಯನ್ನು ಕೇಂದ್ರ, ರಾಜ್ಯ ಸರಕಾರಗಳಿಗೆ ಹಾಗೂ ವಿರೋಧ ಪಕ್ಷಗಳಿಗೆ ಕಳುಹಿಸಿ, ಸ್ವಯಂ ಘೋಷಿತ ಧಾರ್ಮಿಕ ನಾಯಕರ ಚಟುವಟಿಕೆಗಳನ್ನು ನಿಯಂತ್ರಿಸಲು ಬಲವಾದ ಕಾನೂನು ಜಾರಿಗೊಳಿಸಲು ಆಗ್ರಹಿಸುವುದಾಗಿ ಸ್ವಾಮಿ ನರೇಂದ್ರ ಗಿರಿ ತಿಳಿಸಿದರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group