ರಾಜ್ಯ ಸುದ್ದಿ

ಆರೆಸ್ಸೆಸ್ಸಿನ ಮೋಡಿಗೆ ಮರುಳಾಗಬೇಡಿ : ಯುವಕರಿಗೆ ಮಾಜಿ ಕಾರ್ಯಕರ್ತ ಕೃಷ್ಣಪ್ಪ ಕರೆ

ವರದಿಗಾರ ಶಿವಮೊಗ್ಗ : ಆರೆಸ್ಸೆಸ್ ನಾಯಕರ ಮಾತಿಗೆ ಮರುಳಾಗಿ ಯುವಕರು ತಮ್ಮ ಜೀವನ ಹಾಳುಮಾಡಿಕೊಳ್ಳಬೇಡಿ, ಅವರದ್ದು ಸಿದ್ಧಾಂತವಿಲ್ಲದ ಗೋಸುಂಬೆತನದ ಕಾರ್ಯ ಎಂದು ಮಾಜಿ ಆರೆಸ್ಸೆಸ್ ಕಾರ್ಯಕರ್ತ ಟಿ ಆರ್ ಕೃಷ್ಣಪ್ಪ ನೇರವಾಗಿ ಆರೆಸ್ಸೆಸ್ ಮೇಲೆ ದಾಳಿ ಮಾಡಿದ್ದಾರೆ.

ರಿಪ್ಪನ್ ಪೇಟೆಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದ ಅವರು, ತಾನು 1967 ರಿಂದ 1980 ರ ವರೆಗೆ ನಾನು ಆರೆಸ್ಸೆಸ್ ಸಕ್ರಿಯ ಕಾರ್ಯಕರ್ತನಾಗಿದ್ದೆ. ಇವರು ಹೇಳುವ ಪೊಳ್ಳು ಉಪದೇಶಗಳಿಂದ ಉತ್ಪ್ರೇಕ್ಷಿತನಾದ ನಾನು ನನ್ನ ತಂದೆ-ತಾಯಿಯವರು ಮರಣ ಹೊಂದಿದ ಸಂದರ್ಭದಲ್ಲೂ ದೇಶ ಸೇವೆ ಎಂಬ ಭ್ರಮೆಯಲ್ಲಿ ದೂರದೂರಿನಲ್ಲಿ ಸಂಘದ ಪ್ರತಿ ಕಾರ್ಯದಲ್ಲಿ ತೊಡಗಿದ್ದೆ. ಆದರೆ ಸಂಘದ ಉಪದೇಶಗಳು ಮತ್ತು ಸಿದ್ಧಾಂತವನ್ನು ಗಮನಿಸಿದಾಗ ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ತಿಳಿಯಿತು. ದೇಶಭಕ್ತಿ ಮತ್ತು ಧರ್ಮಾಂಧತೆಯ ಹೆಸರಿನಲ್ಲಿ ಗೌಪ್ಯ ಅಜೆಂಡಾವನ್ನು ಈಡೇರಿಸಿಕೊಳ್ಳಲು ಬಡವರು, ಕೂಲಿ ಕಾರ್ಮಿಕರು ಮತ್ತು ಹಿಂದುಳಿದ ವರ್ಗದ ಯುವಕರನ್ನು ತಮ್ಮತ್ತ ಸೆಳೆದು ಇವರ ಕಾರ್ಯ ಈಡೇರಿಸಿಕೊಳ್ಳುವುದೇ ಇವರ ಸಂಚಾಗಿದೆ, ಅದು ಇಂದೂ ಮುಂದುವರೆಯುತ್ತಿದೆ ಎಂದು ಕಿಡಿ ಕಾರಿದರು.

ಆದ್ದರಿಂದ ಯುವಕರು ಇಂತಹವರ ಮಾತುಗಳಿಗೆ, ಕಾರ್ಯಗಳಿಗೆ ಆಸಕ್ತಿ ವಹಿಸಿದರೆ ಜೀವನ ಕಷ್ಟಕರವಾಗುತ್ತದೆ ಎಂದು ಕೃಷ್ಣಪ್ಪ ಯುವಕರನ್ನು ಎಚ್ಚರಿಸಿದರು.

ಕೃಷ್ಣಪ್ಪರವರು ಪೋಷಕರ ಮರಣವನ್ನೂ ಲೆಕ್ಕಿಸದೆ ಸಂಘದ ಕಾರ್ಯಗಳಲ್ಲಿ ತೊಡಗಿಸಿಕೊಂಡು ಈಗ ಪಶ್ಚಾತಾಪ ಪಡುವುದನ್ನು ನೋಡಿದರೆ ಅಂದೊಮ್ಮೆ ರಾಮ ಸೇನೆಯ ಮುತಾಲಿಕರನ್ನು ಬಿಜೆಪಿಗೆ ಸೇರಿಸಿ ಅಂದೇ ಹೊರ ಹಾಕಿದಾಗ ಪತ್ರಿಕಾಗೋಷ್ಟಿ ನಡೆಸಿದ್ದ ಮುತಾಲಿಕ್, ತನ್ನ ತಂದೆ ಮತ್ತು ಅಣ್ಣ ಮರಣ ಹೊಂದಿದಾಗಲೂ ನಾನು ಸಂಘದ ಕಾರ್ಯದಲ್ಲಿದ್ದು, ಕುಟುಂಬವನ್ನು ಸೇರಿಕೊಳ್ಳಲಾಗಿಲ್ಲ. ಆದರೆ ಈಗ ಪಕ್ಷಕ್ಕೆ ಸೇರಿಸಿಕೊಂಡ ಒಂದೇ ದಿನದಲ್ಲಿ ನನ್ನನ್ನು ಹೊರ ಹಾಕಲಾಗಿದೆ ಎಂದು ಸಣ್ಣ ಮಕ್ಕಳಂತೆ ಅತ್ತಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group