ವರದಿಗಾರ – ದೆಹಲಿ : ದೇಶದ ಹಿರಿಯ ವಕೀಲ, 94ರ ಹರೆಯದ ರಾಮ್ ಜೇಠ್ಮಲಾನಿ ತನ್ನ ಸುದೀರ್ಘ 70 ವರ್ಷಗಳ ವಕೀಲ ವೃತ್ತಿಯಿಂದ ನಿವೃತ್ತಿ ಹೊಂದುವುದಾಗಿ ಘೋಷಿಸಿದ್ದಾರೆ.
ಪ್ರಸಕ್ತ ಬಿಜೆಪಿ ಸರಕಾರವು ಈ ಹಿಂದಿನ ಕಾಂಗ್ರೆಸ್ ಸರಕಾರದಂತೆಯೇ ದೇಶವನ್ನು ನಿರಾಸೆಗೊಳಿಸಿದೆ ಎಂದು ಅವರು ಹೇಳಿದರು. ಭಾರತದ ಫ್ರಸಕ್ತ ಆಡಳಿತವನ್ನು ಒಂದು ‘ವಿಪತ್ತು’ ಎಂದು ಹೇಳಿದ ಅವರು, ತಾನು ಬದುಕಿರುವವರೆಗೆ ಭ್ರಷ್ಟ ರಾಜಕಾರಣಿಗಳ ವಿರುದ್ಧ ಹೋರಾಡಲು ತೀರ್ಮಾನಿಸಿರುವುದಾಗಿ ತಿಳಿಸಿದರು.
ಭಾರತದ ನೂತನ ಮುಖ್ಯ ನ್ಯಾಯಾಧೀಶರಾದ ದೀಪಕ್ ಮಿಶ್ರಾರನ್ನು ಸನ್ಮಾನಿಸಲು ಬಾರ್ ಕೌನ್ಸಿಲ್ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅವರು ತನ್ನ ನಿವೃತ್ತಿ ಘೋಷಿಸಿದರು.
ಬಿಜೆಪಿ ಆಡಳಿತವನ್ನು ‘ವಿಪತ್ತು’ ಎಂದು ಬಣ್ಣಿಸಿದ ಅವರು ಬಾರ್ ಸದಸ್ಯರು ಹಾಗೂ ಎಲ್ಲಾ ಉತ್ತಮ ಪ್ರಜೆಗಳು ಈ ವಿಪತ್ತಿನ ವಿರುದ್ಧ ಎಚ್ಚೆತ್ತುಕೊಳ್ಳಬೇಕು ಹಾಗೂ ಇದೀಗ ಅಧಿಕಾರದಲ್ಲಿರುವವರನ್ನು ಆದಷ್ಟು ಬೇಗ ನಿರ್ಗಮಿಸುವಂತೆ ಮಾಡಬೇಕೆಂದು ಹೇಳಿದರು.
