ನಮ್ಮ ಹೆಜ್ಜೆ, ನಿಮ್ಮ ನುಡಿ: ಮಾಧ್ಯಮಗಳು ಯಾವುದೇ ರಾಜಕೀಯ ಆಮಿಷ, ಒತ್ತಡಗಳಿಗೆ ಬಲಿಯಾಗದೆ ತಮ್ಮ ಜವಾಬ್ಧಾರಿಯನ್ನು ಸಮರ್ಥವಾಗಿ ನಿಭಾಯಿಸಿದಾಗ ಮಾತ್ರವೇ ‘ಸತ್ಯ ಮತ್ತು ನ್ಯಾಯ’ ಜೀವಂತವಾಗಿರುತ್ತದೆ. ಈ ನಿಟ್ಟಿನಲ್ಲಿ ಸತ್ಯ ಮತ್ತು ನ್ಯಾಯದ ಪರವಾಗಿ ಮಾಧ್ಯಮ ರಂಗಕ್ಕೆ ಕಾಲಿಡುತ್ತಿರುವ ‘ವರದಿಗಾರ’ ಅಂತರ್ಜಾಲ ಸುದ್ದಿ ಮಾಧ್ಯಮಕ್ಕೆ ಶುಭವಾಗಲಿ. ಮತ್ತು ತಮ್ಮ ವ್ರತ್ತಿಧರ್ಮ ದಲ್ಲಿ ಯಾರೊಂದಿಗೂ ರಾಜಿ ಮಾಡಿಕೊಳ್ಳದೆ ನೊಂದವರ, ಬಡವರ ,ನ್ಯಾಯ ನಿರಾಕರಿಸಲ್ಪಟ್ಟವರ ಭರವಸೆಯ ದ್ವನಿಯಾಗಲಿ ಎಂದು ಹಾರೈಸುತ್ತಿದ್ದೇನೆ.
–ಮಹಮ್ಮದ್ ತಫ಼್ಸೀರ್
ರಾಜ್ಯಾಧ್ಯಕ್ಷರು.
ಕ್ಯಾಂಪಸ್ ಫ಼್ರಂಟ್ ,ಕರ್ನಾಟಕ
