ವರದಿಗಾರ – ದೆಹಲಿ: ಹಲವು ವಿವಾದಗಳನ್ನು ಸೃಷ್ಟಿಸಿ, ವಿದ್ಯಾರ್ಥಿ ರಾಜಕೀಯಕ್ಕೆ ರಾಷ್ಟ್ರ ರಾಜಕೀಯವನ್ನು ತುರುಕಿಸಿ ಎಡಪಂಥೀಯ ಪ್ರಾಬಲ್ಯದ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯವನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲು ಆರೆಸ್ಸೆಸ್ ಬೆಂಬಲಿತ ಎಬಿವಿಪಿ ನಡೆಸಿದ ಎಲ್ಲಾ ಪ್ರಯತ್ನಗಳೂ ವಿಫಲವಾಗಿವೆ.
ಜೆ ಎನ್ ಯು ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಎಡಪಂಥೀಯ ಸಂಘಟನೆಗಳ ಅಭ್ಯರ್ಥಿಗಳು ಎಲ್ಲಾ ನಾಲ್ಕು ಸ್ಥಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಯುನೈಟೆಡ್ ಲೆಫ್ಟ್ ಅಭ್ಯರ್ಥಿಗಳಾದ ಗೀತಾ ಕುಮಾರಿ ಅಧ್ಯಕ್ಷೆಯಾಗಿ , ದುಗ್ಗಿರಾಲ ಶ್ರೀಕೃಷ್ಣ ಕಾರ್ಯದರ್ಶಿಯಾಗಿ ಆಯ್ಕೆಗೊಂಡಿದ್ದಾರೆ. ಸಿಮೋನ್ ಝೋಯಾ ಖಾನ್ ಉಪಾಧ್ಯಕ್ಷೆಯಾಗಿಯೂ, ಶುಭಾಂಶು ಸಿಂಗ್ ಜಂಟಿ ಕಾರ್ಯದರ್ಶಿಯಾಗಿಯೂ ಚುನಾಯಿತರಾಗಿದ್ದಾರೆ.
ಹೊಸದಾಗಿ ಚುನಾಯಿತರಾದ ಅಧ್ಯಕ್ಷೆ ಗೀತಾ ಕುಮಾರಿ, ನಜೀಬ್ ನಾಪತ್ತೆ ಪ್ರಕರಣದಲ್ಲಿ ಹೋರಾಟದ ಭರವಸೆಯನ್ನು ನೀಡಿದ್ದಾರೆ.
