ವರದಿಗಾರ-ಹೈದರಾಬಾದ್: ಸಾವಿರಾರು ಗಣೇಶ ಭಕ್ತರು ಸಂಭ್ರಮದ ಆಚರಣೆಯಲ್ಲಿರುವಾಗ ಜನಸಂದಣಿಯ ಸಂದರ್ಭವನ್ನು ದುರುಪಯೋಗಪಡಿಸಿ ತನ್ನ ಕಾಮ ತೃಷೆಗೆ ಬಳಸಿಕೊಂಡವನ ವೀಡಿಯೋ ಒಂದು ಹೊರಬಂದಿದೆ.
ಹೈದರಾಬಾದಿನಲ್ಲಿ ಗಣೇಶ ಚತುರ್ಥಿಯ ಮೆರವಣಿಗೆಯಲ್ಲಿ ಕೆಂಪು ಬಣ್ಣದ ಅಂಗಿಯನ್ನು ಧರಿಸಿದ್ದ ವಿಕೃತ ಕಾಮಿಯು ಹೆಣ್ಣುಮಕ್ಕಳನ್ನು, ಮಹಿಳೆಯರನ್ನು ಅಸಭ್ಯವಾಗಿ ಸ್ಪರ್ಶಿಸುವಾಗ ಆತನನ್ನು ಸದ್ದಿಲ್ಲದೆ ಹಿಂಬಾಲಿಸಿದ ಹೈದರಾಬಾದ್ ಪೊಲೀಸರ ಮಹಿಳೆಯರ ರಕ್ಷಣೆಗಾಗಿ ನಿಯೋಜಿಸಲ್ಪಟ್ಟಿರುವ ‘ಶಿ’ (She) ತಂಡದ ಪೊಲೀಸರು ಆತನ ಅಸಭ್ಯ ವರ್ತನೆಯನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ಬಂಧನಕ್ಕೊಳಗಾಗಿದ್ದಾನೆ.
ಹೈದರಾಬಾದಿನಲ್ಲಿ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಮಹಿಳೆಯರಿಗೆ ಕಿರುಕುಳ ನೀಡಿದಕ್ಕಾಗಿ ಬಂಧಿಸಲ್ಪಟ್ಟ 30 ವಿಕೃತ ಕಾಮಿಗಳಲ್ಲಿ ಈತನನ್ನು ಸೇರಿಸಿ 8 ಜನರು ಬಾಲಾಪರಾಧಿಗಳಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
