ಜಿಲ್ಲಾ ಸುದ್ದಿ

ವರದಿಗಾರನ ಅಕ್ರಮ ಬಂಧನ-ಪೊಲೀಸರ ಪೂರ್ವಗ್ರಹ ಪೀಡಿತ ಮನೋಸ್ಥಿತಿಗೆ ಹಿಡಿದ ಕನ್ನಡಿ: ಪಾಪ್ಯುಲರ್ ಫ್ರಂಟ್

ವರದಿಗಾರ: ವಾರ್ತಾಭಾರತಿ ವರದಿಗಾರ ಇಮ್ತಿಯಾಝ್‍ರವರ ಬಂಧನವು ಪೊಲೀಸರ ಪೂರ್ವಗ್ರಹ ಪೀಡಿತ ಮನೋಸ್ಥಿತಿಗೆ ಹಿಡಿದ ಕನ್ನಡಿಯಾಗಿದ್ದು ಪೊಲೀಸರ ಈ ನಡೆಯನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯಾಧ್ಯಕ್ಷರು  ಖಂಡಿಸಿದ್ದಾರೆ.

ಕರಾವಳಿಯ ಕೆಲ ಪೋಲಿಸರ ವೈಖರಿ ಸಂಶಯಾಸ್ಪದವಾಗಿರುವುದು ಈಗಾಗಲೇ ಬಹಳಷ್ಟು ಘಟನೆಗಳಲ್ಲಿ ಸಾಬೀತಾಗಿದೆ. ಹಿಂದುತ್ವ ಸಂಘಪರಿವಾರ ಕಾರ್ಯಕರ್ತರ ಮೇಲೆ ಹಲ್ಲೆಗಳಾದರೆ ಅಥವಾ ಇನ್ನಿತರ ಅಹಿತಕರ ಘಟನೆಗಳಾದರೆ ಮುಸ್ಲಿಮ್ ಸಮುದಾಯದ ಯುವಕರ ವಿರುದ್ಧ ಅಕ್ರಮ ಕಾರ್ಯಾಚರಣೆ ನಡೆಸುವುದು ಪೊಲೀಸರಿಗೆ ಪರಿಪಾಠವಾಗಿಬಿಟ್ಟಿದೆ. ಹಲವಾರು ದಿನಗಳ ಕಾಲ ಅಮಾಯಕ ಮುಸ್ಲಿಂ ಯುವಕರನ್ನು ಅಕ್ರಮ ಬಂಧನದಲ್ಲಿರಿಸಿ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಗಳು ಈಗಾಗಲೇ ಜಗಜ್ಜಾಹೀರಾವೆ. ಅದೇ ರೀತಿ ಶರತ್ ಹತ್ಯೆಯ ಆರೋಪಿಯೆಂದು ಬಿಂಬಿಸಲಾಗಿರುವ ಖಲಂದರ್ ಮನೆಗೆ ತೆರಳಿದ್ದ ಪೊಲೀಸರು ಮನೆಮಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಮತ್ತು ಪವಿತ್ರ ಗ್ರಂಥ ಕುರ್‍ಅನ್‍ಗೆ ಅಗೌರವ ತೋರಿದ್ದಾರೆಂದು ಮನೆಮಂದಿಯೇ ದೂರಿದ್ದಾರೆ. ಈ ಆರೋಪದ ವರದಿಯನ್ನೇ ಪತ್ರಿಕೆಯಲ್ಲಿ ಪ್ರಕಟಿಸಲಾಗಿತ್ತು. ಯಾವುದೇ ಘಟನೆ ಸಂಭವಿಸಿದಾಗ ಸಂತ್ರಸ್ತರಿಗೆ ನ್ಯಾಯ ದೊರಕಿಸಿ ಕೊಡುವುದು ಪರ್ತಕರ್ತನ ಅಥವಾ ಪತ್ರಿಕೆಯ ಪತ್ರಿಕಾ ಧರ್ಮವಾಗಿರುತ್ತದೆ.ಅದನ್ನೇ ಇಲ್ಲಿ ಅನುಸರಿಸಲಾಗಿದೆ.

ಈ ಹಿಂದೆ ಕರಾವಳಿ ಪೊಲೀಸರ ಪೂರ್ವಗ್ರಹಪೀಡಿತ ಕಾರ್ಯಾಚರಣೆಗಳು ತೀವ್ರ ಮುಖಭಂಗವನ್ನು ಅನುಭವಿಸದೆ. ಈ ಪ್ರಕರಣದಲ್ಲೂ ಪೊಲೀಸರು ತೋರಿರುವ ದರ್ಪ ಪತ್ರಿಕಾ ವರದಿಯ ಮೂಲಕ ಬಹಿರಂಗಗೊಂಡಿದೆ. ಪೊಲೀಸರ ಈ ಹೊಣೆಗೇಡಿತನದ ಕೃತ್ಯವನ್ನು ಮರೆಮಾಚುವ ನಿಟ್ಟಿನಲ್ಲಿ ಮತ್ತು ಮುಂದೆ ಈ ರೀತಿಯ ಪೊಲೀಸ್ ದೌರ್ಜನ್ಯದ ವರದಿಗಳನ್ನು ಪ್ರಕಟಿಸದಂತೆ ನಿರ್ಬಂಧಿಸುವ ಷಡ್ಯಂತ್ರದ ಭಾಗವಾಗಿ ಪೊಲೀಸರು ವಾರ್ತಾಭಾರತಿಯ ವರದಿಗಾರನನ್ನು ಬಂಧಿಸಿದ್ದಾರೆ. ನಿರ್ಭೀತಿಯೊಂದಿಗೆ ವರದಿ ಪ್ರಕಟಿಸುವ ಪತ್ರಿಕೆಯೊಂದರ ವಿರುದ್ಧ ಈ ರೀತಿಯ ಕಾರ್ಯಾಚರಣೆಯು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಾಳಿಯಾಗಿದೆ ಎಂದು ಪಾಪ್ಯುಲರ್ ಫ್ರಂಟ್ ತಿಳಿಸಿದೆ.

ಈ ನಿಟ್ಟಿನಲ್ಲಿ ಕೋಮುಗ್ರಸ್ಥ ಪೊಲೀಸರ ವಿರುದ್ಧ ನಾಗರಿಕರು ಒಂದಾಗಿ ಹೋರಾಟ ನಡೆಸಬೇಕು. ಅದೇ ರೀತಿ ಯಾವುದೇ ಮುನ್ಸೂಚನೆ ನೀಡದೆ ವರದಿಗಾರನನ್ನು ಬಂಧಿಸಿ ಅಕ್ರಮವಾಗಿ ಕೂಡಿಹಾಕಿದ ಪೊಲೀಸರ ವಿರುದ್ಧ ಸರಕಾರವು ಕ್ರಮಕೈಗೊಳ್ಳಬೇಕು.
ಮಂಗಳೂರಿನಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾಡಳಿತದ ಅನುಮತಿಯಿಲ್ಲದೆ ಕಾನೂನು ಉಲ್ಲಂಘಿಸಿ ನಡೆಸಿದ ಮಂಗಳೂರು ಚಲೋ ಕಾರ್ಯಕ್ರಮದಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದನ್ನು ತಮ್ಮ ವಿ4 ಚಾನೆಲ್‍ಗೆ ವರದಿ ಮಾಡುತ್ತಿದ್ದ ಪರ್ತಕರ್ತ ಸಲೀಂ ಸೇರಾಜೆಯ ಕ್ಯಾಮರಾ ಕಿತ್ತೆಸೆದು ಅವರ ಮೇಲೆ ದೈಹಿಕ ಹಲ್ಲೆಗೆ ಯತ್ನಿಸಿದ ಘಟನೆಯನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ತೀವ್ರವಾಗಿ ಖಂಡಿಸಿದೆ. ಮತ್ತು ಈ ಘಟನೆಗೆ ಕಾರಣರಾದವರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪಾಪ್ಯುಲರ್ ಫ್ರಂಟ್ ಪ್ರಕಟನೆಯಲ್ಲಿ ಒತ್ತಾಯಿಸಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group