ಅನಿವಾಸಿ ಕನ್ನಡಿಗರ ವಿಶೇಷ

ಮಸ್ಕತ್ ರಸ್ತೆ ಅಪಘಾತ: ಪರಿಹಾರ ಮೊತ್ತ ಕಾನೂನು ಹೋರಾಟದಲ್ಲಿ ಐ.ಎಸ್.ಎಫ್ ಗೆ ಗೆಲುವು

ವರದಿಗಾರ-ಮಸ್ಕತ್: 2015ರ ಮೇ 28ರಂದು ಒಮನ್ ರಾಜಧಾನಿ ಮಸ್ಕತ್ ಗೆ ಸಮೀಪದ ಸೂರ್ ಜಾಲಾನ್ ಎಂಬಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಬಂಟ್ವಾಳದ ಮುಸ್ತಫಾ ಎಂಬ ಯುವಕನ ಕುಟುಂಬಕ್ಕೆ ಪರಿಹಾರ ಮೊತ್ತ ಬಿಡುಗಡೆಗೊಳಿಸುವಲ್ಲಿ ಕೊನೆಗೂ ಇಂಡಿಯನ್ ಸೋಶಿಯಲ್ ಫೋರಮ್ ಮಸ್ಕತ್ ಕರ್ನಾಟಕ ಚಾಪ್ಟರ್ ಯಶಸ್ವಿಯಾಗಿದೆ. ನಿರಂತರ ಎರಡು ವರ್ಷಗಳ ಕಾಲ ಇಂಡಿಯನ್ ಸೋಶಿಯಲ್ ಫೋರಮ್ ನಡೆಸಿದ ಕಾನೂನು ಹೋರಾಟದ ಫಲವಾಗಿ ಅನಾಥವಾಗಿದ್ದ ಕುಟುಂಬಕ್ಕೆ ಪರಿಹಾರ ಮೊತ್ತವಾಗಿ 25,16,866 ರೂಪಾಯಿಗಳ ಚೆಕ್ ಹಸ್ತಾಂತರವಾಗಿದೆ. 2017ರ ಆಗಸ್ಟ್ 31ರಂದು ಪರಿಹಾರ ಮೊತ್ತದ ಚೆಕ್ ಕೈ ಸೇರಿರುವುದಾಗಿ ಮೃತ ಮುಸ್ತಫಾರವರ ತಾಯಿ ಬೀಫಾತಿಮಾ ಅವರು ಇಂಡಿಯನ್ ಸೋಶಿಯಲ್ ಫೋರಮ್ ನಿಯೋಗಕ್ಕೆ ಖಾತರಿಪಡಿಸಿದ್ದಾರೆ.

ಮೃತ ಮುಹಮ್ಮದ್ ಮುಸ್ತಾಫ ಮೂವರು ಸಹೋದರಿ ಮತ್ತು ಅಸ್ವಸ್ಥೆ ತಾಯಿಯನ್ನು ಹೊಂದಿದ್ದರು. ತೀರಾ ಬಡ ಕುಟುಂಬದ ಏಕೈಕ ಆಸರೆಯಾಗಿದ್ದ ಮುಸ್ತಫಾ ಉದ್ಯೋಗಕ್ಕಾಗಿ ಒಮನ್ ನ ಮಸ್ಕತ್ ಗೆ ಬಂದಿದ್ದರು. 2015ರಲ್ಲಿ ಅವರು ಸಂಚರಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಸರಕಾರಿ ರಜೆ ಇದ್ದರೂ ಇಂಡಿಯನ್ ಸೋಶಿಯಲ್ ಫೋರಮ್ ನ ಕ್ಷಿಪ್ರ ಕಾರ್ಯಾಚರ್ಣೆಯಿಂದಾಗಿ ಎರಡು ದಿನಗಳೊಳಗಾಗಿ ಮೃತದೇಹವು ತವರೂರಾದ ಪರ್ಲಿಯಾಕ್ಕೆ ತಲುಪಿತ್ತು.

ಮೃತರ ಪರಿಹಾರ ಮೊತ್ತಕ್ಕಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸಿದ ಇಂಡಿಯನ್ ಸೋಶಿಯಲ್ ಫೋರಮ್ ನಿರಂತರವಾಗಿ ಅಧಿಕಾರಿಗಳನ್ನು, ರಾಯಭಾರಿ ಕಚೇರಿಯನ್ನು ಹಾಗೂ ವಿಮಾ ಕಂಪೆನಿಯ ವಕೀಲರನ್ನು ಸಂಪರ್ಕಿಸಿ ಕಾನೂನು ಹೋರಾಟವನ್ನು ನಡೆಸಿತ್ತು. ಅದೇ ರೀತಿ ಊರಿನಿಂದಲೂ ಅದಕ್ಕೆ ಬೇಕಾದ ದಾಖಲೆಗಳನ್ನೂ ತರಿಸಿಕೊಂಡು ಪರಿಹಾರ ಮೊತ್ತ ಪಡೆಯುವಲ್ಲಿ ಸಾಕಷ್ಟು ಪರಿಶ್ರಮ ವಹಿಸಿತ್ತು. ಇದೀಗ ಇಂಡಿಯನ್ ಸೋಶಿಯಲ್ ಫೋರಮ್ ನ ನಿರಂತರ ಪರಿಶ್ರಮಕ್ಕೆ ಜಯ ಸಿಕ್ಕಿದೆ.
ಇಂಡಿಯನ್ ಸೋಶಿಯಲ್ ಫೋರಮ್ ನ ಕಾನೂನು ಹೋರಾಟದ ನಿಯೋಗದಲ್ಲಿ ನಝೀರ್ ಕೋಡಿಂಬಾಡಿ, ಅನ್ವರ್ ಮೂಡಬಿದ್ರೆ ಹಾಗೂ ಸಲಾಮ್ ತುಂಬೆ ಸಹಕರಿಸಿದ್ದರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group