ಜಿಲ್ಲಾ ಸುದ್ದಿ

ಮಂಗಳೂರಿನಲ್ಲಿ ತ್ರಿವಳಿ ತಲಾಖ್ ಸ್ನೇಹ ಸಂವಾದ-ಇಸ್ಲಾಮಿನ ಸಂವಿಧಾನದಲ್ಲಿ ತಿದ್ದುಪಡಿ ಸಾಧ್ಯವಿಲ್ಲ: ತೋಕೆ ಸಖಾಫಿ

ವರದಿಗಾರ-ಮಂಗಳೂರು: ಇಸ್ಲಾಮಿನ ನೀತಿ ನಿಯಮಗಳು, ಆಚಾರ ವಿಚಾರಗಳು ಅಲ್ಲಾಹನ ಮತ್ತು ಅಲ್ಲಾಹನ ಪ್ರವಾದಿವರ್ಯರ ಆದೇಶ ಮತ್ತು ಸಂದೇಶಗಳಾಗಿದ್ದು ಅದರಲ್ಲಿ ಯಾವುದೇ ತಿದ್ದುಪಡಿಗೆ ಅವಕಾಶವಿಲ್ಲ ಎಂದು ದ.ಕ ಜಿಲ್ಲಾ ಸುನ್ನೀ ಜಂಇಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಟಿ.ಎಂ ಮುಹ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ ಹೇಳಿದ್ದಾರೆ.
ಅವರು ದ.ಕ ಜಿಲ್ಲಾ ಸುನ್ನೀ ಜಂಇಯತುಲ್ ಉಲಮಾದ ಅಧೀನದಲ್ಲಿ ಇಂದು ಮಂಗಳೂರಿನ ಹೋಟೆಲ್ ಸೂರ್ಯದಲ್ಲಿ ಹಮ್ಮಿಕೊಂಡಿದ್ದ ತ್ರಿವಳಿ ತಲಾಖ್ ಸ್ನೇಹ ಸಂವಾದಲ್ಲಿ ಅವರು ಮುಖ್ಯ ಭಾಷಣ ಮಾಡುತ್ತಿದ್ದರು.
ಮಾಧ್ಯಮಗಳು ತ್ರಿವಳಿ ತಲಾಖ್ ವಿಚಾರವಾಗಿ ಜನರೆಡೆಯಲ್ಲಿ ಗೊಂದಲ ಮೂಡಿಸುವ ಕೆಲಸ ಮಾಡುತಿದ್ದು, ಇಸ್ಲಾಂ ಯಾವತ್ತೂ ಕೂಡ ತಲಾಖನ್ನು ಪ್ರೋತ್ಸಾಹಿಸುವುದಿಲ್ಲ ಮತ್ತು ತಲಾಖ್ ಎಂಬ ಪದ್ದತಿ ಪುರುಷರಿಗೆ ಮಾತ್ರವಲ್ಲ ಮಹಿಳೆಯರಿಗೂ ತನ್ನ ಗಂಡನನ್ನು ತೊರೆಯುವಂತಹ ಫಸ್ಖ್, ಖುಲ್‌ಅ್ ಎಂಬ ಎರಡೆರಡು ಅವಕಾಶವಿದೆ, ಇದನ್ನೂ ಕೂಡ ಮಾಧ್ಯಮಗಳು ಜನರ ಮುಂದಿಡಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯ ಜಂಇಯ್ಯತುಲ್ ಉಲಮಾ ಉಪಾಧ್ಯಕ್ಷ ಮುಹಮ್ಮದ್ ಸ‌ಅದಿ ವಳವೂರು ಕಾರ್ಯಕ್ರಮ ಉದ್ಘಾಟಿಸಿದರು. ರಾಜ್ಯ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಎಸ್.ಪಿ ಹಂಝ ಸಖಾಫಿ ಬಂಟ್ವಾಳ ಮುಖ್ಯ ಭಾಷಣ ಮಾಡಿದರು.
ಜಿಲ್ಲಾ ಜಂಇಯತುಲ್ ಉಲಮಾ ಅಧ್ಯಕ್ಷ ಮುಹಮ್ಮದ್ ಅಲೀ ಫೈಝಿ ಸಂಪ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವಾಲೆಮುಂಡೊವು ಮಹ್ಮೂದಲ್ ಫೈಝಿ, ಅಬೂ ಸ್ವಾಲಿಹ್ ಸಖಾಫಿ ಬೆಳ್ಮ, ಕೆ.ಕೆ.ಎಂ ಕಾಮಿಲ್ ಸಖಾಫಿ ಕೃಷ್ಣಾಪುರ, ಸಿದ್ದಿಖ್ ಸಖಾಫಿ ಮೂಳೂರು, ಪಿ.ಪಿ ಅಹ್ಮದ್ ಸಖಾಫಿ ಕಾಶಿಪಟ್ನ, ಉಮರ್ ಸಖಾಫಿ ಕಂಬಳಬೆಟ್ಟು, ಅಬೂಶಝ ಅಬ್ದುರ್ರಝಾಖ್ ಖಾಸಿಮಿ ಪುತ್ತೂರು ಉಪಸ್ಥಿತರಿದ್ದರು. ಈ ಸಂದರ್ಭ ಕಾರ್ಯಕ್ರಮದ ಸಹಯೋಜಕರಾಗಿದ್ದ ಸುನ್ನೀ ಸಾಹಿತ್ಯ ಮಂಡಳಿಯ ಲೋಗೊ ವಾಲೆಮುಂಡೆವು ಮಹ್ಮೂದಲ್ ಫೈಝಿ ಬಿಡುಗಡೆ ಮಾಡಿದರು. ಜಿಲ್ಲಾ ಜಂಇಯತುಲ್ ಉಲಮಾ ಕಾರ್ಯದರ್ಶಿ ಆದಂ ಅಹ್ಸನಿ ಸ್ವಾಗತಿಸಿ ವಂದಿಸಿದರು.

ಮೋದಿ ಸರಕಾರವು ರೈತ ವಿರೋಧಿಯೇ?

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group