ವರದಿಗಾರ-ಮುಂಬೈ: ಹಿರಿಯ ಪತ್ರಕರ್ತೆ, ಪ್ರಗತಿಪರ ಚಿಂತಕಿ, ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿರುವ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರಹ್ಮಾನ್, ನಾನು ತಿಳಿದಿರುವ ಭಾರತವನ್ನು ಪ್ರಸಕ್ತ ಸನ್ನಿವೇಶ ಪ್ರತಿನಿಧಿಸುತ್ತಿಲ್ಲ ಎಂದಿದ್ದಾರೆ.
ಅವರು ತಮ್ಮ ಮುಂಬರುವ ಚಿತ್ರ ‘ಒನ್ ಹಾರ್ಟ್-ದಿ ಎ.ಆರ್.ರಹ್ಮಾನ್ ಕಾನ್ಸರ್ಟ್ ಫಿಲ್ಮ್’ ಇದರ ಪ್ರೀಮಿಯರ್ ಸಂದರ್ಭ ಮಾಧ್ಯಮದೊಂದಿಗೆ ಮಾತನಾಡುತ್ತಿದ್ದರು.
ಗೌರಿ ಲಂಕೇಶ್ ಹತ್ಯೆಯ ಬಗ್ಗೆ ದುಃಖ ವ್ಯಕ್ತಪಡಿಸಿದ ಎ.ಆರ್.ರಹ್ಮಾನ್, ಈ ರೀತಿಯ ಘಟನೆಗಳು ಭಾರತದಲ್ಲಿ ನಡೆಯುವುದಿಲ್ಲ. ಇದು ನನ್ನ ಭಾರತವಲ್ಲ ಎಂದು ಹೇಳಿದ್ದಾರೆ. ನನಗೆ ಭಾರತ ಪ್ರಗತಿಶೀಲ ಹಾಗೂ ಅನುಕಂಪದಿಂದ ಕೂಡಿರಬೇಕೆಂದು ಅವರು ಮಾಧ್ಯಮದೊಂದಿಗೆ ಹೇಳಿಕೊಂಡಿದ್ದಾರೆ.
