ರಾಷ್ಟ್ರೀಯ ಸುದ್ದಿ

ರೋಹಿಂಗ್ಯಾ ಮುಸ್ಲಿಮರನ್ನು ಗಡೀಪಾರು ಮಾಡಿ:ಆರೆಸ್ಸೆಸ್ ನಾಯಕನಿಂದ ಸುಪ್ರೀಂ ಕೋರ್ಟ್ ಗೆ ಮನವಿ

ವರದಿಗಾರ-ದೆಹಲಿ: ಮಾಜಿ ಬಿಜೆಪಿ ನಾಯಕ ಹಾಗೂ ಆರೆಸ್ಸೆಸ್ ನೇತಾರ ಕೆ.ಎನ್. ಗೋವಿಂದಾಚಾರ್ಯ ರವರು ರೋಹಿಂಗ್ಯಾ ಮುಸ್ಲಿಮರನ್ನು ಗಡೀಪಾರು ಮಾಡುವಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೂಲಕ ಸುಪ್ರೀಂ ಕೋರ್ಟ್ ಗೆ ಶುಕ್ರವಾರ ಮನವಿ ಸಲ್ಲಿಸಿದ್ದಾರೆ.

ರೋಹಿಂಗ್ಯಾ ಮುಸ್ಲಿಮರನ್ನು ಈ ದೇಶದಲ್ಲಿ ಮುಂದುವರಿಯಲು ಅನುಮತಿಸಿದ್ದಲ್ಲಿ ದೇಶವನ್ನು ಇನ್ನೊಂದು ವಿಭಜನೆಯತ್ತ ತಳ್ಳಬಹುದು ಎಂದು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ಮನವಿಯಲ್ಲಿ ಅವರು ಉಲ್ಲೇಖಿಸಿದ್ದಾರೆ.

ಜನಸಂಖ್ಯಾ ಸ್ಪೋಟವು ಈಗಾಗಲೇ ದೇಶದ ಸಂಪನ್ಮೂಲಗಳ ಮೇಲೆ ಪ್ರಭಾವ ಬೀರುತ್ತಿದೆ, ಹಾಗಿದ್ದಲ್ಲಿ ರೋಹಿಂಗ್ಯಾ ಮುಸ್ಲಿಮರಿಗೆ ಸರಕಾರವು ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆನ್ನುವ ಬೇಡಿಕೆಯು ಭಾರತೀಯರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಕೆ.ಎನ್.ಗೋವಿಂದಾಚಾರ್ಯರು ತನ್ನ ಮನವಿಯಲ್ಲಿ ವ್ಯಕ್ತಪಡಿಸಿದ್ದಾರೆ. ಅಲ್ ಖಾಯ್ದ ಸಂಘಟನೆಯು ರೋಹಿಂಗ್ಯಾ ಸಮುದಾಯವನ್ನು ಭಯೋತ್ಪಾದನಾ ಕೃತ್ಯಗಳಿಗೆ ಉಪಗಿಸುತ್ತಿರುವುದು ತಿಳಿದು ಬಂದಿದೆ ಎಂದೂ, ರೋಹಿಂಗ್ಯಾ ಸಮುದಾಯದ ಬೇಡಿಕೆಯನ್ನು ಈಡೇರಿಸಿದ್ದಲ್ಲಿ, ಅದು ದೇಶವನ್ನು ಇನ್ನೊಂದು ವಿಭಜನೆಯತ್ತ ತಳ್ಳಬಹುದು ಎಂದೂ ಅವರು ಉಲ್ಲೇಖಿಸಿದ್ದಾರೆ.

ರೋಹಿಂಗ್ಯಾ ಸಮುದಾಯವು ಭಾರತದಲ್ಲಿ ಉಳಿಯಲು ಸಾಂವಿಧಾನಿಕ ಹಕ್ಕನ್ನು ಹೊಂದಿಲ್ಲ ಹಾಗೂ ಅವರನ್ನು ಗಡೀಪಾರು ಮಾಡುವುದು ಭಾರತವು ಹೊಂದಿರುವ ಸಾರ್ವಭೌಮ ಶಕ್ತಿಯ ಅಭ್ಯಾಸವಾಗಿದೆ ಹಾಗೂ ಅದು ಯಾವುದೇ ಅಂತಾರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸುವುದಿಲ್ಲ ಎಂದೂ ತನ್ನ ಮನವಿಯಲ್ಲಿ ಗೋವಿಂದಾಚಾರ್ಯ ಉಲ್ಲೇಖಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group