ವರದಿಗಾರ- ತಿರೂರ್: ಆರೆಸ್ಸೆಸ್ ಮಲಪ್ಪುರಂ ವಿಭಾಗದ ಕಾರ್ಯಕಾರಿ ಸಮಿತಿ ಸದಸ್ಯ ಕೆ.ವಿ.ರಾಮನ್ ಕುಟ್ಟಿ ವಿರುದ್ಧ ಕೋಮು ವೈಷಮ್ಯವನ್ನು ಉದ್ರೇಕಿಸುವ ಭಾಷಣ ಮಾಡಿದ್ದಕ್ಕಾಗಿ ಪೊಲೀಸರು ಕೇಸು ದಾಖಲಿಸಿದ್ದಾರೆ.
ಸಂಘಪರಿವಾರದ ಕಾರ್ಯಕರ್ತ ವಿಪಿನ್ ಕೊಲೆ ಪ್ರಕರಣದ ಎಲ್ಲಾ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ತಿರೂರ್ ಡಿವೈಎಸ್ಪಿ ಕಚೇರಿಗೆ ಹಿಂದೂ ಐಕ್ಯ ವೇದಿ ಹಮ್ಮಿಕೊಂಡಿದ್ದ ಜಾಥಾವನ್ನು ಉದ್ಘಾಟಿಸಿ ಮಾಡಿದ ಭಾಷಣವು ಕೋಮು ವೈಷಮ್ಯವನ್ನು ಉದ್ರೇಕಿಸುವಂತಿದೆ ಎಂಬ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದೇ ವೇಳೆ ರಸ್ತೆ ಸಂಚಾರವನ್ನು ಅಡ್ಡಿ ಪಡಿಸಿದ್ದಕ್ಕಾಗಿ ಸುಮಾರು 500ರಷ್ಟು ಬಿಜೆಪಿ ಹಾಗೂ ಸಂಘಪರಿವಾರದ ಕಾರ್ಯಕರ್ತರ ಮೇಲೂ ಪ್ರಕರಣ ದಾಖಲಿಸಲಾಗಿದೆ.
ಕರ್ನಾಟಕದಲ್ಲಿ ಆಗಾಗ ಪ್ರತಿಭಟನೆ, ಸಮಾವೇಶ ಮತ್ತು ಮೆರವಣಿಗೆಗಳ ಹೆಸರಿನಲ್ಲಿ ಆಶಾಂತಿ ಸೃಷ್ಟಿಸುತ್ತಿರುವ ಸಂಘಪರಿವಾರದ ಕಾರ್ಯಕರ್ತರನ್ನು ಮಟ್ಟ ಹಾಕಲು ಸರಿಯಾದ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂದು ಸಾರ್ವಜನಿಕರು ಅರೋಪಿಸುತ್ತಿರುವಾಗಲೇ ಪಕ್ಕದ ರಾಜ್ಯದಿಂದ ವರದಿಯಾದ ಈ ಸುದ್ದಿ ಗಮನಾರ್ಹವಾಗಿದೆ.
