ನಿಮ್ಮ ಬರಹ

ಕರ್ತವ್ಯದಲ್ಲಿದ್ದ ಮಂಗಳೂರಿನ ಪ್ರಾಮಾಣಿಕ ಪೋಲೀಸ್ ಇನ್ಸ್’ಪೆಕ್ಟರ್ ಮಾರುತಿ ನಾಯಕ್ ಜೊತೆ ಸಂಸದ ನಳಿನ್ ಕುಮಾರ್ ರುದ್ರನರ್ತನ !!

ಪೋಲೀಸ್ ಅಧಿಕಾರಿ ಎನ್ನುವುದನ್ನೂ  ಲೆಕ್ಕಿಸದೆ ಅವರ ಎದುರಿನಲ್ಲೇ ಟೇಬಲ್ ಗೆ ಬಡಿದು ಏಕವಚನ ಪ್ರಯೋಗಿಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಪೊಲೀಸ್ ಅಧಿಕಾರಿಯ ಕೈಯಿಂದ ಮೊಬೈಲ್ ಕಸಿದುಕೊಳ್ಳಲು ವಿಫಲ ಯತ್ನ ನಡೆಸುವುದನ್ನು ನೋಡಿದರೆ ರಕ್ಷಣೆ ನೀಡುವ ಆರಕ್ಷಕನಿಗೇ ಗೌರವ ಇಲ್ಲದಂತೆ ತೋರುತ್ತಿದೆ.

ಮಂಗಳೂರು ಕಮೀಷನರ್ ವ್ಯಾಪ್ತಿಯ ಅತ್ಯಂತ ಖಡಕ್ ಆಫೀಸರ್ ಎಂದೇ ಗುರುತಿಸಲ್ಪಡುವ  ಎಂತಹಾ ಸಂಧಿಗ್ಧ ಪರಿಸ್ಥಿತಿಯನ್ನೂ ಅತ್ಯಂತ ಯಶಸ್ವಿಯಾಗಿ ನಿಭಾಯಿಸಬಲ್ಲ ಒಬ್ಬ ಚಾಣಾಕ್ಷ ಅಧಿಕಾರಿಯಾದಂತಹ ಕದ್ರಿ ಠಾಣಾ ಪೋಲೀಸ್ ಇನ್ಸಪೆಕ್ಟರ್ ಮಾರುತಿ ನಾಯಕ್ ರವರ ಕರ್ತವ್ಯ ನಿಷ್ಟೆ ಮಂಗಳೂರಿನ ಪ್ರತಿಯೊಂದು  ಸಾಮಾನ್ಯ ನಾಗರಿಕನಿಗೂ ಗೊತ್ತಿರುವ ಸಂಗತಿ. ಅಂತಹ ಒಬ್ಬ ಪ್ರಾಮಾಣಿಕ ಆಧಿಕಾರಿಯನ್ನು ಜಿಲ್ಲೆಯ ಸಂಸದರೊಬ್ಬರು ಸಾರ್ವಜನಿಕರ ಎದುರಿನಲ್ಲೇ ಹಿಗ್ಗಾ ಮುಗ್ಗಾ ಜಾಡಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿ,  ಮೊಬೈಲ್ ಕಸಿದುಕೊಳ್ಳಲು ಯತ್ನಿಸುವುದನ್ನು ನೋಡಿದರೆ ರಾಜಕಾರಣಿಗಳು ತಮ್ಮ ಮಾತು ಕೇಳದ ಪೋಲೀಸ್ ಅಥವಾ ಇಲಾಖೆಯ ಮೇಲೆ ಎಷ್ಟು ಕೀಳುಮಟ್ಟದ ತಮ್ಮ ಪ್ರಬಾವ ವನ್ನು ತೋರಿಸುತ್ತಾರೆ ಎಂದು ಮನದಟ್ಟಾಗುತ್ತ್ತದೆ. ಸಂಸದರ ಈ ವರ್ತನೆ ಉತ್ತರ ಪ್ರದೇಶ, ಬಿಹಾರದ ರಾಜಕಾರಣಿಗಳಿಗಿಂತ ನಾವೇನು ಕಮ್ಮಿ ಇಲ್ಲ ಅಂದು ತೋರ್ಪಡಿಸಿದಂತಾಗಿದೆ.

ಇತ್ತೀಚೆಗೆ ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಕರ್ನಾಟಕದ ಗಡಿಬಾಗದ ಪ್ರದೇಶ ಮಂಜೇಶ್ವರಕ್ಕೆ,  ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಆಗಮಿಸುವ ಕಾರ್ಯಕ್ರಮಕ್ಕೆ ಆಗಮಿಸಿ ಹಿಂತಿರುಗಿ ಹೋಗುವಾಗ ಬಿ.ಜೆ.ಪಿ ಯ ಸಾವಿರಾರು ಕಾರ್ಯಕರ್ತರು ರಹಸ್ಯವಾಗಿ ಹಠಾತ್ತಾಗಿ ಪಂಪ್ ವೆಲ್ ಮತ್ತು ಕಂಕನಾಡಿ ರೈಲು ನಿಲ್ದಾಣದಲ್ಲಿ ರಸ್ತೆ ತಡೆ ಮಾಡಿ ಪ್ರತಿಭಟನೆಗಿಳಿದಾಗ ನೆರೆ ರಾಜ್ಯದ ಮುಖ್ಯಮಂತ್ರಿಯೊಬ್ಬರಿಗೆ ರಕ್ಷಣೆಕೊಟ್ಟು ಈ ರಾಜ್ಯದ ಗೌರವದ ವಿಷಯವಾಗಿದ್ದ ನೆರೆ ರಾಜ್ಯದ ಮುಖ್ಯಮಂತ್ರಿಯ ಭದ್ರತೆ ಉಸ್ತುವಾರಿಯನ್ನು ಮೇಲಾಧಿಕಾರಿಗಳ ಆದೇಶದಂತೆ ಅತ್ಯಂತ ಚಾಣಕ್ಷತಣದಿಂದ ಪರಿಸ್ಥಿತಿಯನ್ನು ಇತರ ಅಧಿಕಾರಿಗಳೊಂದಿಗೆ ನಿಭಾಯಿಸಿದ ಖ್ಯಾತಿ ಕದ್ರಿ ಇನ್ಸಪೆಕ್ಟರ್ ಮಾರುತಿ ನಾಯಕ್ ಗೆ ಸಲ್ಲಬೇಕು,

ಅದೇ ರೀತಿ ಇತ್ತೇಚೆಗೆ ದುಷ್ಕರ್ಮಿಗಳಿOದ ಹತ್ಯೆಗೀಡಾದ ಅಮಾಯಕ ಅಶ್ರಫ್ ಕಲಾಯಿ ಶವ ಯಾತ್ರೆ ಸಂದರ್ಭದಲ್ಲಿ ಬೆಳಗ್ಗೆ ಹತ್ಯೆಯಾದ ಸಮಯದಿಂದ ಹಿಡಿದು ಏ.ಜೆ ಆಸ್ಪತ್ರೆಯಿಂದ ಸಂಜೆಯ ಹೊತ್ತಿನಲ್ಲಿ ಹೊರಟ ಅಶ್ರಫ್ ಕಲಾಯಿ ಯವರ ಪ್ರಾರ್ಥಿವ ಶರೀರದ ಭದ್ರತಾ ಉಸ್ತುವಾರಿಯನ್ನು ಕಮೀಷನರೇಟ್ ವ್ಯಾಪ್ತಿಯಿಂದ ಜಿಲ್ಲಾ ವ್ಯಾಪ್ತಿಯ ಪರಿಧಿಗೆ ಸೇರುವವರೆಗೂ  10,000 ದಷ್ಟು ಕಾರ್ಯಕರ್ತರ ಉದ್ವೇಗ,ಆವೇಶದ ನಡುವೆಯು ಯಾವುದೇ ರೀತಿಯ ಅಭದ್ರತೆಗೆ ಎಡೆಮಾಡಿಕೊಡದೆ ಬಹಳ ಸೂಕ್ಷ್ಮವಾಗಿ ಪರಿಸ್ಥಿತಿಯನ್ನು ನಿಭಾಯಿಸಿದ್ದು ಈ ನಿಷ್ಟಾವಂತ ಪೋಲಿಸ್ ಅಧಿಕಾರಿ ಮಾತ್ರವಲ್ಲದೆ,  ದಾರಿ ಮಧ್ಯೆ ಉದ್ವಿಗ್ನ ವಾತಾವರಣವಿದ್ದಾಗ ಅದನ್ನು ಬಹಳ ಜಾಣ್ಮೆಯಿಂದ ನಿಭಾಯಿಸಿ ಅಲ್ಲಿದ್ದ ಜನರಿಗೆ ರಕ್ಷಣೆ ಕೊಡುವಲ್ಲಿ ಮುಖ್ಯಪಾತ್ರವಹಿಸಿದ್ದಾರೆ.

ಅದೇ ರೀತಿ RSS ಕಾರ್ಯಕರ್ತ ಶರತ್ ಶವಯಾತ್ರೆ ಸಂದರ್ಭದಲ್ಲೂ ಕಮೀಷನರೇಟ್ ವ್ಯಾಪ್ತಿಯಲ್ಲಿ ಉದ್ರಿಕ್ತ ಕಾರ್ಯಕರ್ತರು ಸಂಯಮ ಕಳೆದು ಕೊಂಡರೂ ತಾಳ್ಮೆ ವಹಿಸಿ ಬಲ ಪ್ರಯೋಗೀಸದೆ ಅತ್ಯಂತ ಯಶಸ್ವಿಯಾಗಿ ಕಮೀಷನರೇಟ್ ವ್ಯಾಪ್ತಿಯಲ್ಲಿ ಗಲಭೆಗೆ ಆಸ್ಪದ ನೀಡದೇ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಪರಿಸ್ಥಿತಿ ನಿಭಾಯಿಸಿದ ಗೌರವ ಈ ಅಧಿಕಾರಿಗೆ ಸಲ್ಲಬೇಕು,

ಜನರನ್ನು ಮೂರ್ಖರನ್ನಾಗಿಸುವ ಬಿಜೆಪಿಯ ಸಂಸದ ನಳಿನ್ ಕುಮಾರ್’ರವರ ಹತಾಶ ಪ್ರಯತ್ನ ಇದಾಗಿತ್ತು ಎಂದರೂ ತಪ್ಪಾಗಲಾರದು. ಜಿಲ್ಲೆಯ ಜನ ಬುದ್ಧಿವಂತರಾಗಿದ್ದಾರೆ ಅನ್ನೋ ಸತ್ಯ ಇನ್ನೂ ಬಿಜೆಪಿಯ ಅರಿವಿಗೆ ಬರದೇ ಇದ್ದದ್ದು ವಿಪರ್ಯಾಸ

 ಮಹಮ್ಮದ್ ಹಾರಿಸ್ ಬೈಕಂಪಾಡಿ

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group