ಜಿಲ್ಲಾ ಸುದ್ದಿ

ಪೊಲೀಸ್ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿ ಗೂಂಡಾ ವರ್ತನೆ ತೋರಿದ ಸಂಸದನ ಮೇಲೆ ಕ್ರಮ ಕೈಗೊಳ್ಳಿ : ಎಸ್ ಡಿ ಪಿ ಐ

ಪೊಲೀಸರ ತಾರತಮ್ಯ ಕಾನೂನಿನ ಸ್ಪಷ್ಟ ಉಲ್ಲಂಘನೆ : ಹನೀಫ್ ಖಾನ್ ಕೊಡಾಜೆ

ವರದಿಗಾರ ಮಂಗಳೂರು: ಜಿಲ್ಲಾಡಳಿತದ ಅನುಮತಿ ಇಲ್ಲದೆಯೇ ಬಿಜೆಪಿ ಯುವ ಮೋರ್ಚಾ ಕಾನೂನನ್ನು ಗಾಳಿಗೆ ತೂರಿ ಮಂಗಳೂರು ಚಲೋ ಕಾರ್ಯಕ್ರಮ ನಡೆಸಿದಾಗ ಪೊಲೀಸ್ ಇಲಾಖೆ ಮೂಕ ಪ್ರೇಕ್ಷಕರಾಗಿ ನಿಂತು ಬೆಂಬಲಿಸಿದ್ದಾರೆಯೇ ಹೊರತು ಯಾವುದೇ ರೀತಿಯಲ್ಲಿ ಅನುಮತಿ ಇಲ್ಲದ ಕಾರ್ಯಕ್ರಮವನ್ನು ತಡೆಯಲು ಸಾಧ್ಯವಾಗಲಿಲ್ಲ. ಜಿಲ್ಲೆಯಲ್ಲಿ ಮುಸ್ಲಿಂ ಸಂಘಟನೆಗಳು ಪೊಲೀಸ್ ಇಲಾಖೆಗೆ ಮಾಹಿತಿ ಕೊಟ್ಟು ಅಹ್ಮದ್ ಖುರೈಶಿಯ ಮೇಲೆ ದೌರ್ಜನ್ಯವೆಸಗಿದ ಸಿಸಿಬಿ ಪೊಲೀಸರ ಮೇಲೆ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ ಮಾಡಿದಾಗ, ಅನುಮತಿ ಇಲ್ಲ ಎಂಬ ನೆಪವೊಡ್ಡಿ ಅಮಾನವೀಯವಾಗಿ ಲಾಠಿ ಪ್ರಹಾರ ಮಾಡಿ ರಕ್ತ ಬರುವಂತೆ ಹೊಡೆದು ಸುಮಾರು ನೂರಕ್ಕಿಂತಲು ಹೆಚ್ಚು ಮಂದಿಯನ್ನು ಬಂಧಿಸಿ ಅವರ ಮೇಲೆ ಪ್ರಕರಣ ದಾಖಲಿಸಿ ಹಲವರನ್ನು ಜೈಲಿಗೆ ತಳ್ಳಿದ್ದಾರೆ. ಆದರೆ ‘ಮಂಗಳೂರು ಚಲೋ’ ಕಾರ್ಯಕ್ರಮಕ್ಕೆ ರಾಜ್ಯದ ಎಲ್ಲಾ ಕಡೆ ನಿಷೇಧ ಹೇರಿದ್ದರೂ ಇವತ್ತು ಮಂಗಳೂರಿನಲ್ಲಿ ಪೊಲೀಸರು ಕೆಲವರನ್ನು ಬಂಧಿಸಿ ಬಿಡುಗಡೆಗೊಳಿಸಿದ್ದಲ್ಲದೇ, ಬಿಜೆಪಿ ಕಾರ್ಯಕ್ರಮಕ್ಕೆ ಯಾವುದೇ ತೊಂದರೆ ಆಗದಂತೆ ಮೌನ ವಹಿಸಿದ್ದು ಪೊಲೀಸರ ತಾರತಮ್ಯ ನೀತಿಯನ್ನು ಎತ್ತಿ ತೋರಿಸುತ್ತದೆ. ಪೊಲೀಸ್ ವ್ಯವಸ್ಥೆಗೆ ಬೆಲೆ ಕೊಡದೆ ಬಿಜೆಪಿ ಅನುಮತಿ ಇಲ್ಲದೆ ಕಾರ್ಯಕ್ರಮ ನಡೆಸುವಾಗ ತಡೆಯದೆ ಇಬ್ಭಾಗ ನೀತಿಯನ್ನು ತೋರಿಸಿ ಕಾನೂನನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ.ಇದರಿಂದ ಪೊಲೀಸರು ಹಿಂದುತ್ವದ ಪರವಾಗಿದ್ದಾರೆ ಎಂಬುದನ್ನು ಸಾಬೀತುಪಡಿಸಿರುತ್ತಾರೆ. ಅದೇ ರೀತಿ ಮಂಗಳೂರು ಚಲೋವನ್ನು ತಡೆಯವಲ್ಲಿ ಸರಕಾರದ ವೈಫಲ್ಯವು ಎದ್ದು ಕಾಣುತ್ತದೆ. ಒಂದು ಕಡೆ ಯಡಿಯೂರಪ್ಪ ಪೊಲೀಸರು ಸಹಕರಿಸಿದ್ದಾರೆ ಎನ್ನುವಾಗ ಇನ್ನೊಂದು ಕಡೆ ಪೊಲೀಸರಿಗೆ ಗೂಂಡಾಗಿರಿಯ ಮೂಲಕ ಬೆದರಿಸುವ ಕೆಲಸವು ನಡೆಯಿತು. ಇದರಿಂದ ಬಿಜೆಪಿಯು ಅಶಾಂತಿ ಸೃಷ್ಟಿಸಿ ರಾಜಕೀಯ ಲಾಭಕ್ಕಾಗಿ ನಡೆಸಿದ ಕಾರ್ಯಕ್ರಮ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಬಿಜೆಪಿಯ ಕಾರ್ಯಕರ್ತರನ್ನು ಕದ್ರಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮಾರುತಿ ನಾಯಕ್ ನೇತೃತ್ವದಲ್ಲಿ ಪೊಲೀಸರು ಬಂಧಿಸಿ ಕದ್ರಿ ಗೋರಕ್ಷನಾಥ ಮಂದಿರದಲ್ಲಿ ಇಟ್ಟಿದ್ದರು. ಬಂಧಿತರ ಮೇಲೆ ಕಾನೂನು ಉಲ್ಲಂಘನೆ ಮಾಡಿದ ಕಾರಣಕ್ಕಾಗಿ ಅವರ ಮೇಲೆ ಪ್ರಕರಣ ದಾಖಲಿಸಲು ಮುಂದಾದಾಗ ಅಲ್ಲಿಗೆ ಧಾವಿಸಿ ಬಂದ ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ ಕಾರ್ಯಕರ್ತರ ಮತ್ತು ಪೊಲೀಸ್ ಸಿಬ್ಬಂದಿಗಳ ಮುಂದೆಯೇ ಇನ್ಸ್‌ಪೆಕ್ಟರ್ ರವರ ಮೇಲೆ ದರ್ಪದಿಂದ ಏಕವಚನದಲ್ಲಿ ಅವಮಾನಿಸಿ, ಗೂಂಡಾ ರೀತಿಯಲ್ಲಿ ವರ್ತಿಸಿ, ತಮ್ಮ ಹೆಸರಿನಲ್ಲಿ ಜಿಲ್ಲಾ ಬಂದ್’ಗೆ ಕರೆ ಕೊಡಲಾಗುವುದೆಂದು ಬೆದರಿಕೆ ಹಾಕಿ ದಬ್ಬಾಳಿಕೆ ನಡೆಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ.

ಜವಾಬ್ದಾರಿಯುತ ಸ್ಥಾನದಲ್ಲಿ ಇರುವುದನ್ನು ಮರೆತು ಬಾಯಿಗೆ ಬಂದಂತೆ ಅವಮಾನಿಸಿ ಬಿಜೆಪಿಯ ನೈಜ ಸಂಸ್ಕೃತಿಯನ್ನು ಮತ್ತೆ ಜನತೆಗೆ ತೋರಿಸಿದ್ದಾರೆ. ಉತ್ತರ ಭಾರತದಲ್ಲಿ ಬಿಜೆಪಿ ನಾಯಕರು ಯಾವ ರೀತಿ ಅಲ್ಲಿಯ ಪೊಲೀಸರ ಮೇಲೆ ಗೂಂಡಾ ವರ್ತನೆಯನ್ನು ಮಾಡುತ್ತಾರೋ ಅದಕ್ಕಿಂತ ಕೀಳು ಮಟ್ಟದಲ್ಲಿ ದಬ್ಬಾಳಿಕೆಯನ್ನು ನಡೆಸಿ ಕರ್ನಾಟಕದ ಇಡೀ ಜನತೆಯೇ ತಲೆ ತಗ್ಗಿಸುವಂತಾಗಿದೆ. ಈ ಘಟನೆಯನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI)ದ.ಕ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ.

ಈ ರೀತಿಯಾಗಿ ಪೊಲೀಸ್ ಇನ್ಸ್‌ಪೆಕ್ಟರ್ ಮೇಲೆ ಗೂಂಡಾ ವರ್ತನೆಯ ದಬ್ಬಾಳಿಕೆ ನಡೆಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಸಂಸದ ನಳಿನ್ ಕುಮಾರ್ ಕಟೀಲ್ ಮೇಲೆ ಪೊಲೀಸ್ ಇಲಾಖೆ ಕೂಡಲೇ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಬೇಕೆಂದು ಹಾಗೂ ಅನುಮತಿ ಇಲ್ಲದೇ ಮಂಗಳೂರು ಚಲೋ ಕಾರ್ಯಕ್ರಮ ನಡೆಸಿದವರ ಮೇಲೆಯೂ ಹಾಗೂ ಅವಕಾಶ ಮಾಡಿಕೊಟ್ಟ ಪೊಲೀಸರ ಮೇಲೆಯೂ ಕ್ರಮ ಕೈಗೊಳ್ಳಬೇಕೆಂದು ಎಸ್ಡಿಪಿಐ ದ.ಕ ಜಿಲ್ಲಾಧ್ಯಕ್ಷರಾದ ಹನೀಫ್ ಖಾನ್ ಕೊಡಾಜೆ ಆಗ್ರಹಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group