ರಾಷ್ಟ್ರೀಯ ಸುದ್ದಿ

ಗೌರಿ ಹತ್ಯೆಯ ಸಂಚನ್ನು ಮರೆಮಾಚಿದ ಆರೋಪ : ಪ್ರತಿಭಟನಾ ಸ್ಥಳದಿಂದ ರಿಪಬ್ಲಿಕ್ ಟಿವಿ ವರದಿಗಾರನನ್ನು ಹೊರದಬ್ಬಿದ ಶೆಹ್ಲಾ ರಾಶಿದ್

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯನ್ನು ಖಂಡಿಸಿ ದೆಹಲಿಯ ಪ್ರೆಸ್ ಕ್ಲಬ್’ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿ ಕಾರ್ಯಕರ್ತೆ ಶೆಹ್ಲಾ ರಾಶಿದ್, ರಿಪಬ್ಲಿಕ್ ಟಿ.ವಿ.ಯ ವರದಿಗಾರನೊಬ್ಬರನ್ನು ಹೊರದಬ್ಬಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗೌರಿ ಲಂಕೇಶ್ ಹತ್ಯೆಯನ್ನು ಖಂಡಿಸಿ ಮಾತನಾಡುತ್ತಿದ್ದ ವೇಳೆ ರಿಪಬ್ಲಿಕ್ ಟಿ ವಿ ಚಾನೆಲಿನ ವರದಿಗಾರನಿಗೆ ಆವರಣವನ್ನು ಬಿಟ್ಟು ಹೋಗುವಂತೆ ಸೂಚಿಸಿದರು. ಗೌರಿ ಲಂಕೇಶ್ ಹತ್ಯೆಯ ವರದಿಯಲ್ಲಿ ತಪ್ಪಾದ ಮಾಹಿತಿ ನೀಡಿ ಸತ್ಯವನ್ನು ಮರೆಮಾಚುವ ರಿಪಬ್ಲಿಕ್ ಟಿವಿಯ ಪ್ರಯತ್ನವನ್ನು ಖಂಡಿಸಿದರು. ಬಿಜೆಪಿ ಸಂಸದನೊಬ್ಬನ ಹಣಕಾಸು ನೆರವಿನಿಂದ ಕಾರ್ಯಾಚರಿಸುತ್ತಿರುವ ರಿಪಬ್ಲಿಕ್ ಟಿವಿ ಗೌರಿ ಲಂಕೇಶ್ ಹತ್ಯೆಯನ್ನು ಮರೆಮಾಚಲು ಪ್ರಯತ್ನಿಸಿದೆ ಎಂದು ಶೆಹ್ಲಾ ಆರೋಪಿಸಿದರು. ಗೌರಿ ಲಂಕೇಶ್ ಹತ್ಯೆಯಲ್ಲೂ ಸಂಭ್ರಮಿಸಿದ ಕಿರಾತಕರನ್ನೂ ಪ್ರಧಾನ ಮಂತ್ರಿಯವರು ಟ್ವಿಟ್ಟರ್ ನಲ್ಲಿ ಫಾಲೋ ಮಾಡುತ್ತಿರುವುದನ್ನೂ ಶೆಹ್ಲಾ ಈ ಸಂದರ್ಭದಲ್ಲಿ ಸ್ಮರಿಸಿದರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group