ವರದಿಗಾರ ಮನಾಮ : ಇಂಡಿಯನ್ ಸೋಷಿಯಲ್ ಫೋರಮ್ ಬಹರೈನ್ ಕರ್ನಾಟಕ ಘಟಕದ ವತಿಯಿಂದ ಎರಡನೇ ವರ್ಷದ “ಫ್ಯಾಮಿಲಿ ಈದ್ ಗೆಟ್ ಟುಗೆದರ್” ಸಮಾರಂಭವೂ ಮನಾಮದ ಉಮ್ಮುಲ್ ಹಸ್ಸಮ್ ಬ್ಯಾಂಗ್’ಕಾಕ್ ಸಭಾಂಗಣದಲ್ಲಿ ನಡೆಯಿತು, ಕಾರ್ಯಕ್ರಮದ ಮೊದಲು ಕ್ವಿಝ್ ನಂತರ ಹಿರಿಯರಿಗೆ ಮತ್ತು ಕಿರಿಯರಿಗೆ ವಿವಿಧ ರೀತಿಯ ಸ್ಪರ್ಧೆಗಳು ನಡೆದವು, ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಕಾರ್ಯಕ್ರಮದ ಕೊನೆಯಲ್ಲಿ ಬಹುಮಾನ ನೀಡಲಾಯಿತು.
ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ ಇಂಡಿಯನ್ ಸೋಶಿಯಲ್ ಫೋರಮ್ ಬಹರೈನ್ ಅಧ್ಯಕ್ಷರಾದ ಜವಾದ್ ಪಾಷ ಮಾತನಾಡಿ ” ಇಂಡಿಯನ್ ಸೋಷಿಯಲ್ ಫೋರಮ್ ಬಹರೈನ್ ಇಲ್ಲಿ ಪ್ರವಾಸಿಯಾಗಿ ಬದುಕುತ್ತಿರುವ ನಮ್ಮ ದೇಶದ ಜನತೆಗೆ ಬಹಳ ಹತ್ತಿರವಾಗಿದ್ದುಕೊಂಡು ಕೆಲಸ ಮಾಡುತ್ತಿದೆ” ಎಂದು ಹೇಳಿದರು, ನಂತರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಇಂಡಿಯನ್ ಸೋಶಿಯಲ್ ಫೋರಮ್ ಕರ್ನಾಟಕ ಘಟಕದ ಅಧ್ಯಕ್ಷರಾದ ಸಿದ್ದೀಕ್ ರವರು ಮಾತನಾಡಿ ” ದೇಶದ ಆಂತರಿಕ ಸಮಸ್ಯೆಗಳ ಬಗ್ಗೆ ಕಳವಳ ವ್ಯಕ್ತ ಪಡಿಸಿದರು, ದೇಶದಲ್ಲಿ ಅಲ್ಪಸಂಖ್ಯಾತ, ಹಿಂದುಳಿದ ಜನತೆಯ ಮೇಲೆ ನಡೆಯುತ್ತಿರುವ ಹಲ್ಲೆ, ದೌರ್ಜನ್ಯ ಕುರಿತು ಪ್ರವಾಸಿಗಳಾದ ನಾವು ಅರ್ಥೈಸಿಕೊಳ್ಳಬೇಕು, ಕುಟುಂಬದ ನೆಮ್ಮದಿಗಾಗಿ ನಾವು ವಿದೇಶಕ್ಕೆ ಬಂದಿದ್ದೇವೆ. ಆದರೆ ದೇಶದಲ್ಲಿ ಯಾರೂ ನೆಮ್ಮದಿಯ ಜೀವನ ಸಾಗಿಸುತ್ತಿಲ್ಲ, , ಮನೆ- ಊರು- ಜಿಲ್ಲೆ-ರಾಜ್ಯ- ದೇಶ ಹೀಗೆ ಎಲ್ಲರಲ್ಲೂ ಪ್ರಸ್ತುತ ಕೊಳಕು ರಾಜಕೀಯ ವ್ಯವಸ್ಥೆ ಬಗ್ಗೆ ಅರಿವು ಮೂಡಿಸಬೇಕು, ಪ್ರವಾಸಿ ಸಹೋದರರು ಕೇವಲ ಮನೆಗೆ ಹಣವನ್ನು ಕೊಡುವ ಯಂತ್ರಗಳಾಗದೆ ಸಮಾಜದಲ್ಲಿ ನಮಗೆ ಗೌರವ ದೊರೆಯುವ ರೀತಿಯಲ್ಲಿ ನಾವು ಬದಲಾವಣೆಯಾಗಬೇಕು ” ಎಂದು ಹೇಳಿದರು, ವೇದಿಕೆಯಲ್ಲಿ ಇಂಡಿಯನ್ ಫ್ರೆಟರ್ನಿಟಿ ಫೋರಮ್ ಕರ್ನಾಟಕ ಘಟಕದ ಅಧ್ಯಕ್ಷರಾದ ಜನಾಬ್ ಇರ್ಷಾದ್ ತುಂಬೆ, ಮತ್ತು ಮೊಹಮ್ಮದ್ ಇಕ್ಬಾಲ್ ಉಪಸ್ಥಿತರಿದ್ದರು, ಕಾರ್ಯಕ್ರಮ ದಲ್ಲಿ ಹಿರಿಯರು ,ಕಿರಿಯರು ಮತ್ತು ಮಹಿಳೆಯರು ಸೇರಿದಂತೆ ಹಲವು ಜನ ಭಾಗಿಯಾಗಿದ್ದರು ಕಾರ್ಯಕ್ರಮವನ್ನು ನಝೀರ್ ಸ್ವಾಗತಿಸಿ ನಿರೂಪಿಸಿದರು, ರಿಯಾಝ್ ತೋಡಾರ್ ವಂದಿಸಿದರು.
