ಜಿಲ್ಲಾ ಸುದ್ದಿ

ಆಟ ಆಡ್ತೀರಾ, ತೆಗೆದು ಬಿಸಾಕ್ತೇನೆ, ಬಂದ್ ಕರೆಯ ಬೆದರಿಕೆ : ಸಂಸದ ನಳಿನ್ ಕುಮಾರ್ ಕಟೀಲ್ ವೀಡಿಯೋ ವೈರಲ್ !!

ವರದಿಗಾರ ಮಂಗಳೂರು : ಮಂಗಳೂರು ಚಲೋಗೆ ಪೊಲೀಸರ ಅನುಮತಿಯಿಲ್ಲದಿದ್ದರೂ ಕಾನೂನನ್ನು ಮೀರಿ ಬೈಕ್ ರಾಲಿ ನಡೆಸಲು ಪ್ರಯತ್ನಿಸಿದ ಕಾರ್ಯಕರ್ತರನ್ನು ಬಂಧಿಸಿದ ಮಂಗಳೂರಿನ ಕದ್ರಿ ಠಾಣೆಯ ಎಸ್ ಐ ಮಾರುತಿ ನಾಯ್ಕ್’ಗೆ ಏಕವಚನ ಪ್ರಯೋಗಿಸಿ ಮಾತನಾಡಿಸಿದ ಸಂಸದ ನಳಿನ್ ಕುಮಾರ್ ಕಟೀಲ್ ವೀಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

ಸಾರ್ವಜನಿಕರ ಎದುರಲ್ಲೇ ಎಸ್ ಐ ಯವರ ಮೇಲೆರಗಿ ಹೋದ ನಳಿನ್, “ನೀವೇನು ಆಟ ಆಡ್ತೀರಾ, ಕಿತ್ತು ಬಿಸಾಕ್ತೇನೆ, ನಿಮ್ಮ ಹೆಸರಲ್ಲೇ ಬಂದ್ ಕರೆ ಕೊಡ್ತೀನಿ ನೀವೇ ಅನುಭವಿಸಬೇಕು” ಎಂದೆಲ್ಲಾ ಎಗರಾಡಿರುವುದು ವೀಡಿಯೋದಲ್ಲಿ ದಾಖಲಾಗಿದೆ. ಓರ್ವ ಸರಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಈ ಘಟನೆಯಲ್ಲಿ ನಳಿನ್,  ಮಾರುತಿ ನಾಯ್ಕರ ಫೋನ್ ಕಿತ್ತುಕೊಳ್ಳುವ ವಿಫಲ ಪ್ರಯತ್ನವನ್ನೂ ಮಾಡಿದ್ದಾರೆ. ಅಲ್ಲಿದ್ದ ಟೇಬಲ್’ಗೆ ಬಡಿದು ರಂಪಾಟ ಮಾಡಿರುವುದು ವೀಡಿಯೋದಲ್ಲಿ  ಕಾಣಿಸುತ್ತದೆ.

 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group