ರಾಷ್ಟ್ರೀಯ ಸುದ್ದಿ

ಟೈಮ್ಸ್ ನೌ ಚರ್ಚೆಯಲ್ಲಿ ಪ್ರವಾದಿ ನಿಂದನೆ: ಕ್ಷಮೆ ಯಾಚಿಸಿದ ಪ್ರಧಾನ ಸಂಪಾದಕ

ವರದಿಗಾರ:ಇಂಗ್ಲೀಷ್ ಸುದ್ದಿ ಮಾಧ್ಯಮ ಟೈಮ್ಸ್ ನೌ’ನಲ್ಲಿ ಇತ್ತೀಚೆಗೆ ನಡೆದ ಚರ್ಚೆಯೊಂದರಲ್ಲಿ ಭಾಗವಹಿಸಿದವರಲ್ಲೊಬ್ಬರು ಪ್ರವಾದಿ ನಿಂದನೆ ಮಾಡಿದ್ದರು. ಅದಕ್ಕಾಗಿ ಚಾನೆಲಿನ ಪ್ರಧಾನ ಸಂಪಾದಕರಾದ ರಾಹುಲ್ ಶಿವಶಂಕರ್ ವೀಕ್ಷಕರ ಕ್ಷಮೆ ಯಾಚಿಸಿದ್ದಾರೆ.

ಸೆಪ್ಟೆಂಬರ್ 3ರಂದು ಟೈಮ್ಸ್ ನೌ ಚಾನೆಲಿನಲ್ಲಿ ‘ರಾಷ್ಟ್ರೀಯ ತನಿಖಾ ದಳದ ವರದಿ’ಯೊಂದರ ಬಗ್ಗೆ ನಡೆದ ಚರ್ಚೆಯಲ್ಲಿ ನಿವೃತ್ತ ಕರ್ನಲ್ ಅರ್.ಎಸ್.ಎನ್. ಸಿಂಗ್ ಪ್ರವಾದಿ ಹಾಗೂ ಪ್ರವಾದಿ ಪತ್ನಿಯವರ ಅವಹೇಳನ ಮಾಡಿದ್ದರು. ಇದಕ್ಕಾಗಿ ಚಾನೆಲಿನ ಪ್ರಧಾನ ಸಂಪಾದಕರಾದ ಆರ್. ಶಿವಶಂಕರ್ ಟ್ವೀಟ್ ಮೂಲಕ ಕ್ಷಮೆ ಯಾಚಿಸಿದ್ದಾರೆ. ಕರ್ನಲ್ ಆರ್.ಎಸ್.ಎನ್ ಸಿಂಗ್ ರ ಹೇಳಿಕೆಯನ್ನು ಖಂಡಿಸುತ್ತಾ, ತಾನು ಐಕ್ಯತೆಯ ಪರ ಹಾಗೂ ಸಮಾಜದ ಐಕ್ಯತೆಯನ್ನು ಹಾಳುಮಾಡುವುದಕ್ಕಾಗಿರುವ ಯಾವುದೇ ಪ್ರಯತ್ನ ತನಗೆ ಅಸಹ್ಯಕರ ಎಂದು ಸ್ಪಷ್ಟನೆ ನೀಡಿದರು.

ಆದರೆ, ಚರ್ಚೆಯ ಸಮಯದಲ್ಲಿ ಕರ್ನಲ್ ಆರ್.ಎಸ್.ಎನ್. ಸಿಂಗ್ ರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಮುಂದುವರೆಯಲು ಅನುಮತಿಸಿದ್ದಕ್ಕಾಗಿ ಚಾನೆಲಿನ ಪ್ರಧಾನ ಸಂಪಾದಕರೂ, ಚರ್ಚೆಯ ನಿರೂಪಕರೂ ಆದ ರಾಹುಲ್ ಶಿವಶಂಕರ್ ವ್ಯಾಪಕ ಟೀಕೆಗೊಳಗಾಗಿದ್ದಾರೆ.

ಮುಂಬೈಯ ರಝಾ ಅಕಾಡೆಮಿ, ಕರ್ನಲ್ ಅರ್.ಎಸ್.ಎನ್ ಸಿಂಗ್’ರ ವಿರುದ್ಧ ಕೇಸು ದಾಖಲಿಸಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group