ರಾಜ್ಯ ಸುದ್ದಿ

ಸಮಾಜದ ಧ್ವನಿಯಾಗಿದ್ದ ಗೌರಿ ಲಂಕೇಶ್ ಹತ್ಯೆಯ ವಿರುದ್ಧ ಸಮಾಜ ಧ್ವನಿಗೂಡಿಸಬೇಕಿದೆ: ಶಾಫಿ ಸಅದಿ

ವರದಿಗಾರ-ಬೆಂಗಳೂರು: ದೇಶದಲ್ಲಿ ತಾಂಡವಾಡುತ್ತಿರುವ ಸೈದ್ಧಾಂತಿಕ ಅಸಹಿಷ್ಣುತೆಗೆ ರಾಜ್ಯ ಕಂಡ ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿದ್ದಾರೆ. ಸೈದ್ಧಾಂತಿಕವಾಗಿ ಎದುರಿಸಲಾಗದೆ ಗುಂಡಿಕ್ಕಿ ಹತ್ಯೆಗೈಯ್ಯುವ ಮೂಲಕ ಅವರ ಶಬ್ದವನ್ನು ಇಲ್ಲವಾಗಿಸಿದ್ದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಇಹ್ಸಾನ್ ರಾಜ್ಯಾಧ್ಯಕ್ಷರಾದ ಮೌಲಾನ ಎನ್.ಕೆ.ಎಂ ಶಾಫಿ ಸಅದಿ ಹೇಳಿಕೆ ನೀಡಿದ್ದು, ಘಟನೆಯನ್ನು ಖಂಡಿಸಿದ್ದಾರೆ.

ದೇಶದಲ್ಲಿ ತಾಂಡವಾಡುತ್ತಿರುವ ಅಸಹಿಷ್ಣುತೆ , ನಿರ್ದಿಷ್ಟ ಸಮುದಾಯಗಳನ್ನು ಗುರಿಯಾಗಿಸಿ ನಡೆಯುವ ದಾಳಿಗಳು ಮತ್ತು ಷಡ್ಯಂತ್ರಗಳನ್ನು ಬಯಲಿಗೆಳೆಯುವವರನ್ನು ಒಂದೋ ಗುಂಡಿಟ್ಟು ಸಾಯಿಸುತ್ತಾರೆ, ಇಲ್ಲವಾದಲ್ಲಿ ಯಾವುದೋ ಪ್ರಕರಣಗಳಲ್ಲಿ ಸಿಲುಕಿಸಿ ಜೈಲಿನೊಳಗೆ ಕಳೆಯುವಂತೆ ಮಾಡಿ ಅವರ ಧ್ವನಿಗಳನ್ನು ಅಡಗಿಸುವಂತಹ ಪ್ರಯತ್ನ ನಿರಂತರವಾಗಿ ನಡೆಯುತ್ತದೆ. ಅದಕ್ಕೆ ಸ್ಪಷ್ಟ ನಿದರ್ಶನವಾಗಿದೆ ಸಂಶೋಧಕ ಎಂ.ಎಂ ಕಲ್ಬುರ್ಗಿ ಹಾಗೂ ಪತ್ರಕರ್ತೆ ಗೌರಿ ಲಂಕೇಶ್ ಎಂದು ಹೇಳಿದ ಶಾಫಿ ಸಅದಿ, ಇಲ್ಲಿನ ನಿರ್ದಿಷ್ಟ ಸಮುದಾಯಗಳನ್ನು ಗುರಿಯಾಗಿಸಿ ನಡೆಯುವ ಆಕ್ರಮಣಗಳನ್ನು ತೀಕ್ಷ್ಣವಾಗಿ ವಿರೋಧಿಸುವ ಟೀಸ್ತಾ ಸೆಟಲ್ವಾಡ್ , ಕನ್ನಯ್ಯರಂತವರನ್ನು ಜೈಲಿನೊಳಗೆ ತಳ್ಳಿ ಅವರ ಧ್ವನಿಗಳನ್ನು ಇಲ್ಲವಾಗಿಸುತ್ತಾರೆ. ಈ ಸಮಾಜಕ್ಕಾಗಿ ಧ್ವನಿಯೆತ್ತಿ ಜೀವವನ್ನು ಬಲಿ ನೀಡಿದ ವ್ಯಕ್ತಿಗಳಿಗೆ ಬೇಕಾಗಿ ಸಮಾಜವು ಧ್ವನಿಯೆತ್ತಲು ಹಿಂದೇಟು ಹಾಕುತ್ತಿರುವುದು ದುರಂತವೆಂದು ಅಭಿಪ್ರಾಯಪಟ್ಟಿದ್ದಾರೆ.

ಎಂ.ಎಂ ಕಲ್ಬುರ್ಗಿ ಕೊಲೆ ಪ್ರಕರಣದ ತನಿಖೆಯು ಸಮಗ್ರವಾಗಿ ನಡೆಯುತ್ತಿದ್ದಲ್ಲಿ ಇಂದು ಗೌರಿ ಲಂಕೇಶ್ ರನ್ನು ಈ ಸಮಾಜ ಕಳೆದುಕೊಳ್ಳಬೇಕಾಗಿ ಬರುತ್ತಿರಲಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರವು ಗೌರಿ ಲಂಕೇಶ್ ರವರ ಹತ್ಯೆಯನ್ನು ಗಂಭೀರವಾಗಿ ಪರಿಗಣಿಸಿ , ದುಷ್ಕರ್ಮಿಗಳನ್ನು ಶೀಘ್ರದಲ್ಲಿ  ಪತ್ತೆ ಹಚ್ಚಬೇಕೆಂದು ಅವರು ಪತ್ರಿಕಾ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group