ರಾಷ್ಟ್ರೀಯ ಸುದ್ದಿ

ತೀವ್ರ ಚಳಿಯಿಂದ ರೈತರು ಅಸ್ವಸ್ಥರಾದರೆ ನಾವು ಆರೈಕೆ ಮಾಡುತ್ತೇವೆ; ರೈತರ ಬೆನ್ನಿಗೆ ನಿಂತ ವೈದ್ಯರು

ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ ವೈದ್ಯರು

ವರದಿಗಾರ (ಡಿ.21): ಕೃಷಿ ಕಾಯ್ದೆಗಳನ್ನು ವಿರೋಧಿಸಿ ದಿಲ್ಲಿಯ ಗಡಿಭಾಗದಲ್ಲಿ ಕಳೆದ ಸುಮಾರು 1 ತಿಂಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಪಂಜಾಬ್‌ನ ನರ್ಸ್‌ಗಳು ಹಾಗೂ ವೈದ್ಯರು ಬೆಂಬಲ ಘೋಷಿಸಿದ್ದು ರವಿವಾರ ಸಿಂಘು ಗಡಿಭಾಗದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

ರೈತರ ಪ್ರತಿಭಟನೆಯನ್ನು ಬೆಂಬಲಿಸಲು ನಾವಿಲ್ಲಿಗೆ ಬಂದಿದ್ದೇವೆ. ತೀವ್ರ ಚಳಿಯಿಂದ ರೈತರು ಅಸ್ವಸ್ಥರಾದರೆ ಅವರ ಆರೈಕೆ ಮಾಡುವುದೂ ನಮ್ಮ ಉದ್ದೇಶವಾಗಿದೆ. ಕೃಷಿ ಕಾಯ್ದೆಯನ್ನು ರದ್ದುಗೊಳಿಸಬೇಕೆಂಬುದು ಪಂಜಾಬ್‌ನ ಪ್ರತಿಯೊಬ್ಬರ ಆಶಯವಾಗಿದೆ ಎಂದು ಲುಧಿಯಾನದ ಆಸ್ಪತ್ರೆಯೊಂದರ ನರ್ಸ್ ಹರ್ಷದೀಪ್ ಕೌರ್ ಹೇಳಿದ್ದಾರೆ.

ಈ ಮಧ್ಯೆ ಟ್ಯಾಟೂ ಕಲಾವಿದರ(ಹಚ್ಚೆ ಹಾಕುವವರು) ತಂಡವೊಂದು ಪ್ರತಿಭಟನೆ ನಡೆಯುತ್ತಿರುವ ಸ್ಥಳದ ಸಮೀಪ ಸ್ಟಾಲ್ ಒಂದನ್ನು ನಿರ್ಮಿಸಿದೆ. ಪಂಜಾಬ್‌ನ ನಕ್ಷೆ, ಸಿಂಹದ ತಲೆ, ರೈತರು ಕಟಾವು ಮಾಡುತ್ತಿರುವುದು, ಕೃಷಿ ಸಾಧನಗಳು ಮತ್ತು ಸಲಕರಣೆಗಳು, ಟ್ರಾಕ್ಟರ್‌ಗಳ ಹಚ್ಚೆ ಹಾಕಿಸಿಕೊಳ್ಳುವುದಕ್ಕೆ ವಿಪರೀತ ಬೇಡಿಕೆಯಿದೆ ಎಂದು ತಂಡದವರು ಹೇಳಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group