ಸುತ್ತ-ಮುತ್ತ

ಯುವ ಸಬಲೀಕರಣ ನಿಗಮ‌ ಸ್ಥಾಪಿಸಲು ‘ಯುವ ಮುನ್ನಡೆ’ಯ ಆಗ್ರಹ

ವರದಿಗಾರ (ಡಿ.19): ಯುವ ಸಬಲೀಕರಣ ನಿಗಮ ಸ್ಥಾಪನೆ, ಯುವಜನ ಹಕ್ಕು ಹಾಗೂ ಯುವಜನ ಆಯೋಗ ಜಾರಿಗೊಳಿಸುಂತೆ ನಗರದ ಯುವ ಮುನ್ನಡೆಯ ಯುವಿಗಳು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸೇರಿದಂತೆ ಸಂಸದ, ಸಚಿವ ಹಾಗೂ ಶಾಸಕರಿಗೆ ಮನವಿ‌ ಸಲ್ಲಿಸಿದ್ದಾರೆ.

ಯುವ ಮುನ್ನಡೆ ತಂಡವು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ, ಸಂಸದ ನಳೀನ್ ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ವೇದವ್ಯಾಸ ಕಾಮತ್ ಹಾಗೂ ಭರತ್ ಶೆಟ್ಟಿಯವರ ಕಚೇರಿಗಳಿಗೆ ಭೇಟಿ ನೀಡಿ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು.

ಈ ಸಂಧರ್ಭ ಯುವ ಮುನ್ನಡೆಯ ಮುಂದಾಳುಗಳಾದ ಅಶ್ವಿನಿ, ಫಾತಿಮಾ ಸಫಾ, ನೇಹಾ, ಆಕಾಶ್, ಪ್ರಿಯಾಂಕ ಪ್ರಾಣೇಶ್ ಮತ್ತಿತರರು ಉಪಸ್ಥಿತಿದರಿದ್ದರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group