ವರದಿಗಾರ-ಸೌದಿ ಅರೇಬಿಯಾ: ತಬೂಕ್ ಐತಿಹಾಸಿಕ ಪ್ರದೇಶಕ್ಕೆ ಭೇಟಿ ಕೊಡಲು ಜಿದ್ದಾದಿಂದ ಪ್ರಯಾಣ ಹೊರಟಿದ್ದ ಐದು ಜನರ ತಂಡ ವಾಹನವು ಸೋಮವಾರ ಬೆಳಿಗ್ಗೆ ತಬೂಕ್ ಬಳಿ ಅಪಘಾತಕ್ಕೀಡಾಗಿದ್ದು, ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ವಾಹನವು ಚಲಾಯಿಸುತಿದ್ದ ಸಂದರ್ಭ ಟಯರ್ ಸಿಡಿದು ಎದುರು ಬದಿಯ ಜಿ.ಎಂ.ಸಿ ಕಾರಿಗೆ ಡಿಕ್ಕಿ ಹೊಡೆದಿದೆ. ಬಳಿಕ ಕಾರು ಸಂಪೂರ್ಣವಾಗಿ ಬೆಂಕಿಯಿಂದ ಹೊತ್ತಿ ಉರಿದಿದೆ.
ಮೃತಪಟ್ಟವರನ್ನು ಬಶೀರ್ (35) ಹಾಗೂ ಸಂಬಂಧಿಕ ಮಹಿಳೆ ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ರಫೀಕ್ ಸಾಸ್ತಾನ್, ರಶೀದ್ ಸಾಸ್ತಾನ್ ಹಾಗೂ ಶಾನ್ವಾಝ್ ಪ್ರಾಣಾಪಾಯದಿಂದ ಪಾರಾಗಿದ್ದು, ಸಮೀಪದ ಕಿಂಗ್ ಫಹದ್ ಹಾಗೂ ಕಿಂಗ್ ಖಾಲಿದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಎಲ್ಲರೂ ಕರ್ನಾಟಕ ರಾಜ್ಯದವರೆಂದು ಹೇಳಲಾಗಿದೆ.
ಅನಿವಾಸಿ ಭಾರತೀಯರು ಅಪಘಾತ ಸಂದರ್ಭದಲ್ಲಿ ನೆರವಾಗಿದ್ದು, ಮುಂದಿನ ಕಾನೂನು ವ್ಯವಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಅಪಘಾತದಲ್ಲಿ ಮೃತಪಟ್ಟ ಬಶೀರ್
