ವರದಿಗಾರ (ಅ.31) ಈದ್ ಮಿಲಾದ್ ಹಿನ್ನೆಲೆಯಲ್ಲಿ ಕಾಶ್ಮೀರದ ಶ್ರೀನಗರದ ಹಝ್ರತ್ ಬಾಲ್ ಮಸೀದಿಗೆ ಪ್ರಾರ್ಥನೆಗಾಗಿ ತೆರಳಲು ಮುಂದಾಗಿದ್ದ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರನ್ನು ಪೊಲೀಸರು ತಡೆದಿದ್ದು , ಮನೆಯಿಂದ ಹೊರಗೆ ಬರಲು ಅನುಮತಿಸಿಲ್ಲ ಎಂದು ಎನ್ ಸಿ.ಆರೋಪಿಸಿದೆ.
“ಜಮ್ಮು ಕಾಶ್ಮೀರ ಆಡಳಿತವು ಡಾ.ಫಾರೂಕ್ ಅಬ್ದುಲ್ಲಾ ಅವರು ತಮ್ಮ ನಿವಾಸದಿಂದ ಹೊರಗೆ ಬರಲು ಬಿಟ್ಟಿಲ್ಲ. ಈದ್ ಮಿಲಾದ್ ಹಿನ್ನೆಲೆಯಲ್ಲಿ ಹಜರತ್ಬಾಲ್ ಮಸೀದಿ ಮತ್ತು ದರ್ಗಾಕ್ಕೆ ತೆರಳಿದ್ದ ಅವರಿಗೆ ತಡೆ ಒಡ್ಡಲಾಗಿದೆ. ಪ್ರಾರ್ಥನೆ ಮಾಡುವ ಮೂಲಭೂತ ಹಕ್ಕಿನ ಉಲ್ಲಂಘನೆಯನ್ನು ಜೆಕೆಎನ್ಸಿ ಖಂಡಿಸುತ್ತದೆ, ವಿಶೇಷವಾಗಿ ಮೀಲಾದ್ ಸಂದರ್ಭದಲ್ಲಿ ಈ ಕೃತ್ಯ ಖಂಡನೀಯ ಎಂದು ಎನ್.ಸಿ.ಟ್ವೀಟ್ ಮಾಡಿದ.
ಮಾಜಿ ಮುಖ್ಯಮಂತ್ರಿ ಮತ್ತು ಪಿಡಿಪಿ ಮುಖ್ಯಸ್ಥ ಮೆಹಬೂಬಾ ಮುಫ್ತಿ ಕೂಡ ಈ ಕ್ರಮವನ್ನು ಖಂಡಿಸಿದ್ದು, ಪ್ರಾರ್ಥನೆಯ ಹಕ್ಕುಗಳ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ಖಂಡಿಸಿದ್ದಾರೆ..
