ವರದಿಗಾರ (ಅ.31) ಬಿಹಾರದ ಮುಂಗರ್ ನಲ್ಲಿ ನಡೆದ ಗುಂಡಿನ ದಾಳಿ ಕೂಡ ಹಿಂದುತ್ವದ ಮೇಲಿನ ದಾಳಿಯಾಗಿದೆ. ಆದರೆ ಈ ಬಗ್ಗೆ ಬಿಜೆಪಿ ಅಥವಾ ರಾಜ್ಯಪಾಲರುಗಳು ಮಾತನಾಡುತ್ತಿಲ್ಲ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಕುಟುಕಿದ್ದಾರೆ.
“ಮುಂಗರ್ ಗುಂಡಿನ ದಾಳಿ ಹಿಂದುತ್ವದ ಮೇಲಿನ ಆಕ್ರಮಣವಾಗಿದೆ. ಅಂತಹ ಘಟನೆ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಅಥವಾ ರಾಜಸ್ಥಾನದಲ್ಲಿ ಸಂಭವಿಸಿದ್ದರೆ, ರಾಜ್ಯಪಾಲರು ಮತ್ತು ಬಿಜೆಪಿ ನಾಯಕರು ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವಂತೆ ಒತ್ತಾಯಿಸುದ್ದರು. ಆದರೆ ಈಗ ಬಿಹಾರ ರಾಜ್ಯಪಾಲರು ಮತ್ತು ಬಿಜೆಪಿ ನಾಯಕರು ಏಕೆ ಪ್ರಶ್ನಿಸುತ್ತಿಲ್ಲ? ಎಂದು ರಾವತ್ ಕೇಳಿದ್ದಾರೆ.
ಅಕ್ಟೋಬರ್ 26 ರಂದು ಮುಂಗರ್ನಲ್ಲಿ ದುರ್ಗಾ ದೇವಿಯ ವಿಗ್ರಹ ವಿಸರ್ಜನೆ ಸಂದರ್ಭದಲ್ಲಿ ಹಿಂಸಾಚಾರ ಭುಗಿಲೆದ್ದಾಗ ಪೊಲೀಸರು ನಡೆಸಿದ ಗೋಲಿಬಾರ್ ನಲ್ಲಿ ಓರ್ವ ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದರು.
