ವರದಿಗಾರ (ಅ.31) ಗುಜರಾತ್ ನ ವಾರಾಣಸಿಯಲ್ಲಿ ನಿರ್ಮಾಣಗೊಂಡ ದೀನ್ ದಯಾಳ್ ಉಪಾಧ್ಯಾಯ ಪ್ರತಿಮೆಗಾಗಿ ಯೋಗಿ ಸರ್ಕಾರ ಸ್ಲಂ ಪ್ರದೇಶಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿದ್ದು, ಇದರಿಂದ ಸ್ಲಂನ 250ಕ್ಕೂ ಅಧಿಕ ನಿವಾಸಿಗಳು ನಿರಾಶ್ರಿತರಾಗಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಫೆಬ್ರವರಿಯಲ್ಲಿ ದೀನ್ ದಯಾಳ್ ಉಪಾಧ್ಯಾಯ ಪ್ರತಿಮೆಯನ್ನು ಉದ್ಘಾಟಿಸಿದ್ದಾರೆ. ಆದರೆ ನಿರಾಶ್ರಿತರಿಗೆ ಇದುವರೆಗೆ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಟ್ಟಿಲ್ಲ. ಇದರಿಂದ ಅವರು ಬೀದಿಗಳಲ್ಲಿ ಮಲಗುವಂತಾಗಿದೆ.
ಕಳೆದ ಆರು ತಿಂಗಳಿಂದ ನಿರಾಶ್ರಿತರು ವಾರಾಣಸಿಯ ಸುತ್ತಮುತ್ತಲಿನ ಫುಟ್ಪಾತ್ಗಳು ಮತ್ತು ದೇವಾಲಯಗಳಲ್ಲಿ ವಾಸಿಸುತಿದ್ದಾರೆ ಎಂದು ನ್ಯಾಷನಲ್ ಹೆರಾಲ್ಡ್ ವರದಿ ಮಾಡಿದೆ. ವಾರಣಾಸಿ ಪ್ರಧಾನಿ ಮೋದಿಯ ಲೋಕಸಭಾ ಕ್ಷೇತ್ರವಾಗಿದೆ.
63 ಅಡಿ ಎತ್ತರದ ಪ್ರತಿಮೆಯನ್ನು ವಾರಾಣಸಿಯ ರಾಜ್ಘಾಟ್ ಸೇತುವೆಯ ಬಳಿಯ ಪಡಾವೊದಲ್ಲಿ ಗಂಗಾ ನದಿಯ ತಟದ ಮೇಲೆ ನಿರ್ಮಿಸಲಾಗಿದೆ.
60 ವರ್ಷಗಳಿಂದ ಅಲ್ಲಿ ವಾಸಿಸುತ್ತಿದ್ದ ಕುಟುಂಬಗಳು ಸ್ಥಳೀಯ ಆಡಳಿತವು ತೆರವುಗೊಳಿಸಿದ್ದು, ಈ ವೇಳೆ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿತ್ತು.
