ವರದಿಗಾರ (ಅ.31) ಮಹಾಮೈತ್ರಿ ಮಾತ್ರ ಬಿಹಾರದ ಜನತೆಗೆ ಉತ್ತಮ ಭವಿಷ್ಯ ಖಾತರಿಪಡಿಸುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಹೇಳಿದ್ದಾರೆ.
ತಮ್ಮ ಯೂಟ್ಯೂಬ್ ವಾಹಿನಿಯಲ್ಲಿ ಚುನಾವಣಾ ಪ್ರಚಾರದ ಅನುಭವ ಹಂಚಿಕೊಂಡಿರುವ ರಾಹುಲ್ ಗಾಂಧಿ, ಬಿಹಾರದ ಜನತೆಗೆ ಬದಲಾವಣೆ ಬೇಕಿದೆ ಮತ್ತು ಮಹಾಘಟಬಂಧನ ಜನರಿಗೆ ಉತ್ತಮ ಭವಿಷ್ಯದ ಭರವಸೆ ನೀಡುತ್ತಿದೆ ಎಂದರು.
ತಮ್ಮ ಪ್ರಚಾರದ ವೇಳೆ, ಬಿಹಾರದ ಜನತೆಗೆ ಬದಲಾವಣೆಗೆ ಬೇಕು ಎಂಬ ಅನುಭವವಾಯಿತು ಎಂದಿದ್ದಾರೆ. ರಾಹುಲ್ ರಾಜ್ಯದ ಜನತೆಗೆ ಉತ್ತಮ ಭವಿಷ್ಯದ ಭರವಸೆ ನೀಡಿದರು.
ಬಿಹಾರದ ವಿಧಾನಸಭಾ ಚುನಾವಣೆ ಮೂರು ಹಂತದಲ್ಲಿ ಮತದಾನ ನಡೆಯುತ್ತಿದೆ. ಅ.28 ಮೊದಲ, ನ.3 ಹಾಗೂ ನ.7ರಂದು ಕೊನೆಯ ಹಂತದ ಚುನಾವಣೆ ನಡೆಯಲಿದೆ. ನ.10ರಂದು ಮತಎಣಿಕೆ ನಡೆಯಲಿದೆ.
