ವರದಿಗಾರ (ಅ.31) ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿದ ಬಳಿಕ ಏನು ಬದಲಾಗಿದೆ, ಹಿಂದುತ್ವ ಅಂದರೆ ರಾಷ್ಟ್ರೀಯತೆ ಅಲ್ಲವೇ ಎಂದು ಶಿವಸೇನಾ ಪ್ರಶ್ನಿಸಿದೆ.
ಪಕ್ಷದ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಈ ಕುರಿತು ಪ್ರಶ್ನಿಸಿರುವ ಶಿವಸೇನಾ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಏನು ಬದಲಾಗಿದೆ ಎಂದು ವ್ಯಂಗವಾಡಿದೆ.
ಕಾಶ್ಮೀರದಲ್ಲಿ ರಾಷ್ಟ್ರಧ್ವಜ ಹಾರಿಸಲು ಮುಂದಾದ ಜನರನ್ನು ಪೊಲೀಸರು ತಡೆದಿದ್ದೇಕೆ ಎಂದೂ ಪ್ರಶ್ನಿಸಿದೆ. ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ತ್ರಿವರ್ಣ ಧ್ವಜ ಹಾರಿಸಲು ಯತ್ನಿಸುತ್ತಿದ್ದಾಗ ಮೂವರನ್ನು ತಡೆದು ಪೊಲೀಸರು ಬಂಧಿಸಿದ್ದಾರೆ. ಮುಂಬೈ ಅನ್ನು ಪಾಕ್ ಆಕ್ರಮಿತ ಕಾಶ್ಮೀರ ಎಂದು ಕರೆಯುವ ನಕಲಿ ಧೈರ್ಯಶಾಲಿಗೆ ಕೇಂದ್ರ ಸರ್ಕಾರವು ಭದ್ರತೆ ನೀಡಿದರೆ, ಕಾಶ್ಮೀರದಲ್ಲಿ ತ್ರಿವರ್ಣವನ್ನು ಹಾರಿಸುವ ಯುವಕರನ್ನು ಪೊಲೀಸರು ಎಳೆದುಕೊಂಡು ಹೋಗುವುದೇಕೇ? ಎಂದು ವ್ಯಂಗ್ಯವಾಡಿದೆ.
