ವಿದೇಶ ಸುದ್ದಿ

ಫ್ರಾನ್ಸ್ ನಲ್ಲಿ ಪ್ರವಾದಿ ಬಗ್ಗೆ ಅವಹೇಳನಕಾರಿ ವ್ಯಂಗ್ಯಚಿತ್ರ: ಸೌದಿ ಅರೇಬಿಯಾ ಖಂಡನೆ

ವರದಿಗಾರ (ಅ.31) ಪ್ರವಾದಿ ಮುಹಮ್ಮದ್ ಅವರನ್ನು ಆಕ್ಷೇಪಾರ್ಹವಾಗಿ ವ್ಯಂಗ್ಯಚಿತ್ರ ಮಾಡಿದ ಮತ್ತು ಇಸ್ಲಾಂ ಧರ್ಮವನ್ನು ಭಯೋತ್ಪಾದನೆಯೊಂದಿಗೆ ಜೋಡಿಸಿದ ಪ್ರಯತ್ನಗಳನ್ನು ಸೌದಿ ಅರೇಬಿಯಾ ತೀವ್ರವಾಗಿ ಖಂಡಿಸಿದೆ.

ವಿದೇಶಾಂಗ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿಕೆಯೊಂದರಲ್ಲಿ ಗಲ್ಫ್ ದೇಶ ಸೌದಿ ಅರೇಬಿಯಾವು ಭಯೋತ್ಪಾದನೆಯ ಎಲ್ಲಾ ಕೃತ್ಯಗಳನ್ನು ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.

ಅಭಿವ್ಯಕ್ತಿಯ ಸ್ವಾತಂತ್ರ್ಯದ ನೆಪದಲ್ಲಿ ಇಂತಹ ಕೃತ್ಯಗಳು ಖಂಡನೀಯ ಎಂದು ಹೇಳಿದೆ. “ಅಭಿವ್ಯಕ್ತಿ ಮತ್ತು ಸಂಸ್ಕೃತಿಯ ಸ್ವಾತಂತ್ರ್ಯವು ಗೌರವ, ಸಹಿಷ್ಣುತೆ ಮತ್ತು ಶಾಂತಿಯ ದಾರಿದೀಪವಾಗಿರಬೇಕು, ಅದು ದ್ವೇಷ, ಹಿಂಸೆ ಮತ್ತು ಉಗ್ರವಾದವನ್ನು ಉಂಟುಮಾಡುವ ಮತ್ತು ಸಹಬಾಳ್ವೆಗೆ ವಿರುದ್ಧವಾದ ಕೃತ್ಯಗಳು ಮತ್ತು ಕಾರ್ಯಗಳನ್ನು ತಿರಸ್ಕರಿಸುತ್ತದೆ” ಎಂದು ಸರ್ಕಾರದ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಟರ್ಕಿಯ ಅಧ್ಯಕ್ಷ ತಯ್ಯಿಬ್ ಎರ್ದೊಗಾನ್ ಕೂಡ ಫ್ರಾನ್ಸ್ ಅಧ್ಯಕ್ಷರ ಮ್ಯಾಕ್ರೋನ್ ಹೇಳಿಕೆಯನ್ನು ಖಂಡಿಸಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯದ ನೆಪದಲ್ಲಿ ಪ್ರವಾದಿಯನ್ನು ಅವಮಾನಿಸುವ ವ್ಯಂಗ್ಯಚಿತ್ರಗಳ ಪ್ರದರ್ಶನಕ್ಕೆ ಅವಕಾಶ ನೀಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಫ್ರೆಂಚ್ ಇಸ್ಲಾಮೋಫೋಬಿಯಾ ಹರಡಿದ್ದಾರೆ ಎಂದು ಆರೋಪಿಸಿ ಗಲ್ಫ್ ರಾಷ್ಟ್ರಗಳಲ್ಲಿ ಫ್ರಾನ್ಸ್ ಉತ್ಪನ್ನಗಳನ್ನು ಬಹಿಷ್ಕರಿಸುವ ಅಭಿಯಾನ ನಡೆಯುತ್ತಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group