ರಾಷ್ಟ್ರೀಯ ಸುದ್ದಿ

ಮುಖ್ತಾರ್ ಅಬ್ಬಾಸ್ ನಖ್ವಿ ಕ್ಷಮೆಯಾಚನೆಗೆ ವೆಲ್ಫೇರ್ ಪಾರ್ಟಿ ಆಗ್ರಹ

ವರದಿಗಾರ (ಅ.31) ವೆಲ್ಫೇರ್ ಪಾರ್ಟ್ ಆಫ್ ಇಂಡಿಯಾ –ಡಬ್ಲ್ಯುಪಿಐ ಒಂದು ಕಟ್ಟರ್ವಾದಿ ಸಂಘಟನೆ ಎಂದು ಕರೆದಿದ್ದಕ್ಕಾಗಿ ಬಿಜೆಪಿ ಸರ್ಕಾರ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕೆಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಡಾ. ಎಸ್ ಕ್ಯು ಆರ್ ಇಲಿಯಾಸ್ ಆಗ್ರಹಿಸಿದ್ದಾರೆ.

ಬಿಜೆಪಿ ಸರ್ಕಾರದ ಕೇಂದ್ರ ಮಂತ್ರಿ ಮುಖ್ತಾರ್ ಅಬ್ಬಾಸ್ ನಖ್ವಿ ಅವರ ಆಪಾದನೆ ಆಧಾರವಿಲ್ಲದ ಹಾಗೂ ಜಾತ್ಯತೀತ, ಯಾವುದೇ ಸದಸ್ಯತ್ವ ಇಲ್ಲದ ಸ್ವಾವಲಂಬಿ ಚುನಾವಣಾ ಆಯೋಗ ದಲ್ಲಿ ನೋಂದಾಯಿತ ಪಕ್ಷವಾದ ವೆಲ್ಫೇರ್ ಪಾರ್ಟಿಯ ವಿರುದ್ಧ ಅಪಪ್ರಚಾರದ ಉದ್ದೇಶದಿಂದ ಹೇಳಿದ ಹೇಳಿಕೆ ಎಂದು ಅವರು ಖಂಡಿಸಿದ್ದಾರೆ.

ಬಿಹಾರ ರಾಜ್ಯದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಸರ್ಕಾರವು ತನ್ನ ಹಿಡಿತ ಕಳೆದುಕೊಳ್ಳುವ ಹತಾಶೆಯು ಮುಖ್ತಾರ್ ಅಬ್ಬಾಸ್ ನಖ್ವಿ ಅವರ ಸಂದರ್ಶನದಲ್ಲಿ ಕಾಣಿಸಿಕೊಳ್ಳುತ್ತದೆ ಹಾಗೂ ಬಿಜೆಪಿ ಪಕ್ಷವು ತಮ್ಮ ಪ್ರಸಿದ್ಧ ವಿಧಾನಗಳಾದ ಮತದಾರರ ದಿಕ್ಕು ಬದಲಾಯಿಸುವುದು ಮತ್ತು ಧ್ರುವಿಕರಿಸುವುದನ್ನು ಬಳಸುತ್ತಿದೆ ಆದರೆ ಜನರು ಇದನ್ನು ತಿರಸ್ಕರಿಸುತ್ತಾರೆ ಎಂದು ಇಲಿಯಾಸ್ ಹೇಳಿದರು.

ವೆಲ್ಫೇರ್ ಪಾರ್ಟ್ ಆಫ್ ಇಂಡಿಯಾ ಒಂದು ಜಾತ್ಯತೀತ ಮೌಲ್ಯ ಆಧಾರಿತ ಪಕ್ಷವಾಗಿದ್ದು ಹಾಗೂ ಸಮಾಜದಲ್ಲಿ ಹಿಂದುಳಿದ ವರ್ಗಗಳ ರಾಜಕೀಯ ಸಬಲೀಕರಣಕ್ಕಾಗಿ ಶ್ರಮಿಸುತ್ತಿದೆ ಮತ್ತು ಜನರ ಸಮಸ್ಯೆಗಳನ್ನು ಯಾವಾಗಲೂ ಎತ್ತಿ ಹಿಡಿಯುತ್ತದೆ. ಒಂದು ರಾಜಕೀಯ ಪಕ್ಷ ವಾಗಿದ್ದರಿಂದ ಯಾವುದೇ ಪಕ್ಷವನ್ನು ಸಮರ್ಥಿಸುವ ಹಕ್ಕಿದೆ ಹಾಗೂ ಅದರೊಂದಿಗೆ ಮೈತ್ರಿ ಮಾಡಿಕೊಳ್ಳುವ ಹಾಕಿದೆ ಇಲಿಯಾಸ್ ಹೇಳಿದರು.
ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದಲ್ಲಿ ಬಿಜೆಪಿ ಪಕ್ಷವು ನ್ಯಾಯೊಚಿತವಾಗಿ ಭಾಗವಹಿಸಬೇಕು ಹಾಗೂ ಇತರೆ ಪಕ್ಷಗಳನ್ನು ಭಾಗವಹಿಸಲು ಹಾಗೂ ಯಾವುದೇ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಬಿಡಬೇಕೆಂದು ಎಸ್ ಕ್ಯು ಆರ್ ಇಲಿಯಾಸ್ ಹೇಳಿದ್ದಾರೆ..

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group