ರಾಷ್ಟ್ರೀಯ ಸುದ್ದಿ

ಭಾರತದ ಭೂ ಪ್ರದೇಶ ಚೀನಾದಿಂದ ವಶ; ಸತ್ಯ ಏನೆಂಬುದು ಭಾಗವತ್ ಗೂ ಗೊತ್ತಿದೆ; ರಾಹುಲ್ ಗಾಂಧಿ

“ನಮ್ಮ ಭೂಮಿಯನ್ನು ಚೀನಾ ಆಕ್ರಮಿಸಿದೆ, ಇದಕ್ಕೆ ಭಾರತ ಸರ್ಕಾರ ಹಾಗೂ ಆರ್ ಎಸ್ ಎಸ್ ಅವಕಾಶ ಕಲ್ಪಿಸಿದೆ”

ವರದಿಗಾರ (ಅ.25): ಭಾರತದ ಭೂ ಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡಿರುವುದು ರಾಷ್ಟ್ರೀಯ ಸ್ವಯಂ ಸೇವಕ ಸಂಘ -ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ತಿಳಿದಿದೆ, ಆದರೆ ಅದನ್ನು ಅವರು ಹೇಳಲು ಭಯಪಡುತ್ತಿದ್ದಾರೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಈ ಬಗ್ಗೆ ಟ್ವಿಟ್ ಮಾಡಿರುವ ರಾಹುಲ್, ಹೃದಯದ ಆಳದಲ್ಲಿ , ಮೋಹನ್ ಭಾಗವತ್ ಅವರಿಗೆ ಸತ್ಯ ಏನು ಎಂಬುದು ತಿಳಿದಿದೆ. ನಮ್ಮ ಭೂಮಿಯನ್ನು ಚೀನಾ ಆಕ್ರಮಿಸಿದೆ ಎಂಬ ಸತ್ಯ ಅವರಿಗೆ ತಿಳಿದಿದೆ. ಇದಕ್ಕೆ ಭಾರತ ಸರ್ಕಾರ ಹಾಗೂ ಆರ್ ಎಸ್ ಎಸ್ ಅವಕಾಶ ಕಲ್ಪಿಸಿದೆ ಎಂದು ಆರೋಪಿಸಿದ್ದಾರೆ. ಈ ಟ್ವೀಟ್ ಗೆ ವಿಜಯ ದಶಮಿ ಸಂದರ್ಭದಲ್ಲಿ ಮೋಹನ್ ಭಾಗವತ್ ಭಾಷಣದ ವರದಿಯ ಸ್ಕ್ರೀನ್ ಶಾಟ್ ಅಪ್ ಲೋಡ್ ಮಾಡಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group