ವೀಡಿಯೋ

ಬಿಹಾರ : ಬಿಜೆಪಿಯ ಪ್ರಚಾರ ವಾಹನದ ಫ್ಲೆಕ್ಸ್ ಗಳನ್ನು ಹರಿದು ಹಾಕಿ ಪ್ರಚಾರಕರನ್ನು ಓಡಿಸಿದ ಗ್ರಾಮಸ್ಥರು!

ವರದಿಗಾರ (ಅ.25) ಬಿಹಾರ ವಿಧಾನಸಭಾ ಚುನಾವಣೆಯ ಪ್ರಚಾರ ಕಾರ್ಯ ಬಿರುಸುಗೊಳ್ಳುತ್ತಿದ್ದಂತೆ ಬಿಜೆಪಿ ನೇತೃತ್ವದ ಮೈತ್ರಿ ಕೂಟದ ವಿರುದ್ಧ ಜನಾಕ್ರೋಶ ಭುಗಿಲೆದ್ದಿದೆ.

ಪ್ರಚಾರಕ್ಕೆ ಬಂದ ಬಿಜೆಪಿ ಅಭ್ಯರ್ಥಿಗಳು ಮತ್ತು ಮುಖಂಡರ ವಿರುದ್ಧ ಪ್ರತಿಭಟನೆ, ಘೇರಾವ್ ಹಾಕುವುದು ಇಲ್ಲಿ ಸಾಮಾನ್ಯವಾಗಿದೆ.
ಬಿಹಾರದ ಹಳ್ಳಿಯೊಂದಕ್ಕೆ ಬಿಜೆಪಿಯ ಪ್ರಚಾರ ವಾಹನ ಹೋದಾಗ ಮಹಿಳೆಯರು ಸೇರಿದಂತೆ ಗ್ರಾಮಸ್ಥರು ಆಕ್ರೋಶಗೊಂಡು ವಾಹನಸ ಮೇಲೆ ಅಂಟಿಸಿದ್ದ ಫ್ಲೆಕ್ಸ್ ಗಳನ್ನು ಹರಿದು ಹಾಕಿ ಪ್ರಚಾರಕರನ್ನು ಓಡಿಸುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ.

ವೀಡಿಯೋ ವೀಕ್ಷಿಸಿ:


ಈ ಬಗ್ಗೆ ವಾಹಿನಿಯೊಂದರ ವರದಿಗಾರ ವಾಹನದ ಚಾಲಕನನ್ನು ಮಾತನಾಡಿಸಿದಾಗ, ಜನರ ಆಕ್ರೋಶ ಸರಿಯಾಗಿದೆಯೇ ಇದೆ ಎಂದು ಹೇಳುತ್ತಿರುವುದು ಕೂಡ ದೃಶ್ಯದಲ್ಲಿದೆ. ನಾನು ಉತ್ತರ ಪ್ರದೇಶದಿಂದ ಇಲ್ಲಿಗೆ ಕೆಲಸಕ್ಕಾಗಿ ಬಂದಿದ್ದೇನೆ, ಪ್ರಚಾರ ವಾಹನದಲ್ಲಿ ಹಳ್ಳಿ ಹಳ್ಳಿಗೆ ಹೋಗುತ್ತೇನೆ, ಇಲ್ಲಿನ ಕೆಟ್ಟದಾದ ರಸ್ತೆಗಳು, ಮೂಲಸೌಕರ್ಯದ ಕೊರತೆಯಿಂದ ಜನ ಬೇಸತ್ತಿದ್ದಾರೆ, ಅವರ ಆಕ್ರೋಶ ಸರಿಯಾಗೇ ಇದೆ ಎಂದು ಆತ ಹೇಳುತ್ತಿರುವುದು ವಿಡಿಯೋದಲ್ಲಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೀಡಿಯೋ ವೀಕ್ಷಿಸಿ:

https://twitter.com/DKforIND/status/1320268245564182528?s=19

 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group