ರಾಷ್ಟ್ರೀಯ ಸುದ್ದಿ

ಸಿಎಎ ಯಾವುದೇ ನಿರ್ದಿಷ್ಟ ಧಾರ್ಮಿಕ ಸಮುದಾಯವನ್ನು ವಿರೋಧಿಸುವುದಿಲ್ಲ: ಮೋಹನ್ ಭಾಗವತ್

“ಮುಸ್ಲಿಂ ಜನಸಂಖ್ಯೆಯನ್ನು ನಿಯಂತ್ರಿಸುವುದಕ್ಕಾಗಿ ಈ ಕಾನೂನನ್ನು ತರಲಾಗಿದೆ ಎಂಬ ಸುಳ್ಳು ಪ್ರಚಾರದ ಮೂಲಕ ನಮ್ಮ ಮುಸ್ಲಿಂ ಸಹೋದರರನ್ನು ದಾರಿ ತಪ್ಪಿಸಲಾಗಿದೆ”

“ನಮ್ಮನ್ನು ದಾರಿತಪ್ಪಿಸಲು ನಾವೇನು ಮಕ್ಕಳಲ್ಲ, CAA ಮುಸ್ಲಿಮರ ಬಗ್ಗೆ ಅಲ್ಲದಿದ್ದರೆ, ಧರ್ಮದ ಎಲ್ಲಾ ಪ್ರಸ್ತಾಪಗಳನ್ನೇ ಕಾನೂನಿನಿಂದ ತೆಗೆದುಹಾಕಿ” : ಅಸದುದ್ದೀನ್ ಓವೈಸಿ

ವರದಿಗಾರ (ಅ.25): ಪೌರತ್ವ ತಿದ್ದುಪಡಿ ಕಾಯ್ದೆ-ಸಿಎಎ ಯಾವುದೇ ನಿರ್ದಿಷ್ಟ ಧಾರ್ಮಿಕ ಸಮುದಾಯವನ್ನು ವಿರೋಧಿಸುವುದಿಲ್ಲ. ಮುಸ್ಲಿಂ ಜನಸಂಖ್ಯೆಯನ್ನು ನಿಯಂತ್ರಿಸುವುದಕ್ಕಾಗಿ ಈ ಕಾನೂನನ್ನು ತರಲಾಗಿದೆ ಎಂಬ ಸುಳ್ಳು ಪ್ರಚಾರದ ಮೂಲಕ ನಮ್ಮ ಮುಸ್ಲಿಂ ಸಹೋದರರನ್ನು ದಾರಿ ತಪ್ಪಿಸಲಾಗಿದೆ, ಈ ಕಾರಣದಿಂದಾಗಿ ಪ್ರತಿಭಟನೆಗಳು ನಡೆದವು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಈ ಹೇಳಿಕೆಗೆ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಎಐಎಂಐಎಂ ಸಂಸದ ಅಸದುದ್ದೀನ್ ಓವೈಸಿ, ನಮ್ಮನ್ನು ದಾರಿತಪ್ಪಿಸಲು ನಾವೇನು ಮಕ್ಕಳಲ್ಲ. ಸಿಎಎ ಮತ್ತು ಎನ್‌ಆರ್‌ಸಿ ಏನು ಮಾಡುತ್ತವೆ ಎಂಬ ಬಗ್ಗೆ ಬಿಜೆಪಿ ಒಂದು ಮಾತನ್ನೂ ಹೇಳಲಿಲ್ಲ. ಆ ಕಾಯ್ದೆಗಳು ಮುಸ್ಲಿಮರ ಬಗ್ಗೆ ಅಲ್ಲದಿದ್ದರೆ, ಧರ್ಮದ ಎಲ್ಲಾ ಪ್ರಸ್ತಾಪಗಳನ್ನೇ ಕಾನೂನಿನಿಂದ ತೆಗೆದುಹಾಕಿ ಎಂದು ಉವೈಸಿ ಟ್ವಿಟರ್‌ನಲ್ಲಿ ಸವಾಲು ಹಾಕಿದ್ದಾರೆ.

ಸಿಎಎ ಬಳಸಿ, ಅವಕಾಶವಾದಿಗಳು ಪ್ರತಿಭಟನೆಯ ಹೆಸರಿನಲ್ಲಿ ಸಂಘಟಿತ ಹಿಂಸಾಚಾರವನ್ನು ನಡೆಸಿದರು ಎಂದು ಭಾಗವತ್ ದೂರಿದ್ದಾರೆ.
ಕಾಂಗ್ರೆಸ್ ಮತ್ತು ಆರ್‌ಜೆಡಿ ಪಕ್ಷಗಳ ಮೇಲೂ ವಾಗ್ದಾಳಿ ನಡೆಸಿರುವ ಉವೈಸಿ, ನಾವು ಪೌರತ್ವದ ಆಧಾರದ ಮೇಲೆ ಧರ್ಮವನ್ನು ಸೇರಿಸುವ ಕಾನೂನಿನ ವಿರುದ್ಧ ಪ್ರತಿಭಟಿಸುತ್ತೇವೆ. ಪ್ರತಿಭಟನೆಯ ಸಮಯದಲ್ಲಿ ನಿಮ್ಮ ಮೌನವನ್ನು ಮರೆಯಲಾಗುವುದಿಲ್ಲ. ಬಿಜೆಪಿ ನಾಯಕರು ಸೀಮಾಂಚಲ್ ಜನರನ್ನು ನುಸುಳುಕೋರರು ಎಂದು ಕರೆದಾಗ, ಆರ್‌ಜೆಡಿ-ಕಾಂಗ್ರೆಸ್ ಒಮ್ಮೆಯೂ ಬಾಯಿ ತೆರೆಯಲಿಲ್ಲ ಎಂದು ಓವೈಸಿ ಟೀಕಾಪ್ರಹಾರ ನಡೆಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group