Uncategorized

ಬಿಹಾರಕ್ಕೆ ಉಚಿತ ವ್ಯಾಕ್ಸಿನ್; ದೇಶದ ಇತರ ರಾಜ್ಯಗಳು ಪಾಕಿಸ್ತಾನ ಹಾಗೂ ಬಾಂಗ್ಲಾದೇಶಕ್ಕೆ ಸೇರಿದೆಯೇ: ಉದ್ಧವ್ ಠಾಕ್ರೆ ಕಿಡಿ 

Uddhav-Thackeray

“ಒಂದು ವರ್ಷದಿಂದ ಸರಕಾರವನ್ನು ಉರುಳಿಸುತ್ತೇವೆ ಎಂದು ಹೇಳಲಾಗುತ್ತಿದೆ, ಧೈರ್ಯವಿದ್ದರೆ ಉರುಳಿಸಿ ತೋರಿಸಿ”

ವರದಿಗಾರ (ಅ.25): ಮುಂಬೈನಲ್ಲಿ ಶಿವಸೇನೆಯ ವಾರ್ಷಿಕ ದಸರಾ ರಾಲಿಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಭಾನುವಾರ ಬಿಜೆಪಿಯ ವಿರುದ್ಧ ಹರಿಹಾಯ್ದರು.

ಹಿಂದುತ್ವದ ಬಗ್ಗೆ ನಮಗೆ ಕೇಳಲಾಗುತ್ತಿದೆ, ರಾಜ್ಯದಲ್ಲಿ ದೇವಾಲಯಗಳನ್ನು ನಾವು ಏಕೆ ಮತ್ತೆ ತೆರೆಯುತ್ತಿಲ್ಲ ಎಂದು ಅವರು ಕೇಳುತ್ತಾರೆ. ನನ್ನ ಹಿಂದುತ್ವವು ಬಾಳಾ ಸಾಹೇಬ್ ಠಾಕ್ರೆಗಿಂತ ಭಿನ್ನವಾಗಿದೆ ಎಂದು ಅವರು ಹೇಳುತ್ತಾರೆ. ನಿಮ್ಮ ಹಿಂದುತ್ವವು ಗಂಟೆಗಳು ಮತ್ತು ಪಾತ್ರೆಗಳನ್ನು ಬಾರಿಸುವ ಹಿಂದುತ್ವವಾದರೆ ನಮ್ಮದು ಅದಲ್ಲ, ನಮ್ಮ ಹಿಂದುತ್ವವನ್ನು ಪ್ರಶ್ನಿಸುವವರು ಬಾಬರಿ ಮಸೀದಿಯ ಧ್ವಂಸದ ಸಮಯದಲ್ಲಿ ಬಾಲದ ಹಿಂದೆ ಮುದುರಿಕೊಂಡಿದ್ದರು ಎಂದು ಉದ್ಧವ್ ತಿರುಗೇಟು ನೀಡಿದ್ದಾರೆ.

ಈ ತಿಂಗಳ ಆರಂಭದಲ್ಲಿ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ತಮಗೆ ಬರೆದ ಪತ್ರವನ್ನು ಠಾಕ್ರೆ ಉಲ್ಲೇಖಿಸಿದರು.
ರಾಜ್ಯದಲ್ಲಿ ಪೂಜಾ ಸ್ಥಳಗಳನ್ನು ಮತ್ತೆ ತೆರೆಯುವಂತೆ ರಾಜ್ಯಪಾಲರು ಸೋಮವಾರ ಪತ್ರಬರೆದು ಠಾಕ್ರೆಯನ್ನು ಒತ್ತಾಯಿಸಿದ್ದರು.
ನಾನು ಮುಖ್ಯಮಮತ್ರಿ ಆದ ದಿನದಿಂದಲೂ ರಾಜ್ಯ ಸರ್ಕಾರವನ್ನು ಉರುಳಿಸುತ್ತೇವೆ ಎಂದು ಹೇಳಲಾಗುತ್ತಿದೆ, ಒಂದು ವರ್ಷದಿಂದಲೂ ಇದನ್ನೇ ಹೇಳುತ್ತಿದ್ದಾರೆ, ನಿಮಗೆ ಧೈರ್ಯವಿದ್ದರೆ ಅದನ್ನು ಮಾಡಿ ತೋರಿಸಿ, ಇದು ನನ್ನ ಸವಾಲು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ದಸರಾ ರಾಲಿಯಲ್ಲಿ ಹೇಳಿದರು.

ಬಿಹಾರಕ್ಕೆ ಉಚಿತ ವ್ಯಾಕ್ಸಿನ್ ಭರವಸೆಯನ್ನು ಪ್ರಶ್ನಿಸಿದ ಉದ್ಧವ್ ದೇಶದ ಇತರ ಭಾಗವು ಪಾಕಿಸ್ತಾನ ಹಾಗೂ ಬಾಂಗ್ಲಾದೇಶಕ್ಕೆ ಸೇರಿದೆಯೇ ಎಂದು ಕಿಡಿ ಕಾರಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group