ವರದಿಗಾರ (ಅ.24): ಗಡ್ಡ ಬಿಟ್ಟ ಕಾರಣಕ್ಕೆ ಕೆಲಸದಿಂದ ಅಮಾನತುಗೊಂಡ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಇಂತಝಾರ್ ಅಲಿ ಮತ್ತೆ ಕ್ಲೀನ್ ಶೇವ್ ನೊಂದಿಗೆ ಕೆಲಸಕ್ಕೆ ಹಾಜರಾಗಿದ್ದಾರೆ.
ಗಡ್ಡ ಪೂರ್ತಿಯಾಗಿ ತೆಗೆದ ಕಾರಣದಿಂದ ಅವರನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಭಾಗ್ಪತ್ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಗಡ್ಡ ಬೋಳಿಸುವಂತೆ ಆಥವಾ ಗಡ್ಡ ಬೆಳೆಸಲು ಅನುಮತಿಯನ್ನು ಕೋರುವಂತೆ ಇಂತಝಾರ್ ಅಲಿಯವರಿಗೆ ಮೂರು ಬಾರಿ ಎಚ್ಚರಿಕೆ ನೀಡಲಾಗಿತ್ತು. ಆದರೆ ಅವರು ಅನುಮತಿಯನ್ನು ಕೋರಿಲ್ಲ ಮತ್ತು ಗಡ್ಡ ಬೆಳೆಸುವುದನ್ನು ಮುಂದುವರಿಸಿದ್ದಾರೆ ಎಂದು ಆರೋಪಿಸಲಾಗಿತ್ತು.
ಪೊಲೀಸ್ ನಿಯಮದ ಪ್ರಕಾರ ಸಿಖ್ಖರು ಮಾತ್ರವೇ ಗಡ್ಡದೊಂದಿಗೆ ಕರ್ತವ್ಯಕ್ಕೆ ಹಾಜರಾಗಬಹುದು.
