ರಾಷ್ಟ್ರೀಯ ಸುದ್ದಿ

ನಾವು ಬಿಜೆಪಿಯ ವಿರೋಧಿಗಳೇ ಹೊರತು ರಾಷ್ಟ್ರ ವಿರೋಧಿಗಳಲ್ಲ; ಗುಪ್ಕಾರ್‌ ಘೋಷಣೆಯ ಬಳಿಕ ಫಾರೂಕ್ ಅಬ್ದುಲ್ಲಾ

ವರದಿಗಾರ (ಅ.24): ಜಮ್ಮು ಮತ್ತು ಕಾಶ್ಮೀರದಲ್ಲಿ ನೂತನವಾಗಿ ಸ್ಥಾಪನೆಯಾಗಿರುವ ಪೀಪಲ್ಸ್ ಅಲಯೆನ್ಸ್ ಫಾರ್ ಗುಪ್ಕಾರ್‌ ಮೈತ್ರಿಕೂಟದ ಅಧ್ಯಕ್ಷರಾಗಿ ನ್ಯಾಷನಲ್ ಕಾನ್ಫರೆನ್ಸ್ ನ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರನ್ನು ಶನಿವಾರ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಅದೇ ರೀತಿ ಪಿಡಿಪಿಯ ವರಿಷ್ಠೆ ಮೆಹಬೂಬಾ ಮುಫ್ತಿ ಅವರನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಒಟ್ಟು ಆರು ಪಕ್ಷಗಳು ಕೂಟದಲ್ಲಿವೆ.
ಶ್ರೀನಗರದ ಮುಫ್ತಿ ಅವರ ನಿವಾಸದಲ್ಲಿ ಗುಪ್ಕಾರ್ ಘೋಷಣೆಯನ್ನು ಪೀಪಲ್ಸ್ ಅಲೈಯನ್ಸ್ ಸದಸ್ಯರ ಸಭೆಯ ನಂತರ ಘೋಷಿಸಲಾಯಿತು. ಸಭೆಯಲ್ಲಿ ಎನ್‌ಸಿ ಉಪಾಧ್ಯಕ್ಷ ಉಮರ್ ಅಬ್ದುಲ್ಲಾ ಕೂಡ ಉಪಸ್ಥಿತರಿದ್ದರು.

ಸಿಪಿಎಂ ನಾಯಕ ಮೊಹಮ್ಮದ್ ಯೂಸುಫ್ ತರಿಗಾಮಿ ಅವರನ್ನು ಸಂಚಾಲಕರನ್ನಾಗಿ, ಪೀಪಲ್ಸ್ ಕಾನ್ಫರೆನ್ಸ್ ನ ಸೈಜಾದ್ ಲೋನ್ ಅವರನ್ನು ವಕ್ತಾರರನ್ನಾಗಿ ನೇಮಿಸಲಾಗಿದೆ. ಮೈತ್ರಿಕೂಟದ ರಚನೆಯಾದ ಬಳಿಕ ಮೊದಲ ಬಾರಿಗೆ ಮೆಹಬೂಬಾ ಮುಫ್ತಿ ಅವರ ಮನೆಯಲ್ಲಿ ಸೇರಿದ ನಾಯಕರು, ಜಮ್ಮು ಮತ್ತು ಕಾಶ್ಮೀರದ ಧ್ವಜವನ್ನು ಸಾಂಕೇತಿಕವಾಗಿ ಅಂಗೀಕರಿಸಿದರು.

ಜಮ್ಮುವಿನಲ್ಲಿ ನ. 17ರಂದು ಮುಂದಿನ ಸಭೆ ನಡೆಸುವ ಕುರಿತು ಮೈತ್ರಿಕೂಟದ ಮುಖಂಡರು ನಿರ್ಧಾರ ಕೈಗೊಂಡರು.
ನಾವು ಬಿಜೆಪಿಯ ವಿರೋಧಿಗಳೇ ಹೊರತು ರಾಷ್ಟ್ರ ವಿರೋಧಿಗಳಲ್ಲ ಎಂದು ಫಾರೂಕ್ ಅಬ್ದುಲ್ಲಾ ಸಭೆಯ ನಂತರ ಹೇಳಿದರು.
ಇದು ರಾಷ್ಟ್ರ ವಿರೋಧಿ ಸಂಘಟನೆ ಅಲ್ಲ, ಜಮ್ಮು ಕಾಶ್ಮೀರ ಮತ್ತು ಲಡಾಖ್ ಜನರ ಹಕ್ಕುಗಳನ್ನು ಪುನಃಸ್ಥಾಪಿಸುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಉದ್ದೇಶ. ಧರ್ಮದ ಹೆಸರಿನಲ್ಲಿ ನಮ್ಮನ್ನು ವಿಭಜಿಸುವ ಪ್ರಯತ್ನಗಳು ವಿಫಲವಾಗುತ್ತವೆ. ಇದು ಧಾರ್ಮಿಕ ಹೋರಾಟವಲ್ಲ ಎಂದು ಅವರು ಸ್ಪಷ್ಟಪಡಿಸಿದರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group