ರಾಷ್ಟ್ರೀಯ ಸುದ್ದಿ

ಮುಂಬೈ ಪೊಲೀಸರಿಂದ ರಿಪಬ್ಲಿಕ್ ಟಿವಿ ವಿರುದ್ಧ ಎಫ್ಐಆರ್

ವರದಿಗಾರ (ಅ.24): ಮುಂಬೈ ಪೊಲೀಸರು ಶುಕ್ರವಾರ ರಿಪಬ್ಲಿಕ್ ಟಿವಿ ವಾಹಿನಿ ವಿರುದ್ಧ ಹೊಸದಾಗಿ ಎಫ್ ಐಆರ್ ದಾಖಲಿಸಿದ್ದಾರೆ.
ಮುಂಬೈ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ವಿರುದ್ಧ ಪೊಲೀಸ್ ಸಿಬ್ಬಂದಿಗಳಲ್ಲಿ ಅಸಮಾಧಾನ ಭುಗಿಲೆದ್ದಿದೆ ಎಂದು ಆರೋಪಿಸಿದ ಮತ್ತು ನಗರ ಪೊಲೀಸರ ವರ್ಚಸ್ಸಿಗೆ ಕಳಂಕ ತಂದ ಆರೋಪದಲ್ಲಿ ವಾಹಿನಿಯ ಕಾರ್ಯನಿರ್ವಾಹಕ ಸಂಪಾದಕ, ನಿರೂಪಕ, ಇಬ್ಬರು ವರದಿಗಾರರು ಮತ್ತು ಇತರ ಸಂಪಾದಕೀಯ ಸಿಬ್ಬಂದಿ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.

ರಿಪಬ್ಲಿಕ್ ಟಿವಿ ಚಾನೆಲ್ ಮತ್ತು ಅದರ ನೌಕರರ ವಿರುದ್ಧ ನಗರ ಪೊಲೀಸರು ದಾಖಲಿಸಿದ ನಾಲ್ಕನೇ ಕ್ರಿಮಿನಲ್ ಪ್ರಕರಣ ಇದಾಗಿದೆ.
ನಗರ ಪೊಲೀಸರ ಗುಪ್ತಚರ ವಿಭಾಗದ ವಿಶೇಷ ಶಾಖೆ -1 (ಎಸ್‌ಬಿ 1)ಯ ಅಧಿಕಾರಿಗಳು, ಎನ್‌ಎಂ ಜೋಶಿ ಮಾರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಅಕ್ಟೋಬರ್ 22 ರಂದು ರಿಪಬ್ಲಿಕ್ ಟಿವಿ (ಇಂಗ್ಲಿಷ್) ಚಾನೆಲ್ ಬಿಗ್ಗೆಸ್ಟ್ ಸ್ಟೋರಿ ಟುನೈಟ್ ವಿಭಾಗದ ಅಡಿಯಲ್ಲಿ ‘ಪರಮ್ ಬಿರ್ ಸಿಂಗ್ ವಿರುದ್ಧ ದಂಗೆ? ಎಂಬ ಕಾರ್ಯಕ್ರಮವೊಂದನ್ನು ಪ್ರಸಾರ ಮಾಡಿದ್ದು, ಅದರಲ್ಲಿ ಪರಮ್ ಬಿರ್ ಸಿಂಗ್ ಮುಂಬೈ ಪೊಲೀಸರ ವರ್ಚಸ್ಸಿಗೆ ಕಳಂಕ ತರುತ್ತಿದ್ದಾರೆ ಮತ್ತು ಅವರ ಆದೇಶಗಳು ಇಲಾಖೆಯ ಕಿರಿಯ ಅಧಿಕಾರಿಗಳಿಗೆ ಸ್ವೀಕಾರಾರ್ಹವಲ್ಲ ಎಂದು ಚಾನೆಲ್‌ನಲ್ಲಿ ಪ್ರಸಾರ ಮಾಡಲಾಗಿದೆ ದೂರಿನಲ್ಲಿ ತಿಳಿಸಲಾಗಿದೆ.

ಇಂತಹ ವಿಷಯವನ್ನು ಪ್ರಸಾರ ಮಾಡುವ ಮೂಲಕ, ಚಾನೆಲ್ ಮತ್ತು ಅದರ ಪತ್ರಕರ್ತರು ಉದ್ದೇಶಪೂರ್ವಕವಾಗಿ ಪೊಲೀಸ್ ಕಮಿಷನರ್ ವಿರುದ್ಧ ಪೊಲೀಸ್ ಸಿಬ್ಬಂದಿಯಲ್ಲಿ ಅಸಮಾಧಾನವನ್ನು ಸೃಷ್ಟಿಸಲು ಪ್ರಯತ್ನಿಸಿದ್ದಾರೆ ಮತ್ತು ಈ ಕ್ರಮವು ಮುಂಬೈ ಪೊಲೀಸರ ವರ್ಚಸ್ಸಿಗೆ ಧಕ್ಕೆ ತಂದಿದೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.

ರಿಪಬ್ಲಿಕ್ ಟಿವಿ ಆಂಕರ್ ಶಿವಾನಿ ಗುಪ್ತಾ, ವರದಿಗಾರ ಸಾಗ್ರಿಕಾ ಮಿತ್ರ, ವರದಿಗಾರ ಶವಾನ್ ಸೇನ್ ಮತ್ತು ಕಾರ್ಯಕ್ರಮದ ಕಾರ್ಯನಿರ್ವಾಹಕ ಸಂಪಾದಕ ನಿರಂಜನ್ ನಾರಾಯಣ್ ಸ್ವಾಮಿ ಮತ್ತು ಇತರ ಸಂಪಾದಕೀಯ ಸಿಬ್ಬಂದಿಯನ್ನು ಪೊಲೀಸರು ಎಫ್ಐಆರ್ ನಲ್ಲಿ ಹೆಸರಿಸಿದ್ದಾರೆ.
ಅವರೆಲ್ಲರ ವಿರುದ್ಧ 1922 ರ ಪೊಲೀಸ್ (ಅಸಮಾಧಾನಕ್ಕೆ ಪ್ರಚೋದನೆ) ಕಾಯ್ದೆ ಸೆಕ್ಷನ್ 3 (1) ಮತ್ತು 500 (ಮಾನಹಾನಿ) ಮತ್ತು ಭಾರತೀಯ ದಂಡ ಸಂಹಿತೆಯ 34 (ಸಾಮಾನ್ಯ ಉದ್ದೇಶ) ಆರೋಪ ಹೊರಿಸಲಾಗಿದೆ.

ಕೋಮು ಉದ್ವೇಗವನ್ನು ಉಂಟುಮಾಡಲು ಮತ್ತು ಎರಡು ಸಮುದಾಯಗಳ ನಡುವೆ ದ್ವೇಷವನ್ನು ಹರಡಿದ ಆರೋಪದಲ್ಲಿ ಅರ್ನಾಬ್ ಗೋಸ್ವಾಮಿ ವಿರುದ್ಧ ಪೈಡೋನಿ ಪೊಲೀಸ್ ಠಾಣೆ ಮತ್ತು ಎನ್ಎಂ ಜೋಶಿ ಮಾರ್ಗ ಪೊಲೀಸ್ ಠಾಣೆಯಲ್ಲಿ ಎರಡು ಎಫ್‌ಐಆರ್ ದಾಖಲಿಸಲಾಗಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group