ರಾಜ್ಯ ಸುದ್ದಿ

ಶೋಭಾಗೆ ಸಚಿವ ಸ್ಥಾನ ಸಿಗದಿರಲು ಅವರೇ ಕಾರಣರೇ?

ವರದಿಗಾರ ಬೆಂಗಳೂರು : ನಿನ್ನೆ ನಡೆದ ಕೇಂದ್ರ ಸಚಿವ ಸಂಪುಟ ವಿಸ್ತರಣೆಯಲ್ಲಿ ಕರ್ನಾಟಕ ಮೂಲದಿಂದ ಶೋಭಾ ಕರಂದ್ಲಾಜೆಯವರಿಗೆ ಸಚಿವ ಸ್ಥಾನ ಸಿಗುವ ಎಲ್ಲ ನಿರೀಕ್ಷೆಗಳಿದ್ದವು. ಇದನ್ನು ಶೋಭಾ ತಮ್ಮ ಆಪ್ತ ವಲಯಗಳಲ್ಲೂ ಹೇಳಿಕೊಂಡಿದ್ದರು. ತಾವೂ ಭರದ ಸಿದ್ಧತೆಯನ್ನು ಮಾಡಿಕೊಂಡಿದ್ದರು. ಆದರೆ ಅನಿರೀಕ್ಷಿತವೆಂಬಂತೆ ಕೊನೆ ಕ್ಷಣದಲ್ಲಿ ಅದು ಉತ್ತರ ಕನ್ನಡದ ಸಂಸದರಾಗಿರುವ ಅನಂತ್ ಕುಮಾರ್ ಹೆಗ್ಡೆಯವರ ಪಾಲಾಗಿತ್ತು. ಸಹಜವಾಗಿಯೇ ಶೋಭಾ ಇದರಿಂದಾಗಿ ಕಸಿವಿಸಿಗೊಂಡಿದ್ದೂ ಸತ್ಯ.

ಆದರೆ ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲವೆನ್ನುವಂತೆ ಕೊನೆ ಕ್ಷಣದಲ್ಲಾದ ಈ ಬದಲಾವಣೆಗೆ ಕಾರಣವೂ ಶೋಭಾಗೆ ಸಿಕ್ಕಿದೆಯಂತೆ. ಮೂಲವೊಂದರ ಪ್ರಕಾರ ಈ ಹಠಾತ್ ಬದಲಾವಣೆಗೆ ಖುದ್ದು ಶೋಭಾರವರೇ ಕಾರಣರಂತೆ!! ಅದೆಂದರೆ ಕಳೆದ ಜುಲೈ ತಿಂಗಳಲ್ಲಿ ಶೋಭಾರವರು, ಕಾಂಗ್ರೆಸ್ ಆಡಳಿತಾವಧಿಯಲ್ಲಿ ಮುಸ್ಲಿಂ ಸಂಘಟನೆಗಳಿಂದ ಹತ್ಯೆಯಾದ 23 ಹಿಂದೂ ಕಾರ್ಯಕರ್ತರ ‘ಪಟ್ಟಿ’ ಯೊಂದನ್ನು ಬಿಡುಗಡೆಗೊಳಿಸಿದ್ದರು. ಮಾತ್ರವಲ್ಲ ಅದನ್ನು ಕೇಂದ್ರ ಗೃಹ ಸಚಿವರಿಗೂ ಸಲ್ಲಿಸಿ ಆ ಮೂಲಕ ರಾಜ್ಯ ರಾಜಕೀಯದಲ್ಲಿ ತಾನೊಬ್ಬಳು ಪ್ರಭಾವಿ ಎನಿಸಿಕೊಳ್ಳುವ ತಂತ್ರಗಾರಿಕೆಯನ್ನೂ ಮಾಡಿದ್ದರು.

 

ಆದರೆ ಅವರ ಈ ಎಲ್ಲ ತಂತ್ರಗಾರಿಕೆ ವಿಫಲವಾಗಿದ್ದು, ‘Mangalore Leaks‘ ಎನ್ನುವ ಅಂತರ್ಜಾಲ ಬ್ಲಾಗ್ ಒಂದು ಶೋಭಾರವರ ಪಟ್ಟಿಯಲ್ಲಿ ಕೊಲ್ಲಲ್ಪಟ್ಟವರೆಂದು ಹೇಳಲಾದ ಎಲ್ಲಾ 23 ಜನರ ಸಂಪೂರ್ಣ ಮಾಹಿತಿಯನ್ನು ಶೋಭಾರವರು ಕೇಂದ್ರ ಸರಕಾರಕ್ಕೆ ಸಲ್ಲಿಸಿ,ಸಂಸತ್ ಭವನದೆದುರು ಪ್ರತಿಭಟನೆ ಮಾಡಿದ ಅದೇ ದಿನ ಬಿಡುಗಡೆಗೊಳಿಸಿತ್ತು.

 

Mangalore Leaks‘ ಬಿಡುಗಡೆಗೊಳಿಸಿದ ತನ್ನ ಮಾಹಿತಿಯಲ್ಲಿ ಶೋಭಾ ಪಟ್ಟಿಯಲ್ಲಿ ಕೊಲ್ಲಲ್ಪಟ್ಟಿದ್ದಾರೆಂದು ಹೇಳಿಕೊಂಡಿದ್ದ ಅಶೋಕ್ ಪೂಜಾರಿ ಎನ್ನುವ ವ್ಯಕ್ತಿ ಇನ್ನೂ ಜೀವಂತವಿದ್ದಾನೆ ಎನ್ನುವ ಆತಂಕಕಾರಿ ವಿಷಯವನ್ನೂ ಬಹಿರಂಗಗೊಳಿಸಿತ್ತು. ಶೋಭಾರವರ ಪಟ್ಟಿಯಲ್ಲಿ ಕೌಟುಂಬಿಕ ಕಲಹಗಳಿಂದ, ರಸ್ತೆ ಅಪಘಾತಗಳಿಂದ ಮೃತರಾದವರೆಲ್ಲರೂ ಸೇರಿದ್ದರು. ನಂತರ ಇದು ರಾಜ್ಯದ ಎಲ್ಲಾ ದೃಶ್ಯ ಮಾಧ್ಯಮಗಳಲ್ಲಿ ಬಹುದೊಡ್ಡ ಸುದ್ದಿಯಾಗಿ, ರಾಜ್ಯ ಬಿಜೆಪಿ ನಾಯಕರು ಮಾಧ್ಯಮಗಳನ್ನೆದುರಿಸಲು ಹರಸಾಹಸಪಡುವಂತಾಗಿತ್ತು. ಖುದ್ದು ಮೋದಿಯವರೂ ಶೋಭಾರವರ ಈ ರೀತಿಯ ಬೇಜವಬ್ದಾರಿತನಕ್ಕೆ ಗರಂ ಆಗಿದ್ದರು. ಕೇಂದ್ರ ಸಚಿವರಾದಂತಹಾ ರಾಜ್’ನಾಥ್ ಸಿಂಗ್, ಅನಂತಕುಮಾರ್ ಮತ್ತು ಸದಾನಂದ ಗೌಡರವರು ಈ ಕುರಿತು ಅಮಿತ್ ಶಾರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆಂದು ತಿಳಿದುಬಂದಿದೆ. ಇನ್ನೊಂದು ಮೂಲದ ಮಾಹಿತಿಯ ಪ್ರಕಾರ ಸದ್ಯಕ್ಕೆ ಕೇಂದ್ರ ಮಂತ್ರಿಯಾಗಿರುವ ಸದಾನಂದ ಗೌಡರ ಒಕ್ಕಲಿಗ ಸಮುದಾಯಕ್ಕೆ ಸೇರಿರುವ ಶೋಭಾಗೆ ಸಚಿವ ಸ್ಥಾನ ಸಿಗದಿರಲು ಜಾತಿ ಲೆಕ್ಕಾಚಾರಗಳೂ ಕಾರಣವೆನ್ನಲಾಗಿದೆ.

 

ಒಟ್ಟಿನಲ್ಲಿ ಶೋಭಾರವರ ಬಿಜೆಪಿ ನಾಯಕರಿಗೆ ಮುಜುಗರ ತರಿಸುವಂತಹಾ ಹೇಳಿಕೆಗಳು ಮತ್ತು ಕೆಲವೊಂದು ಬೇಜವಬ್ದಾರಿಯುತ ನಡೆಗಳು ಅವರಿಗೆ ಸಿಗಬೇಕಾಗಿದ್ದ ಕೇಂದ್ರ ಸಚಿವ ಸ್ಥಾನ ತಪ್ಪಿಸಿದೆ ಎಂದು ಬಿಜೆಪಿ ಮೂಲಗಳ ಅಭಿಪ್ರಾಯವಾಗಿದ್ದು, ನೈಜ ಕಾರಣಗಳು ಮುಂದಿನ ದಿನಗಳಲ್ಲಿ ಹೊರಬರುವುದೇ ಕಾದು ನೋಡಬೇಕಾಗಿದೆ

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group