ರಾಷ್ಟ್ರೀಯ ಸುದ್ದಿ

ದೇಶದಲ್ಲಿ ಪ್ರಜಾಪ್ರಭುತ್ವ ಅತ್ಯಂತ ಸಂಕಷ್ಟದಲ್ಲಿದೆ: ಸೋನಿಯಾ ಗಾಂಧಿ

ವರದಿಗಾರ (ಅ.18) ಇಂದು ದೇಶದಲ್ಲಿ ಪ್ರಜಾಪ್ರಭುತ್ವ ಅತ್ಯಂತ ಕಷ್ಟದ ಸಮಯಗಳನ್ನು ದಾಟುತ್ತಿದೆ. ಕೆಲ ಕೈಗಾರಿಕೋದ್ಯಮಿಗಳ ಕೈಗೆ ನಾಗರಿಕರ ಹಿತಾಸಕ್ತಿಗಳನ್ನು ಇಡಲು ಬಯಸುವ ಸರ್ಕಾರ ದೇಶವನ್ನು ಆಳುತ್ತಿದೆ. ಬಡವರು ಮತ್ತು ದೀನದಲಿತರ ವಿರುದ್ಧ ಸರ್ಕಾರ ನಡೆಸಿದ ಪಿತೂರಿಯನ್ನು ವಿಫಲಗೊಳಿಸಲು ಒಟ್ಟಾಗಿ ಕೆಲಸ ಮಾಡುವುದು ನಮ್ಮ ಕರ್ತವ್ಯ ಎಂದು ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಹೇಳಿದ್ದಾರೆ
ಹೊಸದಾಗಿ ನೇಮಕಗೊಂಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಮತ್ತು ರಾಜ್ಯಗಳ ಉಸ್ತುವಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಸೋನಿಯಾಗಾಂಧಿ, ಭಾರತೀಯ ಪ್ರಜಾಪ್ರಭುತ್ವ ತುಂಬಾ ಕಠಿಣ ಸಮಯದಲ್ಲಿ ಸಾಗುತ್ತಿದೆ, ದೇಶದ ಎದುರಿರುವ ವಿವಿಧ ಸವಾಲುಗಳನ್ನು ಎದುರಿಸುವಂತೆ ಮತ್ತು ಬಿಜೆಪಿ ಸರ್ಕಾರದ ಪ್ರಜಾಪ್ರಭುತ್ವ ಮತ್ತು ರಾಷ್ಟ್ರೀಯ ವಿರೋಧಿ ಉದ್ದೇಶಗಳು ಯಶಸ್ವಿಯಾಗದಂತೆ ತಡೆಯುವ ಕೆಲಸ ಮಾಡಬೇಕು ಎಂದು ಪಕ್ಷದ ನಾಯಕರಿಗೆ ಕರೆ ನೀಡಿದ್ದಾರೆ.
ದೇಶ ಎದುರಿಸುತ್ತಿರುವ ಸವಾಲುಗಳನ್ನು ಎದುರಿಸಲು ನೀವೆಲ್ಲರೂ ಶ್ರಮಿಸುತ್ತೀರಿ ಮತ್ತು ಬಿಜೆಪಿ ಸರ್ಕಾರ ತನ್ನ ಪ್ರಜಾಪ್ರಭುತ್ವ ವಿರೋಧಿ ಮತ್ತು ರಾಷ್ಟ್ರೀಯ ವಿರೋಧಿ ಉದ್ದೇಶಗಳು ಯಶಸ್ವಿಯಾಗಲು ನೀವು ಬಿಡುವುದಿಲ್ಲ ಎಂದು ಬಗ್ಗೆ ನನಗೆ ವಿಶ್ವಾಸವಿದೆ ಎಂದು ಸೋನಿಯಾಗಾಂಧಿ ಹೇಳಿದ್ದಾರೆ.
ದಲಿತರ ಮೇಲಿನ ದಾಳಿ ಮತ್ತು ಮಹಿಳೆಯರ ಮೇಲಿನ ಅಪರಾಧಗಳ ಬಗ್ಗೆ ಸರ್ಕಾರವನ್ನು ದೂಷಿಸಿದ ಅವರು, ದಲಿತ ಸಹೋದರ- ಸಹೋದರಿಯರು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ನಮ್ಮ ಹೆಣ್ಣುಮಕ್ಕಳಿಗೆ ರಕ್ಷಣೆ ನೀಡುವ ಬದಲು ಬಿಜೆಪಿ ಸರ್ಕಾರಗಳು ಅಪರಾಧಿಗಳನ್ನು ರಕ್ಷಿಸುತ್ತಿವೆ. ಸಂತ್ರಸ್ತರ ಕುಟುಂಬಗಳ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಇದು ಯಾವ ರೀತಿಯ ‘ರಾಜ ಧರ್ಮ’ ? ಎಂದು ಅವರು ಪ್ರಶ್ನಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group