ರಾಷ್ಟ್ರೀಯ ಸುದ್ದಿ

ಅಸ್ತಿತ್ವದಲ್ಲೇ ಇಲ್ಲದ “ಮುಸ್ಲಿಂ ರೆಜಿಮೆಂಟ್” ಹೆಸರಿನಲ್ಲಿ ಸುಳ್ಳು ಸುದ್ದಿ: ಕ್ರಮಕ್ಕೆ ಒತ್ತಾಯಿಸಿ ಸೇನಾಧಿಕಾರಿಗಳಿಂದ ರಾಷ್ಟ್ರಪತಿಗೆ ಪತ್ರ

ವರದಿಗಾರ (ಅ.15) ಅಸ್ತಿತ್ವದಲ್ಲೇ ಇರದಿದ್ದ ಭಾರತೀಯ “ ಮುಸ್ಲಿಂ ರೆಜಿಮೆಂಟ್” ,1965ರಲ್ಲಿ ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಲು ನಿರಾಕರಿಸಿತ್ತು ಎಂಬ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಭಾರತೀಯ ಸಶಸ್ತ್ರ ಪಡೆಗಳ 120 ಯೋಧರು, ವಿವಿಧ ಶ್ರೇಣಿಗಳ ಸೇನಾಧಿಕಾರಿಗಳು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿದ್ದಾರೆ.

2013, ಮೇ ತಿಂಗಳಲ್ಲಿ ಈ ಸುಳ್ಳು ಸುದ್ದಿ ಹರಿಯಬಿಡಲಾಗಿದೆ. “ವರ್ಲ್ಡ್ ಹಿಂದೂಸ್ ಯುನೈಟೆಡ್” ಎಂಬ ಟ್ವಿಟ್ಟರ್ ಅಕೌಂಟ್ ನಲ್ಲಿ ಈ ಸುದ್ದಿ ಹಬ್ಬಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ ಎಂದು “ದಿ ವೈರ್” ವರದಿ ಮಾಡಿದೆ.

ಮುಸ್ಲಿಂ ಸೈನಿಕರು ಭಾರತಕ್ಕಿಂತ ಪಾಕಿಸ್ತಾನಕ್ಕೆ ತಮ್ಮ ನಿಷ್ಠೆಯನ್ನು ಹೊಂದಿದ್ದಾರೆಂದು ತೋರಿಸಲು ಈ ಟ್ವೀಟ್ ಮೂಲಕ ಪ್ರಯತ್ನಿಸಲಾಗಿದೆ. ‘ಮುಸ್ಲಿಂ ರೆಜಿಮೆಂಟ್’ ಎಂಬ ಹೆಸರಿನಲ್ಲಿಯೂ ಮರು ಟ್ವೀಟ್ ಮಾಡಲಾಗಿದೆ. ಚೀನಾ ಸೈನಿಕರು ಭಾರತದ ಗಡಿಯಲ್ಲಿ ಆಕ್ರಮಣ ನಡೆಸಿದ ಸಮಯದಲ್ಲಿ ಈ ನಕಲಿ ಟ್ವೀಟ್ ನ ಸತ್ಯಾಸತ್ಯಗೆ ಬಹಿರಂಗವಾಗಿದೆ, ಈ ಸುಳ್ಳನ್ನು ರಿಟ್ವೀಟ್ ಮಾಡಿದ ನೂರಾರು ಜನರಲ್ಲಿ 18 ಖಾತೆಗಳು ಕೂಡ ನಕಲಿಯಾಗಿವೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

“ಈ” ಮುಸ್ಲಿಂ ರೆಜಿಮೆಂಟ್ ” ಎಂಬುದೇ ಸುಳ್ಳು. ಏಕೆಂದರೆ ಭಾರತೀಯ ಸೈನ್ಯದಲ್ಲಿ 1965 ರಲ್ಲಿ ಅಥವಾ ಅದರ ನಂತರ ಮುಸ್ಲಿಂ ರೆಜಿಮೆಂಟ್ ಎಂಬುದು ಇಲ್ಲವೇ ಇಲ್ಲ ಎಂದು ಹಿರಿಯ ಸೇನಾಧಿಕಾರಿಗಳು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

ಭಾರತೀಯ ಸೇನೆಯ ವಿವಿಧ ವಿಭಾಗಗಳಲ್ಲಿ ಇರುವ ಮುಸ್ಲಿಂ ಸೈನಿಕರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿ ತಮ್ಮ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ. ಮಾಸ್ಟರ್ ಹವಿಲ್ದಾರ್ ಅಬ್ದುಲ್ ಹಮೀದ್ ಅವರಂತಹ ವೀರ ಯೋಧರು ಪ್ರಾಣ ಬಲಿದಾನ ಮಾಡಿದ್ದಾರೆ ಎಂದು ಲೆಫ್ಟಿನೆಮಟ್ ಜನರಲ್ ಸಯ್ಯದ್ ಅತಾ ಹಸನೈನ್ ತಿಳಿಸಿದ್ದಾರೆ. ಈ ಸುಳ್ಳು ಸುದ್ದಿ, ಭಾರತದ ಸೈನಿಕರ ಸ್ಥೈರ್ಯವನ್ನು ಕುಗ್ಗಿಸಿ, ಶತ್ರುಗಳಿಗೆ ಸಹಾಯ ಮಾಡುವ ಪ್ರಯತ್ನ ಎಂದು ಪತ್ರದಲ್ಲಿ ಸೇನಾಧಿಕಾರಿಗಳು ತಿಳಿಸಿದ್ದಾರೆ

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group